ರೀಲ್ಸ್ ರಾಣಿ, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರನ್ನು ಮಗು ದತ್ತು ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಚೈಲ್ಡ್ ವೇಲ್ ಫೇರ್ ಕಮಿಟಿ ಅಧಿಕಾರಿಗಳು ಬ್ಯಾಡರಹಳ್ಳಿ ದೂರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅಂದ್ರಹಳ್ಳಿ ನಿವಾಸದಲ್ಲಿ ಶುಕ್ರವಾರ ಮುಂಜಾನೆ ಸೋನು ಗೌಡರನ್ನು ಪೊಲೀಸರು ಬಂಧಿಸಿದ್ದಾರೆ.
ಸೋನು ಗೌಡ ಅವರಿಗೆ ವಯಸ್ಸಿನ ಮಾನದಂಡದ ಪ್ರಕಾರ ಮಕ್ಕಳನ್ನ ದತ್ತು ಪಡೆಯುವ ಅರ್ಹತೆ ಇಲ್ಲ. ಜೊತೆಗೆ ಹೆಣ್ಣು ಮಗು ಆಗಿದ್ರು ತನ್ನ ಸೋಶಿಯಲ್ ಮೀಡಿಯಾದಲ್ಲಿ ಮಗುವನ್ನು ದತ್ತು ಪಡೆದಿರೋದಾಗಿ ಪ್ರಚಾರ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಮೂಲದ ಎಂಟು ವರ್ಷದ ಬಾಲಕಿಯನ್ನು ದತ್ತು ಪಡೆದಿರುವುದಾಗಿ ಸೋನು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ. ದತ್ತು ಪಡೆದಿರುವ ಹೆಣ್ಣುಮಗುವನ್ನು ಪ್ರಚಾರಕ್ಕೆ ಬಳಸಿಕೊಂಡಿರುವುದು ತಪ್ಪು. ದತ್ತು ಪಡೆಯಲು ಅನುಸರಿಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪದ ಮೇಲೆ ದೂರು ದಾಖಲಾಗಿದೆ.
ಸದ್ಯ ಸೋನು ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಕೇಸ್ ನಲ್ಲಿ ಸೋನು ಜೈಲು ಸೇರುವ ಸಾಧ್ಯತೆ ಕೂಡ ಇದೆ.