ಬೆಂಗಳೂರಿನಲ್ಲೊಂದು ʼಶ್ರದ್ಧಾ ವಾಕರ್ʼ ಘಟನೆ | ಯುವತಿ ದೇಹ ತುಂಡು- ತುಂಡಾಗಿ ಫ್ರಿಡ್ಜ್ನಲ್ಲಿ ಪತ್ತೆ!
ಯುವತಿಯನ್ನು ಕೊಲೆಗೈದು 30 ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಜ್‌ನಲ್ಲಿ ಇಟ್ಟಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ನಡೆದಿದೆ.;
ಯುವತಿಯನ್ನು ಕೊಲೆಗೈದು 30 ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಜ್‌ನಲ್ಲಿ ಇಟ್ಟ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ನಡೆದಿದೆ.
ಯುವತಿಯನ್ನು ಕೊಲೆ ಮಾಡಿದ್ದಲ್ಲದೇ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ಅಕ್ಕಪಕ್ಕದವರು ಶನಿವಾರ ಆ ಯುವತಿಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಕೊಲೆಯಾದ ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದು ಬೀಗ ಒಡೆದು ಪರಿಶೀಲಿಸಿದಾಗ ಯುವತಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಮೇಲ್ನೋಟಕ್ಕೆ ಹೊರ ರಾಜ್ಯದ ಸುಮಾರು 25 ರಿಂದ 26 ವಯಸ್ಸಿನ ಯುವತಿ ಎಂದು ಗುರುತಿಸಲಾಗಿದ್ದು, ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ಹತ್ಯೆ ಮಾಡಲಾಗಿದೆ. ಸದ್ಯ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ, ‘ಒರ್ವನೇ ಕೊಲೆ ಮಾಡಿದ್ದು, 30ಕ್ಕೂ ಹೆಚ್ಚು ಪೀಸ್ ಮಾಡಿ ಸಿಂಗಲ್ ಡೋರ್ನ 165 ಲೀಟರ್ಸ್ ಫ್ರೀಡ್ಜ್ನಲ್ಲಿ ಬಾಡಿ ಇಡಲಾಗಿದೆ. ಮೃತ ಯುವತಿಯನ್ನು ಛತ್ತೀಸ್ಗಢ ಅಥವಾ ಪಶ್ಚಿಮ ಬಂಗಾಳ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಮೂಲತಃ ಬೇರೆ ರಾಜ್ಯದವರಾದರೂ ಅವರು ಇಲ್ಲಿಯೇ ವಾಸವಾಗಿದ್ದರು. ಗಂಡನಿಂದ ಬೇರೆಯಾಗಿದ್ದ ಮಹಿಳೆ, ಏಕಾಂಗಿಯಾಗಿ ವಾಸವಾಗಿದ್ದಳು ಎಂದು ಮಾಹಿತಿ ಸಿಕ್ಕಿದೆʼ ಎಂದು ಹೇಳಿದ್ದಾರೆ.