ಕೆಜಿಎಫ್‌ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ʼಕೌಶಲ್ಯ ಅಭಿವೃದ್ಧಿ ಕೇಂದ್ರʼ ಆರಂಭ

ಈ ಯೋಜನೆಯು ದೇಶದ ಗ್ರಾಮೀಣ ಭಾಗಗಳ ಯುವಜನರನ್ನು ಬದಲಾವಣೆಯ ಹರಿಕಾರರನ್ನಾಗಿ ಮತ್ತು ಭವಿಷ್ಯದ ಸಂಶೋಧಕರಾಗಿ ಸಬಲೀಕರಣಗೊಳಿಸುವ ಸ್ಯಾಮ್‌ಸಂಗ್‌ ಬದ್ಧತೆಗೆ ಪೂರಕವಾಗಿದೆ.;

Update: 2025-09-08 06:39 GMT

ಕೋಲಾರ ಗೋಲ್ಡ್ ಫೀಲ್ಡ್ಸ್‌ ನ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ‘ಸ್ಯಾಮ್‌ಸಂಗ್ ಕೌಶಲ್ಯ ಅಭಿವೃದ್ಧಿ ಕೇಂದ್ರʼವನ್ನು ಉದ್ಘಾಟಿಸಿದರು. 

Click the Play button to listen to article

ಸ್ಯಾಮ್‌ಸಂಗ್ ಸೆಮಿ ಕಂಡಕ್ಟರ್ ಇಂಡಿಯಾ ರಿಸರ್ಚ್ (ಎಸ್‌ಎಸ್‌ಐಆರ್) ಸಂಸ್ಥೆಯು ಸೋಮವಾರ ಕೋಲಾರದ ಕೆಜಿಎಫ್ ಸರ್ಕಾರಿ ಪಾಲಿಟೆಕ್ನಿಕ್‌ ನಲ್ಲಿ ತನ್ನ ಮೊದಲ “ಸ್ಯಾಮ್‌ಸಂಗ್ ಕೌಶಲ್ಯ ಅಭಿವೃದ್ಧಿ ಕೇಂದ್ರ” ಉದ್ಘಾಟಿಸಿತು. 

ಕೌಶಲ ಕೇಂದ್ರದಲ್ಲಿ ಏನೆಲ್ಲಾ ತರಬೇತಿ?

ಕಂಪೆನಿಯು ತನ್ನ ಸಿಎಸ್‌ಆರ್ ನಿಧಿಯಡಿ ಐದು ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ ಗ್ರಾಮೀಣ ಭಾಗದ ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ (ಎಐ/ಎಂಎಲ್), ಸೈಬರ್‌ ಸೆಕ್ಯುರಿಟಿ, ಆಟೊಮೇಷನ್, ರೊಬೊಟಿಕ್ಸ್ ಮತ್ತು ಕೋರ್ ಎಂಜಿನಿಯರಿಂಗ್ ವಿಷಯಗಳಲ್ಲಿ ತರಬೇತಿ ನೀಡಲಿದೆ.

ಕಂಪನಿಯು ಆರಂಭಿಸಿರುವ ಕೌಶಲಾಭಿವೃದ್ಧಿ ಕೇಂದ್ರವು ಗ್ರಾಮೀಣ ಭಾಗಗಳ ಯುವಜನರನ್ನು ಬದಲಾವಣೆಯ ಹರಿಕಾರರನ್ನಾಗಿ ಮತ್ತು ಭವಿಷ್ಯದ ಸಂಶೋಧಕರಾಗಿ ಸಬಲೀಕರಣಗೊಳಿಸಲಿದೆ. ಅಲ್ಲದೇ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯ ಉತ್ಸಾಹ ಬೆಳೆಸಲಿದೆ. 

ಹೊಸದಾಗಿ ಉದ್ಘಾಟನೆಯಾದ ಐದು ಪ್ರಯೋಗಾಲಯಗಳು ಆಧುನಿಕ ಉಪಕರಣಗಳನ್ನು ಹೊಂದಿವೆ. ಇದು ವಿದ್ಯಾರ್ಥಿಗಳಿಗೆ ನಾವೀನ್ಯತೆಯ ಪರಿಸರ ಒದಗಿಸಲಿವೆ. ಕಲಿಕಾ ಪಠ್ಯಕ್ರಮದ ಭಾಗವಾಗಿ ಉದ್ಯಮ-ಸಾಮರ್ಥ್ಯದ ಕೌಶಲ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಬಹು-ವಿಷಯದ ವಿಧಾನದಡಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ಒದಗಿಸಲಿವೆ.

ಎಸ್‌ಎಸ್‌ಐಆರ್‌ನ ಇವಿಪಿ ಮತ್ತು ಎಂಡಿ ಬಾಲಾಜಿ ಸೌರಿರಾಜನ್ ಮಾತನಾಡಿ, “ಈ ಯೋಜನೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ಕೈಯಿಂದ ಕಲಿಕೆಯ ಅನುಭವ ಒದಗಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭಾರತ ಸರ್ಕಾರದ ಕೌಶಲ ಅಭಿವೃದ್ಧಿ ಧ್ಯೇಯವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಡಿಜಿಟಲ್ ಕೊರತೆ ಸರಿದೂಗಿಸಲು ಬದ್ಧರಾಗಿದ್ದೇವೆ. ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸುವ ಗುರಿ ಹೊಂದಿದ್ದೇವೆ" ಎಂದು ಹೇಳಿದರು.

1000ವಿದ್ಯಾರ್ಥಿಗಳಿಗೆ ಎಐ ತರಬೇತಿ

ಎಸ್‌ಎಸ್‌ಐಆರ್‌ ಕೌಶಲಾಭಿವೃದ್ಧಿ ಕೇಂದ್ರವು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಒಟ್ಟು 37 ಪಾಲಿಟೆಕ್ನಿಕ್ ಕಾಲೇಜುಗಳ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕೃತಕ ಬುದ್ದಿಮತ್ತೆ(ಎಐ), ಐಒಟಿ ತರಬೇತಿ ಒದಗಿಸಲಿದೆ. ಎಸ್‌ಐಸಿ ಉಪಕ್ರಮದಿಂದ ರಾಜ್ಯದಾದ್ಯಂತ ಮೂಲಭೂತ ತಂತ್ರಜ್ಞಾನ ಸಾಮರ್ಥ್ಯ ಬಲಪಡಿಸಲು ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ. 

Tags:    

Similar News