Waqf Assets Dispute | ರೈತರು ದಂಗೆ ಎದ್ದರೆ ಸರ್ಕಾರ ಉಳಿಯದು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್

ರಾಜ್ಯದಲ್ಲಿ ರೈತರು ದಂಗೆ ಏಳುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ್ಯ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

Update: 2024-11-12 11:55 GMT
ಕೋಡಿಹಳ್ಳಿ ಚಂದ್ರಶೇಖರ್
Click the Play button to listen to article

ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿವಾದ‌ ಮುಂದುವರಿದರೆ ಸರ್ಕಾರ ಇರಲ್ಲ, ಕೂಡಲೇ ವಕ್ಫ್ ಬೋರ್ಡ್ ಗೆ ಜಮೀನು ವರ್ಗಾವಣೆ ಮಾಡುವ ಕ್ರಮವನ್ನು ಸರ್ಕಾರ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ರೈತರು ದಂಗೆ ಏಳುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ್ಯ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆಸ್ತಿಗಳನ್ನು ವಕ್ಫ್ ಬೋರ್ಡ್ ಕಬಳಿಕೆ ಮಾಡುತ್ತಿದೆ. ವಕ್ಫ್ ವಿಚಾರವಾಗಿ ರಾಜಕೀಯ ಮಾಡಲು ಎರಡು ಪಕ್ಷಗಳು ಪ್ರಯತ್ನಿಸುತ್ತಿದೆ. 2015 ರಲ್ಲಿ ಮೊಕಾಶಿ ಟ್ರಸ್ಟ್ ಗೂ ರೈತರ ಜಮೀನು ವರ್ಗಾವಣೆಯಾಗಿದೆ. ವಕ್ಪ್ ಬೋರ್ಡ್ ಹೆಸರಲ್ಲಿ ಬೇರೆ ಟ್ರಸ್ಟ್ ಗು ಜಮೀನು ವರ್ಗಾವಣೆ ಆಗಿದೆ. 2015 ರಲ್ಲೂ ರೈತರ ಆಸ್ತಿ ಕಬಳಿಕೆ ಆಗಿದೆ. ಅದಕ್ಕೆ ಸಿಎಂ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ವಕ್ಪ್ ಬೋರ್ಡ್ ಹೆಸರಲ್ಲಿ ನಡೆಯುತ್ತಿರುವ ಡೀಲಿಂಗ್ ನಿಲ್ಲಬೇಕು, ಹಾವೇರಿಯಲ್ಲಿ ರೈತನಿಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ. ಖಾಸಗಿ ವ್ಯಕ್ತಿಯ ಟ್ರಸ್ಟ್ ಗೆ ನೀಡುರುವ ಜಮೀನನ್ನು ವಾಪಾಸ್ ನಾವೂ ಕಬ್ಜ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. 

Tags:    

Similar News