ಪ್ರಚೋದನಾಕಾರಿ ಹೇಳಿಕೆ | ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್
ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾದಗಿರಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಹಾಪುರ ಗಣೇಶ ವಿಸರ್ಜನಾ ಶೋಭಾ ಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.;
ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾದಗಿರಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶಹಾಪುರ ಗಣೇಶ ವಿಸರ್ಜನಾ ಶೋಭಾ ಯಾತ್ರೆ ವೇಳೆ ಪ್ರತಾಪ್ ಸಿಂಹ ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಇದೇ 21ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಶೋಭಾ ಯಾತ್ರೆಯಲ್ಲಿ ಪ್ರತಾಪ್ ಸಿಂಹ ಭಾಗಿಯಾಗಿ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪ ಅವರ ಮೇಲಿದೆ.
ಏನು ಹೇಳಿದ್ದರು ಪ್ರತಾಪ್ ಸಿಂಹ?
ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರತಾಪ್ ಸಿಂಹ, ಗಣೇಶ ವಿಸರ್ಜನೆ ವೇಳೆ ಎಲ್ಲಾ ಕಡೆ ಕಲ್ಲುತೂರಾಟ ಮಾಡುವ ಪ್ರವೃತ್ತಿ ಕಾಣಿಸುತ್ತಾ ಇದೆ. ಕಲ್ಲು ಹೊಡೆಯುವ ಪ್ರವೃತ್ತಿ ಮುಸ್ಲಿಮರಿಗೆ ಮಾತ್ರ ಯಾಕೆ ಬರುತ್ತದೆ? ಹಿಂದೂಗಳು ಎಲ್ಲರೂ ಕೈಯಲ್ಲಿ ಒಂದೊಂದು ಕಲ್ಲು ಹಿಡಿದುಕೊಂಡರೆ ನಿಮ್ಮ (ಮುಸ್ಲಿಮರನ್ನು ಉದ್ದೇಶಿಸಿ) ಕಥೆ ಏನು ಆಗುತ್ತದೆ ಗೊತ್ತೇ ಎಂದು ಪ್ರಶ್ನಿಸಿದ್ದರು.
ಪರಮಾಣು ಬಾಂಬ್ ಸಿದ್ಧಪಡಿಸುವುದನ್ನು ಕಂಡುಹಿಡಿದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ತಯಾರಿಸಲು ಬರುವುದಿಲ್ಲವೇ? ಟಾಂಗಾಗಳು, ಗುಜರಿಗಳು ಮಾಡುವ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಲು ಹಿಂದೂಗಳಿಗೆ ಬರುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದರು.
ಪ್ರತಾಪ್ ಸಿಂಹ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಗಲಭೆಗೆ ಕಾರಣವಾಗುವಂತಹ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಮರು ಆರೋಪಿಸಿದ್ದರು. ಈ ಸಂಬಂಧ ಅವರ ವಿರುದ್ಧ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹಾಪುರ ಪಿಎಸ್ಐ ಡಿವಿ ನಾಯಕ ಅವರು ಪ್ರತಾಪ್ ಸಿಂಹ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಂಹ ಜೊತೆಗೆ ಇತರರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಿಎನ್ಎಸ್ ಕಾಯ್ದೆಯ ಸೆಕ್ಷನ್ 299, 192 ಅಡಿ ಕೇಸ್ ದಾಖಲಿಸಲಾಗಿದೆ.