ವೈಟ್ ಟಾಪಿಂಗ್ ಕಾಮಗಾರಿ, ಪಣತ್ತೂರು-ಬಳಗೆರೆ ರಸ್ತೆ 5 ದಿನ ಬಂದ್
ಈ ಸಂಚಾರ ನಿರ್ಬಂಧವು ಆಗಸ್ಟ್ 6, ಬುಧವಾರ ರಾತ್ರಿ 11 ಗಂಟೆಯಿಂದ ಆಗಸ್ಟ್ 10, ಭಾನುವಾರ ರಾತ್ರಿ 11 ಗಂಟೆಯವರೆಗೆ ಜಾರಿಯಲ್ಲಿರಲಿದೆ;
ನಗರದ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ಕಾರಣ, ಪಣತ್ತೂರು ರೈಲ್ವೆ ಸೇತುವೆಯಿಂದ ಬಳಗೆರೆ ಟಿ-ಜಂಕ್ಷನ್‌ವರೆಗಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಈ ಸಂಚಾರ ನಿರ್ಬಂಧವು ಆಗಸ್ಟ್ 6, ಬುಧವಾರ ರಾತ್ರಿ 11 ಗಂಟೆಯಿಂದ ಆಗಸ್ಟ್ 10, ಭಾನುವಾರ ರಾತ್ರಿ 11 ಗಂಟೆಯವರೆಗೆ ಜಾರಿಯಲ್ಲಿರಲಿದೆಎಂದು ಸಂಚಾರ ವಿಭಾಗದ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಪ್ರಕಟಿಸಿದ್ದಾರೆ.
ಪರ್ಯಾಯ ಮಾರ್ಗಗಳು
ಸಂಚಾರ ನಿರ್ಬಂಧದಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಲು, ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ:
ಪಣತ್ತೂರಿನಿಂದ ಬಳಗೆರೆ ಕಡೆಗೆ: ಪಣತ್ತೂರಿನಿಂದ ಬಳಗೆರೆ ಅಥವಾ ವರ್ತೂರು ಕಡೆಗೆ ಹೋಗುವ ವಾಹನಗಳು ಪಣತ್ತೂರು ದಿಣ್ಣೆ ರಸ್ತೆಯ ಮೂಲಕ ಚಲಿಸಿ, ಅಲ್ಲಿಂದ ಎಡ ತಿರುವು ಪಡೆದು, ಸಿಲ್ವರ್ ಓಕ್ ರಸ್ತೆ ಮೂಲಕ ಬಳಗೆರೆ, ವಿಬ್ಗಯಾರ್ ರಸ್ತೆ ಮತ್ತು ವರ್ತೂರಿಗೆ ತಲುಪಬಹುದು.
ಬಳಗೆರೆಯಿಂದ ಪಣತ್ತೂರು ಕಡೆಗೆ: ಬಳಗೆರೆ ಟಿ-ಜಂಕ್ಷನ್‌ನಿಂದ ಪಣತ್ತೂರು ಕಡೆಗೆ ಹೋಗುವ ವಾಹನಗಳು ಪಣತ್ತೂರು ದಿಣ್ಣೆ ರಸ್ತೆ, ವಿಬ್ಗಯಾರ್ ರಸ್ತೆ, ಮತ್ತು ಮಾರತ್ತಹಳ್ಳಿ ಸೇತುವೆಯ ಮೂಲಕ ಪಣತ್ತೂರನ್ನು ತಲುಪಬಹುದು.
ಸಂಚಾರ ಪೊಲೀಸರು, ಈ ತಾತ್ಕಾಲಿಕ ಅನಾನುಕೂಲತೆಗಾಗಿ ಕ್ಷಮೆ ಕೋರಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.