ಸ್ವಾತಂತ್ರ್ಯೋತ್ಸವದಂದು ರಾಜ್ಯದ 18 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕದ ಗರಿ

ರಾಜ್ಯದ ಪೊಲೀಸ್ ಇಲಾಖೆಯ ಅತ್ಯುತ್ತಮ ಸೇವೆ, ನಿಷ್ಠೆ ಮತ್ತು ಶ್ರೇಷ್ಠ ಕಾರ್ಯನಿರ್ವಹಣೆಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ.;

Update: 2025-08-14 12:18 GMT

ಸಾಂದರ್ಭಿಕ ಚಿತ್ರ

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆ, ನಿಷ್ಠೆ ಮತ್ತು ಶ್ರೇಷ್ಠ ಕಾರ್ಯನಿರ್ವಹಣೆಯನ್ನು ಗುರುತಿಸಿ, ರಾಜ್ಯದ 18 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಷ್ಠಿತ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರಿನ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಪೊಲೀಸ್ ಅಧೀಕ್ಷಕರಾಗಿ (ಎಸ್ಪಿ) ಸೇವೆ ಸಲ್ಲಿಸುತ್ತಿರುವ ಎಸ್. ಬದ್ರಿನಾಥ್ ಅವರು ಈ ಸಾಲಿನ ಅತ್ಯುನ್ನತ ಗೌರವವಾದ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ಕ್ಕೆ ಆಯ್ಕೆಯಾಗಿದ್ದಾರೆ.

ಇನ್ನುಳಿದ 17 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ‘ಶ್ಲಾಘನೀಯ ಸೇವಾ ಪದಕ’ಕ್ಕೆ ಪಾತ್ರರಾಗಿದ್ದಾರೆ. ಪದಕ ವಿಜೇತರಲ್ಲಿ ರಾಜ್ಯ ಗುಪ್ತಚರ ವಿಭಾಗದ ಐಜಿಪಿ ಮತ್ತು ಹೆಚ್ಚುವರಿ ನಿರ್ದೇಶಕರಾದ ಡಾ. ಚಂದ್ರಗುಪ್ತ, ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು, ಪೊಲೀಸ್ ಪ್ರಧಾನ ಕಚೇರಿಯ ಅಪರಾಧ ವಿಭಾಗದ ಎಐಜಿಪಿ ಕಲಾ ಕೃಷ್ಣಸ್ವಾಮಿ, ಸಿಐಡಿ ಎಸ್ಪಿ ಎನ್. ವೆಂಕಟೇಶ್ ಹಾಗೂ ಬೆಂಗಳೂರಿನ 9ನೇ ಕೆಎಸ್ಆರ್​​ಪಿ ಪಡೆಯ ಕಮಾಂಡೆಂಟ್ ಡಾ. ರಾಮಕೃಷ್ಣ ಮುದ್ದೇಪ ಸೇರಿದ್ದಾರೆ.

ಇವರೊಂದಿಗೆ, ಬೆಂಗಳೂರು ನಗರದ ಕೆ.ಜಿ.ಹಳ್ಳಿ ಉಪ-ವಿಭಾಗದ ಎಸಿಪಿ ಪ್ರಕಾಶ್ ರಾಠೋಡ, ಮಹದೇವಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಿ. ಪ್ರವೀಣ್ ಬಾಬು, ಪರಪ್ಪನ ಅಗ್ರಹಾರ ಠಾಣೆಯ ಇನ್ಸ್ಪೆಕ್ಟರ್ ಬಿ.ಎಸ್. ಸತೀಶ್, ಬೆಂಗಳೂರು ಜಿಲ್ಲೆಯ ನಂದಗುಡಿ ಠಾಣೆಯ ಇನ್ಸ್ಪೆಕ್ಟರ್ ಶಾಂತಾರಾಮ ಮತ್ತು ಬೆಸ್ಕಾಂ ಇನ್ಸ್ಪೆಕ್ಟರ್ ಎಲ್ವಿನ್ ಪ್ರದೀಪ್ ಎಸ್. ಅವರೂ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಇಲಾಖೆಯ ಇತರ ಸಿಬ್ಬಂದಿಗಳಾದ ಬೆಂಗಳೂರಿನ ಎಸ್ಆರ್ಬಿ ವಿಭಾಗದ ಪಿಎಸ್ಐ ಜೆ. ಝಾನ್ಸಿರಾಣಿ, ಮಂಗಳೂರು ನಗರ ಸಿಸಿಬಿಯ ಎಎಸ್ಐ ಸುಜನಾ ಶೆಟ್ಟಿ, ಗದಗ ಜಿಲ್ಲಾ ಪೊಲೀಸ್ ಕಚೇರಿಯ ಎಆರ್​ಎಸ್ಐ ಗುರುರಾಜ ಮಹಾದೇವಪ್ಪ ಬೂದಿಹಾಳ, ಬೆಂಗಳೂರಿನ 4ನೇ ಕೆಎಸ್ಆರ್ಪಿ ಪಡೆಯ ಸ್ಟೆ.ಆರ್​ಎಚ್​​ಸಿ-99 ರಾಕೇಶ್ ಎಂ.ಜೆ., ಕೊಪ್ಪಳ ಜಿಲ್ಲಾ ಪೊಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ಹೆಚ್​​ಸಿ -91 ಸಂಶುದ್ದೀನ್​, ಬೆಂಗಳೂರು ನಗರದ ಐಎಸ್​ಡಿ ವಿಭಾಗದ ಶಂಕರ ವೈ., ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಸಿಹೆಚ್ಸಿ-146 ಅಲಂಕಾರ ರಾಕೇಶ್ ಹಾಗೂ ಬೆಂಗಳೂರಿನ ರವಿ (ಸಿಹೆಚ್​​ಸಿ -7709) ಅವರ ಸೇವೆಯನ್ನೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಪದಕ ಘೋಷಿಸಲಾಗಿದೆ. 

Tags:    

Similar News