ರೋಗಿಯ ಸುರಕ್ಷತೆ, ಆರೋಗ್ಯ ಗುಣಮಟ್ಟಕ್ಕಾಗಿ ನೆಫ್ರೋ ಯುರಾಲಜಿ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆ
ರಾಜ್ಯದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಂತರ ಈ ಸ್ಥಾನಮಾನ ಪಡೆದ ಎರಡನೇ ಸಂಸ್ಥೆಯಾಗಿರುವುದು ಬಹಳ ಸಂತಸದ ಸಂಗತಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಸಂತಸ ವ್ಯಕ್ತಪಡಿಸಿದ್ದಾರೆ.
ನೆಫ್ರೋ ಯುರಾಲಜಿ ಶಾಸ್ತ್ರ ಸಂಸ್ಥೆ
ಮೂತ್ರಶಾಸ್ತ್ರ ವಿಭಾಗದಲ್ಲಿ ಅತ್ಯಾಧುನಿಕ ಸೇವೆ ಒದಗಿಸುತ್ತಿರುವ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರದ ಸೂಪರ್ ಸ್ಪೆಷಾಲಿಟಿ ನೆಫ್ರೋ ಯುರಾಲಜಿ ಶಾಸ್ತ್ರ ಸಂಸ್ಥೆ (INU) ರಾಷ್ಟ್ರೀಯ ಮಾನ್ಯತಾ ಮಂಡಳಿಯ (NABH) ಮಾನ್ಯತೆಯನ್ನು ಪಡೆಯುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ.
ಕರ್ನಾಟಕದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಂತರ ಈ ಸ್ಥಾನಮಾನ ಪಡೆದ ಎರಡನೇ ಸಂಸ್ಥೆಯಾಗಿರುವುದು ಬಹಳ ಸಂತಸದ ಸಂಗತಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಸಂತಸ ವ್ಯಕ್ತಪಡಿಸಿದ್ದಾರೆ.
ರೋಗಿಗಳ ಸುರಕ್ಷತೆ ಮತ್ತು ಆರೈಕೆಯಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸಿದ್ದಕ್ಕಾಗಿ ಆರೋಗ್ಯ ಆರೈಕೆ ಗುಣಮಟ್ಟ ಸೊಸೈಟಿ (ISQua) ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ನೀಡುವ ಗುಣಮಟ್ಟದ ಸರ್ಟಿಫಿಕೇಟ್ ಪಡೆದುಕೊಂಡಿದೆ. ರೋಗಿಯ ಸುರಕ್ಷತೆ, ಆರೈಕೆಯ ಗುಣಮಟ್ಟ, ಸೋಂಕು ನಿಯಂತ್ರಣ, ಮೂಲಸೌಕರ್ಯ ಮತ್ತು ಸಿಬ್ಬಂದಿ ಅರ್ಹತೆ ಸೇರಿದಂತೆ ಹಲವಾರು ಕಠಿಣ ಮಾನದಂಡಗಳನ್ನು ಅನುಸರಿಸಿದ ಆಧಾರದ ಮೇಲೆ ಮಾನ್ಯತೆ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗೆ ಈ ಮಾನ್ಯತೆ ದೊರೆತಿರುವುದು ಹೆಮ್ಮೆಯ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.
ಸುರಕ್ಷಿತ ಮತ್ತು ಪ್ರಮಾಣೀಕೃತ ರೋಗಿ ಚಿಕಿತ್ಸೆ, ಆರೈಕೆ ಮತ್ತು ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಆಯುಷ್ಮಾನ್ ಭಾರತ್, ಡಿಜಿಟಲ್ ಆರೋಗ್ಯ ಮಿಷನ್ ಮತ್ತು ರಾಜ್ಯ ವಿಮಾ ಕಾರ್ಯಕ್ರಮಗಳಂತಹ ಯೋಜನೆಗಳಲ್ಲಿ ಎನ್‌ಎಬಿಎಚ್ ಮಾನ್ಯತೆ ಪ್ರಮುಖ ಪಾತ್ರ ವಹಿಸುತ್ತದೆ, ಗುಣಮಟ್ಟದ ಆರೋಗ್ಯ ಸೇವೆ ಮತ್ತು ಸುರಕ್ಷತೆಯೇ ಇಲ್ಲಿ ಪ್ರಮುಖ ಮಾನದಂಡವಾಗಿದೆ ಎಂದು ಮಾಹಿತಿ ನೀಡಿದರು.