ಬೆಂಗಳೂರಿನಲ್ಲಿ ಇಂದು ʼಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿ

ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ವತಿಯಿಂದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ಕುರಿತ ವಿಚಾರಗೋಷ್ಠಿಯನ್ನು ಇಂದು (ಆಗಸ್ಟ್ 18) ಮಧ್ಯಾಹ್ನ 3.30ಕ್ಕೆ ನಗರದ ಟೌನ್ ಹಾಲ್​ನಲ್ಲಿ ಹಮ್ಮಿಕೊಳ್ಳಲಾಗಿದೆ.;

Update: 2025-08-18 05:13 GMT

ವಿಚಾರಗೋಷ್ಟಿಯ ಆಮಂತ್ರಣ ಪತ್ರ

ಸೋಮವಾರ (ಆಗಸ್ಟ್ 18) ಮಧ್ಯಾಹ್ನ 3.30ಕ್ಕೆ ಬೆಂಗಳೂರಿನ ಟೌನ್ ಹಾಲ್​​ನಲ್ಲಿ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ಎಂಬ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಈ ವಿಚಾರಗೋಷ್ಠಿಯಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು, ಪತ್ರಕರ್ತರು, ಚಿಂತಕರು, ಮತ್ತು ಬರಹಗಾರರು ಭಾಗವಹಿಸಲಿದ್ದಾರೆ.

ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿಯ ವತಿಯಿಂದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ಕುರಿತ ವಿಚಾರಗೋಷ್ಠಿಯನ್ನು ಇಂದು (ಆಗಸ್ಟ್ 18) ಮಧ್ಯಾಹ್ನ 3.30ಕ್ಕೆ ನಗರದ ಟೌನ್ ಹಾಲ್​ನಲ್ಲಿ ಹಮ್ಮಿಕೊಳ್ಳಲಾಗಿದೆ.

ವಿಚಾರಗೋಷ್ಠಿಯಲ್ಲಿ ಬಿಜೆಪಿ ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಹೈಕೋರ್ಟ್ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್, ವಿಶ್ವವಾಣಿಯ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಸಾಮಾಜಿಕ ಹೋರಾಟಗಾರ ವಸಂತ್ ಗಿಳಿಯಾರ್, ಬರಹಗಾರ ಮತ್ತು ಬಿಜೆಪಿ ಮುಖಂಡ ವಿಕಾಸ್ ಪುತ್ತೂರು, ಪತ್ರಕರ್ತ ಕೀರ್ತಿ ಶಂಕರಘಟ್ಟ, ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಗಿರೀಶ್ ಭಾರಧ್ವಾಜ್ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು, ಪತ್ರಕರ್ತರು, ಚಿಂತಕರು, ಮತ್ತು ಬರಹಗಾರರು ಭಾಗವಹಿಸಲಿದ್ದಾರೆ.

Tags:    

Similar News