Operation Sindoor | ಘೋಷಣೆ ಬೆನ್ನಲ್ಲೇ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ; ಹಲವೆಡೆ ಡ್ರೋನ್‌ ದಾಳಿ

ಕದನ ವಿರಾಮ ಘೋಷಣೆ ನಂತರವೂ ಜಮ್ಮುಕಾಶ್ಮೀರದ ಲಾಲ್ ಚೌಕ್, ರಾಜಸ್ಥಾನ, ಗುಜರಾತ್ ಸೇರಿದಂತೆ ಹಲವಡೆ ಡ್ರೋನ್ ದಾಳಿ ಮುಂದುವರಿಸಿದೆ. ದಾಳಿ ಮುಂದುವರಿದಂತೆ ಶ್ರೀನಗರ ಬ್ಲಾಕ್ ಔಟ್ ಮಾಡಲಾಗಿದೆ.;

Update: 2025-05-10 16:34 GMT

ಭಾರತ-ಪಾಕಿಸ್ತಾನ ಮಧ್ಯೆ ಕದನ ವಿರಾಮ ಘೋಷಣೆಯಾದ ಮೂರು ಗಂಟೆಗಳ ತರುವಾಯ ಪಾಕಿಸ್ತಾನದಿಂದ ಮತ್ತೆ ಅಪ್ರಯೋಜಿತ ದಾಳಿ ಮುಂದುವರಿದಿದೆ.

ಜಮ್ಮುಕಾಶ್ಮೀರದ ಲಾಲ್ ಚೌಕ್, ರಾಜಸ್ಥಾನ, ಗುಜರಾತ್ ಸೇರಿದಂತೆ  ಹಲವಡೆ ಡ್ರೋನ್ ದಾಳಿ ಮುಂದುವರಿಸಿದೆ. ದಾಳಿ ಮುಂದುವರಿದಂತೆ ಶ್ರೀನಗರ ಬ್ಲಾಕ್ ಔಟ್ ಮಾಡಲಾಗಿದೆ.

ರಾಜಸ್ಥಾನದಲ್ಲಿ ಸೈರನ್ ಮೊಳಗಿದೆ. ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸುತ್ತಿದೆ.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಆಗಿರುವ ಕುರಿತು ಸ್ವತಃ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಟ್ವೀಟ್ ಮಾಡಿದ್ದು, ಶ್ರೀನಗರದಲ್ಲಿ ಗುಂಡಿನ ಶಬ್ದ ಜೋರಾಗಿ ಕೇಳಿಬರುತ್ತಿದೆ. ಹಾಗಾದರೆ ಕದನ ವಿರಾಮದ ಅರ್ಥವೇನು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಉಭಯ ರಾಷ್ಟ್ರಗಳ ಮಧ್ಯೆ ಕದನ ವಿರಾಮ ಜಾರಿ ಮಾಡುವ ಸಂಬಂಧ ಶನಿವಾರ ಸುದೀರ್ಘ ಮಾತುಕತೆ ನಡೆಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನದಿಂದ ಸಂಜೆ ಶನಿವಾರ 5:30 ರಿಂದ ಉಭಯ ರಾಷ್ಟ್ರಗಳ ಮಧ್ಯೆ ಕದನ ವಿರಾಮ  ಜಾರಿಯಾಗಿತ್ತು. ಪಾಕಿಸ್ತಾನ ಕೂಡ ಕದನ ವಿರಾಮ ಒಪ್ಪಿಕೊಂಡಿತ್ತು.

Tags:    

Similar News