BMTC-KSRTC | ಶಕ್ತಿ ಯೋಜನೆ ಯಶಸ್ವಿ; ಶಕ್ತಿ ಕಳೆದುಕೊಂಡ ಸಾರಿಗೆ ನಿಗಮಗಳು!

ರಾಜ್ಯದಲ್ಲಿ125 ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಪೈಕಿ 16 ಉದ್ದಿಮೆಗಳು ಬಾಗಿಲು ಮುಚ್ಚಿವೆ. 34 ಉದ್ಯಮಗಳು ನಷ್ಟದಲ್ಲಿವೆ. , ಬಿಎಂಟಿಸಿ, ಕೆಎಸ್ಆರ್‌ಟಿಸಿ ಜೊತೆಗೆ ಐದು ವಿದ್ಯುತ್ ಸರಬರಾಜು ಕಂಪನಿಗಳು ಕೂಡ ನಷ್ಟದಲ್ಲಿವೆ.;

Update: 2025-03-11 11:08 GMT

ಕೆಎಸ್ಆರ್​ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ 'ಶಕ್ತಿ' ಯೋಜನೆ ಕರ್ನಾಟಕದಲ್ಲಿ ಭರ್ಜರಿ ಯಶಸ್ವು ಕಂಡಿದೆ. ಈ ಯೋಜನೆ ಬಗ್ಗೆ ಜನ ಸಮುದಾಯದೊಳಗೆ ಹೊಗಳಿಕೆ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಯೋಜನೆಯಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಒಳಗಾಗಿವೆಯೇ ಎಂಬ ಪ್ರಶ್ನೆ ಎದುರಾಗಿದೆ. ಸರ್ಕಾರವೇ ನಿಗಮಗಳು ನಷ್ಟದಲ್ಲಿವೆ ಎಂಬುದನ್ನು ಒಪ್ಪಿಕೊಂಡಿದೆ.  

ಮಂಗಳವಾರ ವಿಧಾನ ಪರಿಷತ್ ಕಲಾಪದಲ್ಲಿ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಹಾಗೂ ಕೆ.ಎಸ್.ನವೀನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಬಿಎಂಟಿಸಿ, ಕೆಎಸ್ಆರ್​ಟಿಸಿ, ಎನ್​ಡಬ್ಲ್ಯುಕೆಎಸ್​ಆರ್​ಟಿಸಿ ಹಾಗೂ ಕೆಕೆಆರ್​​ಟಿಸಿ ನಿಗಮಗಳು ನಷ್ಟದಲ್ಲಿವೆ ಎಂದು ಒಪ್ಪಿಕೊಂಡಿದೆ. ಇದು ಸೇರಿದಂತೆ  ಒಟ್ಟು 34 ಸಾರ್ವಜನಿಕ ಉದ್ದಿಮೆಗಳು ನಷ್ಟಕ್ಕೆ ಸಿಲುಕಿವೆ ಎಂದು ಹೇಳಿದೆ 

ರಾಜ್ಯದಲ್ಲಿ125 ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಪೈಕಿ 16 ಉದ್ದಿಮೆಗಳು ಬಾಗಿಲು ಮುಚ್ಚಿವೆ. 34 ಉದ್ಯಮಗಳು ನಷ್ಟದಲ್ಲಿವೆ.  ಇದರಲ್ಲಿ ಐದು ವಿದ್ಯುತ್ ಸರಬರಾಜು ಕಂಪನಿಗಳೂ ಸೇರಿವೆ. 

ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ ಒಟ್ಟು 7950 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ಪರಿಣಾಮ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿವೆ. ನೌಕರರಿಗೆ ಸರಿಯಾದ ವೇತನ ನೀಡುವುದೂ ಕಷ್ಟವಾಗಿತ್ತು. ಈಚೆಗೆ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. 

ಉಪನಗರ ರೈಲು ಬಂದ್

ಬೆಂಗಳೂರು ಉಪನಗರ ರೈಲು, ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕ ನಿಗಮ ಕೂಡ ಬಂದ್‌ ಆಗಿವೆ. ಮೂರು ವರ್ಷದ ಹಿಂದೆ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಉಪನಗರ ರೈಲು ಸೇವೆ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಈಗ ಆರ್ಥಿಕ ನಷ್ಟದ ಸುಳಿಗೆ ಸಿಲುಕಿ ಬಂದ್‌ ಆಗಿದೆ. ರಾಜ್ಯದಲ್ಲಿ ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಕುರಿತು ಮೌಲ್ಯಮಾಪನ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. 

Tags:    

Similar News