'ಆತ್ಮಹತ್ಯೆ ತಡೆ ಸಾಧನ' ಅಳವಡಿಕೆಗೆ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಚಿಂತನೆ

ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಈ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ.;

Update: 2025-08-06 04:32 GMT

ಸಾಂದರ್ಭಿಕ ಚಿತ್ರ

ರಾಜ್ಯದ ಕಾಲೇಜು, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಎಲ್ಲ ವೈದ್ಯಕೀಯ ಸಂಸ್ಥೆಗಳ ಹಾಸ್ಟೆಲ್‌ಗಳ ಸೀಲಿಂಗ್ ಫ್ಯಾನ್‌ಗಳಲ್ಲಿ ಆತ್ಮಹತ್ಯೆ ತಡೆ ಸಾಧನ (Anti-Suicide Device) ಸಾಧನ ಅಳವಡಿಸಲು ಚಿಂತನೆ ನಡೆಸಿದೆ.

ಕೇವಲ ಎರಡು ವಾರಗಳ ಅವಧಿಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಮಿಮ್ಸ್) ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್ ಕೊಠಡಿಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಈ ಮಹತ್ವದ ತೀರ್ಮಾನಕ್ಕೆ ಬಂದಿದೆ.

ಪರಿಸ್ಥಿತಿ ಬಗ್ಗೆ ಅವಲೋಕಿಸಲು ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ವಿವಿಯ ಪಠ್ಯಕ್ರಮ ಅಭಿವೃದ್ಧಿ ಕೋಶದ ಡಾ. ಸಂಜೀವ್ ನೇತೃತ್ವದ ತಂಡವು ಜುಲೈ ಕೊನೆಯ ವಾರದಲ್ಲಿ ಮಿಮ್ಸ್​​ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿತ್ತು.

ಮುಂದೆ ಇಂಥ ಘಟನೆಗಳನ್ನು ತಡೆಗಟ್ಟಲು ಸೀಲಿಂಗ್ ಫ್ಯಾನ್‌ಗಳಲ್ಲಿ ಸುರಕ್ಷತಾ ಸಾಧನಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಡಾ. ಸಂಜೀವ್ ಬಹಿರಂಗಪಡಿಸಿದ್ದರು.

ಆತ್ಮಹತ್ಯೆ ತಡೆ ಸಾಧನ ಹೇಗೆ ಕೆಲಸ ಮಾಡುತ್ತದೆ?

ಆ್ಯಂಟಿ ಸೂಸೈಡ್ ಡಿವೈಸ್ ಸೀಲಿಂಗ್ ಫ್ಯಾನ್‌ ಮೇಲಿನ ತೂಕ ಮಿತಿಗಿಂತ ಹೆಚ್ಚಾದರೆ ಸ್ವಯಂಚಾಲಿತ ವ್ಯವಸ್ಥೆ ಅಲರ್ಟ್ ಆಗುತ್ತದೆ. ಕೂಡಲೇ ಫ್ಯಾನ್ ಸೀಲಿಂಗ್ ಹುಕ್‌ನಿಂದ ಬೇರ್ಪಡುತ್ತದೆ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದರೆ ಫ್ಯಾನ್ ತಾನಾಗಿಯೇ ಕಳಚಿ ಬೀಳಲಿದೆ. ಕೇವಲ ಫ್ಯಾನ್ ಹುಕ್​ನಿಂದ ಕಳಚುವುದಷ್ಟೇ ಅಲ್ಲದೆ, ಹಾಸ್ಟೆಲ್ ಅಧಿಕಾರಿಗಳನ್ನು ಎಚ್ಚರಿಸಲು ಸೈರನ್ ಕೂಡ ಆತ್ಮಹತ್ಯೆ ತಡೆ ಸಾಧನ'ದ​ಲ್ಲಿ ಅಳವಡಿಸಲಾಗಿದೆ. ಇದರಿಂದ ಸಾವುಗಳನ್ನು ತಡೆಯುವುದಷ್ಟೇ ಅಲ್ಲದೆ, ವಿದ್ಯಾರ್ಥಿಯನ್ನು ಪತ್ತೆ ಮಾಡಿ ಅವರಿಗೆ ಮಾನಸಿಕ ಧೈರ್ಯ, ಬೆಂಬಲ ನೀಡುವುದೂ ಸಾಧ್ಯವಾಗಲಿದೆ.

Tags:    

Similar News