ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಟ್ರೆಂಡಿಂಗ್ ಆದ #ResignSiddaramaiah
ಸೋಶಿಯಲ್ ಮೀಡಿಯಾದಲ್ಲಿ #ResignSiddaramaiah ಎನ್ನುವ ಹ್ಯಾಶ್‌ಟ್ಯಾಗ್ ಕೂಡ ಜನಪ್ರಿಯವಾಗಿದೆ.;
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಈ ತೀರ್ಪು ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ರಿಸೈನ್ ಸಿದ್ದರಾಮಯ್ಯ(#ResignSiddaramaiah) ಎನ್ನುವ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ.
'ದಸರಾಗೆ ಹೊಸ ಸಿಎಂ. ಟಾಟಾ ಬೈ ಬೈ. ಎಲ್ಲಾ ಸೀಟ್ ಬೆಲ್ಟ್ ಹಾಕೊಳಿ. bigboss 11 ಕ್ಕಿಂತ ಒಳ್ಳೆ ಸೀಸನ್ ಕರ್ನಾಟಕದ ರಾಜಕೀಯದಲ್ಲಿ ಶುರು ಆಗುತ್ತೆ. ಹೌದು ಸ್ವಾಮಿ' ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. 'ಗುಲಾಮರಿಗೆ ಹಾಗೂ ಒಳಾಟಗಾರರಿಗೆ ಉರಿ ಶುರುವಾಯಿತು. ಬರ್ನಾಲ್ ಸ್ಟಾಕ್ ಮುಗಿಯುವ ಲಕ್ಷಣ ಕಾಣುತ್ತಿದೆ. ಒಳಾಟಗಾರರು ಒಂದು ಹೆಜ್ಜೆ ಮುಂದೆ ಹೋಗಿ ಉಚ್ಚ ನ್ಯಾಯಾಲಯದ ಮುಂದೆ ಹೋರಾಟ ಮಾಡಬಹುದು' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಈಗಲೂ ಕಾಂಗ್ರೆಸ್ ಹೈಕೋರ್ಟ್ ಮುಂದೆ ಪ್ರತಿಭಟನೆ ಮಾಡುತ್ತದೆಯೇನು?' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
'ಚಿಕ್ಕ ಮಕ್ಕಳು ಮುಂಬೈನಲ್ಲಿ ಕೋಲ್ಡ್ ಪ್ಲೇ ಕಾನ್ಸರ್ಟ್ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಪುರುಷರು ಇಂಡಿಯಾ-ಆಸ್ಟ್ರೇಲಿಯಾ ಬಾರ್ಡರ್ ಗಾವಸ್ಕರ್ ಟ್ರೋಫಿ ಯಾವಾಗ ಆರಂಭ ಆಗುತ್ತದೆ ಅನ್ನೋದರ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಲಜೆಂಡ್ಸ್ ಮಾತ್ರ ಸಿದ್ದರಾಮಯ್ಯ ಹಾಗೂ ಡಿಬಾಸ್ ಪರಪ್ಪನ ಅಗ್ರಹಾರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಬಗ್ಗೆ ಯೋಚನೆ ಮಾಡ್ತಿದ್ದಾರೆ' ಎಂದು ಗಣೇಶ್ ಎನ್ನುವವರು ಬರೆದಿದ್ದಾರೆ.
'ಸಮಾಜವಾದಿ ಮುಖವಾಡ ಧರಿಸಿ ಬಡವರ ದಲಿತರ ಭೂಮಿ ನುಂಗಿದ ಮುಡಾರಾಮಯ್ಯ ನಿಮ್ಮ ಬಂಡತನ ಬಿಟ್ಟು ಇನ್ನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಿ!' ಎಂದು ಇನ್ನೊಬ್ಬರು ಬರೆದಿದ್ದಾರೆ.