ರಾಜ್ಯಕ್ಕೆ ನಬಾರ್ಡ್‌ ಆತಂಕ: ಸಾಲ ಕಡಿತದಿಂದ ಅನ್ಯಾಯ ಎಂದ ಸಿಎಂ; ನಿರ್ಮಲಾ ಭೇಟಿಗೆ ನಿರ್ಧಾರ

ಕೇಂದ್ರದ ಬಿಜೆಪಿ ಸರ್ಕಾರ ದಕ್ಷಿಣ ರಾಜ್ಯಗಳಿಗೆ, ಅದರಲ್ಲೂ ಕರ್ನಾಟಕದ ಮಟ್ಟಿಗೆ ಅನ್ಯಾಯ ಮಾಡುತ್ತಿದೆ ಎಂದಿರುವ ರಾಜ್ಯ ಸರ್ಕಾರ, ನಬಾರ್ಡ್ ಸಾಲದ ಇಳಿಕೆ ಸಂಬಂಧ ಚರ್ಚಿಸಲು ಕೇಂದ್ರ ವಿತ್ತ ಸಚಿವರ ಭೇಟಿಗೆ ನಿರ್ಧರಿಸಿದೆ.

Update: 2024-11-20 12:09 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD)ನಿಂದ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಇಳಿಕೆ ಸಂಬಂಧ ಚರ್ಚಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಭೇಟಿಗೆ ನಿರ್ಧರಿಸಿದ್ದಾರೆ.

ಆ ಮೂಲಕ ಕರ್ನಾಟಕದ ಕುರಿತಂತೆ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿರುವ ರಾಜ್ಯ ಸರ್ಕಾರ ಕೇಂದ್ರದ ನಿಲುವನ್ನು ಖಂಡಿಸಿದೆ. ಆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ದಕ್ಷಿಣ ರಾಜ್ಯಗಳಿಗೆ, ಅದರಲ್ಲೂ ಕರ್ನಾಟಕದ ಮಟ್ಟಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್‌ ಸರ್ಕಾರ ಪ್ರತಿಪಾದಿಸಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಧೋರಣೆ ಸರಿಯಾಗಿಲ್ಲ ಎಂದು ಖಂಡಿಸಲು ಹಾಗೂ ಕೇಂದ್ರ ಹಣಕಾಸು ಸಚಿವರ ಗಮನ ಸೆಳೆಯಲು ರಾಜ್ಯ ಕೇಂದ್ರ ಸರ್ಕಾರ ನಿರ್ಧಿಸಿದೆ.

"ನಾಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ಸಮಯ ಕೋರಲಾಗಿದೆ. ರಾಜ್ಯಕ್ಕೆ ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುವ ಸಾಲದ ಮೊತ್ತವನ್ನು ಕಳೆದ ವರ್ಷದ 5600 ಕೋಟಿ ರೂ.ಗಳಿಂದ , ಈ ವರ್ಷ 2340 ಕೋಟಿ ರೂ. ಗಳಿಗೆ ಇಳಿಸಲಾಗಿದೆ. ಆದ್ದರಿಂದ ಕೇಂದ್ರ ವಿತ್ತ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಳ್ಳಲಾಗುವುದು," ಎಂದು ಸಿದ್ದರಾಮಯ್ಯ ಅವರ ಸಚಿವಾಲಯ ತಿಳಿಸಿದೆ.

