ಕರ್ನಾಟಕ ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು: ರಣದೀಪ್ ಸುರ್ಜೇವಾಲಾ

ಸಿಎಂ ಬದಲಾವಣೆಯ ನಿರ್ಧಾರ ಹೈಕಮಾಂಡ್ ಮಾಡಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಅನಗತ್ಯ ಎಂದು ರಣದೀಪ್ ಸಿಂಗ್‌ ಸುರ್ಜೇವಾಲಾ ತಿಳಿಸಿದ್ದಾರೆ.;

Update: 2025-07-08 12:13 GMT

ರಣದೀಪ್ ಸಿಂಗ್ ಸುರ್ಜೇವಾಲಾ

ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆಯ ವಿಚಾರವು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಮಂಗಳವಾರ ಅವರು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಕೆಲವು ಆಸೆಗಳಿರಬಹುದು, ಪತ್ರಕರ್ತರಿಗೆ ಸಂಪಾದಕರಾಗುವ ಆಸೆ ಇರುತ್ತದೆ, ಆದರೆ ಅಂತಿಮ ತೀರ್ಮಾನವನ್ನು ಸಂಸ್ಥೆಯ ಮಾಲೀಕರು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಸಿಎಂ ಬದಲಾವಣೆಯ ನಿರ್ಧಾರ ಹೈಕಮಾಂಡ್ ಮಾಡಲಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಅನಗತ್ಯ ಎಂದು ಅವರು ತಿಳಿಸಿದರು. 

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಸುರ್ಜೇವಾಲಾ, "ಸಿಎಂ ಮತ್ತು ಡಿಸಿಎಂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅದು ಅವರ ಜವಾಬ್ದಾರಿ. ಕರ್ನಾಟಕದ ಜನರ ದೃಷ್ಟಿಯಿಂದ ಅವರು ದೆಹಲಿಗೆ ಹೋಗಿ ಬರುತ್ತಾರೆ. ರಾಜ್ಯಕ್ಕೆ ಆಗಿರುವ ತಾರತಮ್ಯದ ಬಗ್ಗೆ ಕೇಂದ್ರದೊಂದಿಗೆ ಚರ್ಚಿಸುತ್ತಾರೆ" ಎಂದು ಸ್ಪಷ್ಟಪಡಿಸಿದರು.

ಶಾಸಕರೊಂದಿಗಿನ ಒನ್-ಟು-ಒನ್ ಸಭೆಗಳ ವಿಚಾರ

ಶಾಸಕರೊಂದಿಗೆ ತಾವು ನಡೆಸಿದ ಒನ್-ಟು-ಒನ್ ಸಭೆಗಳ ಕುರಿತು ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಹೇಗಿವೆ? ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆಯೇ? ಕಳೆದ ಎರಡು ವರ್ಷಗಳ ಆಡಳಿತ ವೈಖರಿ ಹೇಗಿತ್ತು? ಆಡಳಿತ ಸುಧಾರಣೆಯ ಬಗ್ಗೆ ಚರ್ಚೆ ನಡೆಸಿದ್ದೇನೆ. ಶಾಸಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸಾಕಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲಾಗುತ್ತಿದೆ. ಹಲವು ಶಾಸಕರಿಗೆ ಸಮಸ್ಯೆಗಳಿದ್ದು, ಅವರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ ಮತ್ತು ಲಿಖಿತ ರೂಪದಲ್ಲಿ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದು ಸುರ್ಜೇವಾಲಾ ತಿಳಿಸಿದರು.

Tags:    

Similar News