Namma Metro | ನಾಗಸಂದ್ರ ಮಾದಾವರ ಮಾರ್ಗ ಕಾರ್ಯಾಚರಣೆ ಮತ್ತೆ ವಿಳಂಬ
ನಾಗಸಂದ್ರದಿಂದ ಮಾದಾವರವರೆಗಿನ ಮೆಟ್ರೋ ಮಾರ್ಗ 2023 ರಲ್ಲೇ ಕಾರ್ಯಾಚರಣೆಗೆ ಸಿದ್ಧವಾಗಬೇಕಿತ್ತು. ಎಲ್ಲ ಸಿದ್ಧತೆ ಮುಗಿದಿದ್ದರೂ ಬಿಎಂಆರ್ಸಿಎಲ್ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಕಾಯುತ್ತಿದ್ದಾರೆ.;
ನಾಗಸಂದ್ರದಿಂದ ಮಾದಾವರ ಮಾರ್ಗದ ಮೆಟ್ರೋ ಕಾಮಾಗಾರಿ ಏಳು ವರ್ಷಗಳಿಂದ ನಡೆಯುತ್ತಿದ್ದರೂ ಮೆಟ್ರೋ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ರೈಲ್ವೆ ಸುರಕ್ಷತಾ ಆಯುಕ್ತರು ರೈಲು ಸಂಚಾರಕ್ಕೆ ಅನುಮತಿ ನೀಡಿ 20 ದಿನಗಳಾದರೂ ಮೆಟ್ರೋ ಅಧಿಕಾರಿಗಳು ಮಾತ್ರ ಇನ್ನೂ ಕಾರ್ಯಾಚರಣೆ ಶುರು ಮಾಡಿಲ್ಲ.
ನಾಗಸಂದ್ರದಿಂದ ಮಾದಾವರ ಮೆಟ್ರೋ ಮಾರ್ಗ 2023 ರಲ್ಲಿ ಈ ಕಾರ್ಯಾಚರಣೆಗೆ ಸಿದ್ಧವಾಗಬೇಕಿತ್ತು. ಎಲ್ಲ ಸಿದ್ಧತೆ ಮುಗಿದಿದ್ದರೂ ಬಿಎಂಆರ್ಸಿಎಲ್ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಕಾದು ಕುಳಿತಿದ್ದಾರೆ. ಆದರೆ ಸರ್ಕಾರಗಳ ವಿಳಂಬ ನೀತಿಯಿಂದ ಸಂಚಾರ ಆರಂಭಕ್ಕಾಗಿ ಪ್ರಯಾಣಿಕರು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗಸಂದ್ರದಿಂದ ಮಾದಾವರವರೆಗಿನ ಮೆಟ್ರೋ ಮಾರ್ಗದ ವಾಣಿಜ್ಯ ಸಂಚಾರಕ್ಕೆ ಅಕ್ಟೋಬರ್4 ರಂದೇ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಆದರೆ, 3.14 ಕಿಮೀ ಮೀಟರ್ ಮಾರ್ಗ ಉದ್ಘಾಟನೆ ಮಾಡದೆ ನಮ್ಮ ಮೆಟ್ರೋ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗಸಂದ್ರ ಟು ಮಾದಾವರ ಮಟ್ರೋ ರೈಲು ಆರಂಭದಿಂದ ನೆಲಮಂಗಲ, ಮಾಕಳಿ, ತುಮಕೂರು ಮಾರ್ಗದ ನಿವಾಸಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ.