ತುಂಗಾ ನದಿ ಸೇತುವೆ ಮೇಲೆ ಚಲಿಸುತ್ತಿರುವಾಗಲೇ ಬೇರ್ಪಟ್ಟ ರೈಲು ಎಂಜಿನ್, ಬೋಗಿಗಳು
ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೋಗಿ ಜೋಡಣೆ ಮಾಡಿ ಸಮಸ್ಯೆ ಬಗೆಹರಿಸಿದ್ದು, ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.;
By : The Federal
Update: 2025-08-06 14:56 GMT
ರೈಲ್ವೆ ಇಂಜಿನ್‌ನಿಂದ ಬೇರ್ಪಟ್ಟಿರುವ ಬೋಗಿಗಳು
ತಾಳಗುಪ್ಪದಿಂದ ಮೈಸೂರಿಗೆ ಹೊರಟಿದ್ದ ರೈಲು ಚಲಿಸುವಾಗಲೇ ಎಂಜಿನ್ ಮತ್ತು ಬೋಗಿ ಸಂಪರ್ಕ ಕಳೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ನಗರದೊಳಗೆ ಇರುವ ತುಂಗಾ ಸೇತುವೆ ಮೇಲೆ ಬುಧವಾರ ಸಂಜೆ 5 ಗಂಟೆಗೆ ಘಟನೆ ನಡೆದಿದ್ದು, ಎಂಜಿನ್ ಇಲ್ಲದೇ ಬೋಗಿಗಳು ಚಲಿಸಿವೆ. ಇದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಗಾಬರಿಗೊಂಡಿದ್ದಾರೆ.
ಮೈಸೂರು ಕಡೆಗೆ ಹೊರಟಿದ್ದ ರೈಲು ತುಂಗಾ ನದಿಯ ರೈಲ್ವೆ ಸೇತುವೆ ಬಳಿ ಬಂದಾಗ ಎಂಜಿನ್‌ನಿಂದ 8 ನೇ ಬೋಗಿ ಕಳಚಿಕೊಂಡಿತ್ತು. ತಕ್ಷಣವೇ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋಗಿ ಜೋಡಣೆ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.