ʼಕಪ್ಪು ಚುಕ್ಕೆʼಯಿಂದ ಬೆತ್ತಲಾದ ʼವೈಟ್ನರ್ ರಾಮಯ್ಯʼ: ಜೆಡಿಎಸ್ ವ್ಯಂಗ್ಯ
ಮುಡಾ ಹಗರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಪ್ರತಿಪಕ್ಷಗಳು ಅವರ ವಿರುದ್ಧ ಮುಗಿಬಿದ್ದಿವೆ. ಬಿಜೆಪಿ ಜತೆ ಇದೀಗ ಎನ್ಡಿಎ ಮಿತ್ರಪಕ್ಷ ಜೆಡಿಎಸ್ ಕೂಡ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ.;
ಮುಡಾ ಹಗರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಎಂ ಸಿದ್ದರಾಮಯ್ಯ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಪ್ರತಿಪಕ್ಷಗಳು ಅವರ ವಿರುದ್ಧ ಮುಗಿಬಿದ್ದಿವೆ. ಬಿಜೆಪಿ ಜತೆ ಇದೀಗ ಎನ್ಡಿಎ ಮಿತ್ರಪಕ್ಷ ಜೆಡಿಎಸ್ ಕೂಡ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ.
ʼಕಪ್ಪು ಚುಕ್ಕೆʼಯಿಂದ ಬೆತ್ತಲಾದ ʼವೈಟ್ನರ್ ರಾಮಯ್ಯʼ ಎಂದು ಜೆಡಿಎಸ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದೆ.
‘ಮುಡಾದಲ್ಲಿ ಹಗರಣ ನಡೆದೇ ಇಲ್ಲ, ನನ್ನ ಮೇಲೆ ಕಪ್ಪು ಚುಕ್ಕು ಇಲ್ಲ ಎಂದು ಸ್ವಯಂ ಸರ್ಟಿಫಿಕೇಟ್ ಪಡೆದಿದ್ದ ಸಿದ್ದರಾಮಯ್ಯ ಅವರೇ, ನಿಮಗೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಉಳಿದಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಗೌರವ ಉಳಿಸಿಕೊಳ್ಳಿ’ ಎಂದು ಜೆಡಿಎಸ್ ಆಗ್ರಹಿಸಿದೆ.
ಮುಡಾ ಹಗರಣ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಸಿಎಂ ವಿರುದ್ಧದ ಆರೋಪಗಳ ತನಿಖೆ ಅಗತ್ಯ ಎಂದಿದೆ. ಸಿಎಂ ಪತ್ನಿಯೇ ಫಲಾನುಭವಿಯಾಗಿರುವುದರಿಂದ ತನಿಖೆ ಅಗತ್ಯ ಎಂದು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.