ಅಭಿವೃದ್ಧಿ ಬಗ್ಗೆ ಮಾತನಾಡಿದ್ದೆ , ಆದರೆ ಸಿಎಂ ಹುದ್ದೆ ಕುರಿತಲ್ಲ: ಡಿಸಿಎಂ ಬೇಸರ
ನಾನು ಕನಕಪುರ ಶಾಲಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದರೆ , ಮಾಧ್ಯಮಗಳು ಸಿಎಂ ಹುದ್ದೆ ವಿಚಾರ ಎಂದು ತಿರುಚಿವೆ;
By : The Federal
Update: 2024-09-30 14:15 GMT
ʼನಾನು ಕನಕಪುರದ ಶಾಲಾ ಕಾರ್ಯಕ್ರಮದಲ್ಲಿ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದೇನೆ ಹೊರತು ಸಿಎಂ ಹುದ್ದೆ ಬಗ್ಗೆ ಅಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದರು.
ಚನ್ನಪಟ್ಟಣದ ಕೆಂಗಲ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಸೋಮವಾರ ಪ್ರತಿಕ್ರಿಯೆ ನೀಡಿದ ಅವರು, "ನಾನು ಕನಕಪುರ ಶಾಲಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದರೆ , ಮಾಧ್ಯಮಗಳು ಸಿಎಂ ಹುದ್ದೆ ವಿಚಾರ ಎಂದು ತಿರುಚಿವೆ. ಶಾಲಾ ಕಟ್ಟಡ ನಿರ್ಮಾಣ ಅಭಿವೃದ್ಧಿ ಅಲ್ಲವೇ? ನಾನು 40 ವರ್ಷದ ರಾಜಕಾರಣ ಮಾಡಿದ್ದೇನೆ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಿ ಗೊಂದಲ ಸೃಷ್ಟಿ ಮಾಡಲಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.