Sandalwood Samachar | ಸಪ್ತಮಿ ಗೌಡ ವಿಂಟೇಜ್ ಸೀರೆ ಲುಕ್‌ಗೆ ಫಾನ್ಸ್ ಫಿದಾ
ಸಪ್ತಮಿ ಗೌಡ ವಿಂಟೇಜ್ ಸೀರೆಯುಟ್ಟು ಪೋಟೋಗೆ ಫೋಸ್ ಕೊಟ್ಟಿರುವ ಪೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಪೋಟೋಗಳು ಭಾರೀ ವೈರಲ್ ಆಗುತ್ತಿವೆ.;
'ಕಾಂತಾರ' ಬೆಡಗಿ ನಟಿ ಸಪ್ತಮಿ ಗೌಡ ಸಿನಿಮಾದ ಜೊತೆಗೆ ಸೋಶಿಯಲ್ ಮೀಡಿಯದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಸಪ್ತಮಿ ಗೌಡ ವಿಂಟೇಜ್ ಸೀರೆಯುಟ್ಟು ಪೋಜ್ ಕೊಟ್ಟಿರುವ ಪೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಪೋಟೋಗಳು ಭಾರೀ ವೈರಲ್ ಆಗುತ್ತಿವೆ.
ವಿಂಟೇಜ್ ಸೀರೆಯುಟ್ಟು ಸಪ್ತಮಿ ಗೌಡ ವಿಭಿನ್ನ ಭಂಗಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಗುಲಾಬಿ ಬಣ್ಣದ ರೇಷ್ಮೆ ಸೀರೆಗೆ ಹಸಿರು ಬಾರ್ಡರ್ ಇದ್ದು, ಕಡು ನೀಲಿ ಬಣ್ಣದ ಬ್ಲೌಸ್ ತೊಟ್ಟಿದ್ದಾರೆ. ಈ ಫೋಟೊಶೂಟ್ ವಿಂಟೇಜ್ ಕಾರುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ಈ ಪೋಟೊಗಳಿಗೆ ನೆಟ್ಟಿಗರು ಕಾಮೆಂಟ್‌ಗಳ ಮೇಲೆ ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮನ್ನು ಹೊಗಳೋದಕ್ಕೆ ಕವನ ರೆಡಿಮಾಡಿದ್ದೆ, ಆದ್ರೆ ಅಂದವನ್ನು ನೋಡಿ ಪದಗಳೆಲ್ಲಾ ಮರೆತು ಹೋಯ್ತು ಎಂದು ಒಬ್ಬರು ಕಮೆಂಟ್ ಮಾಡಿದರೆ, ದೃಷ್ಟಿಯಾಗಬಹುದು, ಆದಷ್ಟು ಬೇಗನೆ ದೃಷ್ಟಿ ತೆಗೆಯಿರಿ ಎಂದು ಒಬ್ರು ಹೇಳಿದ್ರೆ, ಮತ್ತೊಬ್ರು ದೇವತೆಯನ್ನು ನಿಜವಾಗಿ ನೋಡುವ ಆಸೆ, ಆದ್ರೆ ಆ ಅದೃಷ್ಟ ನಮಗಿಲ್ಲ, ಫೋಟೊದಲ್ಲಿ ನೋಡಿ, ಮನಸಿನಲ್ಲಿಟ್ಟು ಪೂಜಿಸ್ತೇನೆ ಎಂದು ಬರೆದಿದ್ದಾರೆ.