ರಾಜ್ಯಕ್ಕೆ ಎದುರಾಗಿದೆ ನಬಾರ್ಡ್‌ ಆತಂಕ

ಇತ್ತೀಚಿಗಿನ ಮಾಹಿತಿಯ ಪ್ರಕಾರ, ಕರ್ನಾಟಕಕ್ಕೆ ನಬಾರ್ಡ್‌, ಅಲ್ಪಾವಧಿ ಕೃಷಿ ಸಾಲ ಮಂಜೂರು ಮಿತಿಯನ್ನು ಕಡಿತಗೊಳಿಸಿತ್ತು. ಇದರಿಂದ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ಮತ್ತು ರಿಯಾ ಯಿತಿ ಬಡ್ಡಿ ದರದ ಸಾಲ ಸೌಲಭ್ಯಕ್ಕೆ ಹೊಡೆತ ಬಿದ್ದಿದೆ. ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ 35 ಲಕ್ಷ ರೈತರಿಗೆ ಒಟ್ಟು 25,000 ಕೋಟಿ ರೂ. ಅಲ್ಪಾವಧಿ ಬೆಳೆಸಾಲ ವಿತರಿಸುವ ಗುರಿ ವಿಫಲವಾಗುವ ಆತಂಕ ಕರ್ನಾಟಕಕ್ಕೆ ಎದುರಾಗಿದೆ.

ಕಳೆದ 5 ವರ್ಷಗಳಲ್ಲಿ ನಬಾರ್ಡ್ ಮಂಜೂರು ಮಾಡಿದ ಸಾಲದ ವಿವರ ಈ ರೀತಿ ಇದೆ. 2019-20 ರಲ್ಲಿ 4,200 ಕೋಟಿ ರೂ. (ಶೇ 15 ಏರಿಕೆ), 2020-21 5 ರಲ್ಲಿ 500 ಕೋಟಿ ರೂ. (ಶೇ 27 ಏರಿಕೆ), 2021-22ರಲ್ಲಿ 5,483 ಕೋಟಿ ರೂ. (ಶೇ 1 ಏರಿಕೆ), 2022-23ರಲ್ಲಿ 5,550 ಕೋಟಿ ರೂ. (ಶೇ 1 ಏರಿಕೆ), 2023-24 5,600 ಕೋಟಿ ರೂ. (ಶೇ 1 ಏರಿಕೆ) ಸಾಲ ಮಂಜೂರಾಗಿತ್ತು. ಆದರೆ, ಈ ಬಾರಿ (2024-25) 2,340 ಕೋಟಿ ರೂ ಸಾಲ ಮಂಜೂರಿಗೆ ಸರ್ಕಾರ ನಿರ್ಧರಿಸಿದ್ದು, ಅದು ಶೇ 58 ಇಳಿಕೆಯಾದಂತಾಗಿದೆ.

ನಬಾರ್ಡ್‌ ಶೇ. 4.5 ರಿಯಾಯಿತಿ ಬಡ್ಡಿ ದರದಲ್ಲಿ ವಾರ್ಷಿಕ ಅಲ್ಪಾವಧಿ ಕೃಷಿ ಸಾಲದ ಮಿತಿ ನಿಗದಿಪಡಿಸುತ್ತಿದ್ದು, ಅದು ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆಯಾಗುತ್ತದೆ. ಆದರೆ, ಕಳೆದ ವರ್ಷ 5,600 ಕೋಟಿ ರೂ. ಇದ್ದ ಸಾಲದ ಮಿತಿಯನ್ನು ನಬಾರ್ಡ್‌ ಈ ವರ್ಷ ಶೇ. 58 ಕಡಿತಗೊಳಿಸಿ 2,340 ಕೋಟಿ ರೂ.ಗಳನ್ನಷ್ಟೇ ಮಂಜೂರು ಮಾಡಿರುವುದು ಸರ್ಕಾರದ ಸಿಟ್ಟಿಗೆ ಕಾರಣವಾಗಿದೆ.

ಈ ಬಗ್ಗೆ ಹೇಳಿಕೆ ನೀಡಿದ್ದ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, "ನಬಾರ್ಡ್‌ ಕನಿಷ್ಠ 5,600 ಕೋಟಿ ರೂ. ಸಾಲ ಮಂಜೂರು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ. 14ರಂದೇ ಪತ್ರ ಬರೆದಿದ್ದಾರೆ," ಎಂದು ತಿಳಿಸಿದ್ದಾರೆ.

Tags:    

Similar News