ಅಂದ ಹಾಗೆ ಸಂಪ್ತಮಿ ಗೌಡ ಈ ರೀತಿ ಫೋಟೋಶೂಟ್‌ಗೆ ಒಂದು ಕಾರಣವಿದೆ. ಸಪ್ತಮಿ ಗೌಡ ವಿಂಟೇಜ್ ಸೀರೆಗಳ ಕಲೆಕ್ಷನ್‌ಗಾಗಿಯೇ ಇದೀಗ ಮಾಡಲ್ ಆಗಿದ್ದಾರೆ. ʼNerige storyʼ ಎಂಬ ವಿಂಟೇಜ್ ಸೀರೆ ಬ್ರಾಂಡ್ ಪ್ರಮೋಟ್ ಮಾಡಲು ಅವರು ಮಾಡೆಲ್ ಆಗಿದ್ದಾರೆ. ಆ ಸಂಸ್ಥೆ ಕನ್ನಡದ ನಟಿಯರ ಮೂಲಕವೇ ವಿಂಟೇಜ್ ಸೀರೆಯಗಳನ್ನು ಪ್ರಮೋಟ್ ಮಾಡುತ್ತಲೇ ಬಂದಿದೆ. ಇದೀಗ ನಟಿ ಸಪ್ತಮಿ ಗೌಡ ಈ ಸಲ ವಿಂಟೇಜ್ ಸೀರೆಯನ್ನು ಉಟ್ಟು ಪ್ರಮೋಟ್ ಮಾಡಿದ್ದಾರೆ. ಹಾಗೆ ಈ ಸೀರೆಗಳ ಮಹತ್ವ ಸಾರೋಕೆ ಇಲ್ಲೊಂದು ಪುಟ್ಟ ಕಥೆಯನ್ನೂ ಕೂಡ ಕಟ್ಟಿಕೊಡಲಾಗಿದೆ.
ಕಥೆ ಏನು?
ವಿಂಟೇಜ್ ಸೀರೆಯ ಮಹತ್ವ ಹೇಳೋಕೆ ಇಲ್ಲೊಂದು ಸಣ್ಣ ಕಥೆಯನ್ನು ಕಟ್ಟಿಕೊಡಲಾಗಿದೆ. ಪೋಸ್ಟ್ ಮ್ಯಾನ್ ಪತ್ರ ತಂದು ಕೊಡ್ತಾನೆ. ಆ ಲೆಟರ್ ಅನ್ನ ಸಪ್ತಮಿ ಗೌಡ ಓದುತ್ತಾರೆ. ಓದುತ್ತಲೇ ಪತ್ರದಲ್ಲಿರೋ ಅಷ್ಟು ಭಾವನೆಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಹಳೆ ಪಟ್ಟಿಗೆಯಲ್ಲಿ ಇರೋ ತುಂಬಾ ಚೆಂದದ ಒಂದು ಸೀರೆಯುಟ್ಟು ಖುಷಿ ಪಡುತ್ತಾರೆ. ಈ ಒಂದು ಕಲ್ಪನೆಯಲ್ಲಿ ತೇಲುತ್ತಿರೋವಾಗ್ಲೇ ಬಾಗಿಲ ಬಡಿದ ಸದ್ದು ಆಗುತ್ತದೆ. ಆ ಫೋಸ್ಟ್‌ಮ್ಯಾನ್ ಹೇಳ್ತಾನೆ. ರಾಂಗ್ ಅಡ್ರೆಸ್‌ಗೆ ಪತ್ರ ಕೊಟ್ಟು ಹೋಗಿದ್ದೇನೆ. ವಾಪಾಸ್ ಕೊಡಿ.. ಎಂದು ಪತ್ರ ಪಡೆದು ಹೋಗ್ತಾನೆ. ಅಲ್ಲಿಗೆ ಈ ಸೀರೆಯ ಪುಟ್ಟ ಸ್ಟೋರಿ ಎಂಡ್ ಆಗುತ್ತಾರೆ.
ಈ ಹಿಂದೆ ಮೇಘನಾ ಗಾಂವ್ಕರ್ ವಿಂಟೇಜ್ ಸೀರೆ ಉಟ್ಟುಕೊಂಡು, ಒಂದು ಸೀರೆ ಕಥೆಯನ್ನೂ ವಿಡಿಯೋ ಮೂಲಕ ಹೇಳಿದ್ದರು. ಸಿನಿಮಾ ವಿಚಾರಕ್ಕೆ ಬರುವುದಾರೆ, ಸಪ್ತಮಿ ಗೌಡ 'ಯುವ' ಬಳಿಕ ಹೊಸ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದಾರೆ. ಡಾಲಿ ಧನಂಜಯ್ ಹೊಚ್ಚ ಸಿನಿಮಾಗೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.