ಬಹು ನಿರೀಕ್ಷಿತ 'ನಮ್ಮ ಮೆಟ್ರೋ' 3 ನೇ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ಬಹು ನಿರೀಕ್ಷಿತ ನಮ್ಮ ಮೆಟ್ರೋ 3 ನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

Update: 2024-08-17 08:23 GMT
ನಮ್ಮ ಮೆಟ್ರೋ
Click the Play button to listen to article

ಬಹು ನಿರೀಕ್ಷಿತ ನಮ್ಮ ಮೆಟ್ರೋ ಮೂರನೇ  ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಈ ಯೋಜನೆಗೆ  16,333 ಕೋಟಿ ಅಂದಾಜು ವೆಚ್ಚ ಯೋಜನೆ ರೂಪಿಸಲಾಗಿದೆ. ಹೊಸದಾಗಿ ಅನುಮೋದನೆಗೊಂಡಿರುವ ಮೆಟ್ರೋ 3ನೇ ಹಂತವು ಜೆ.ಪಿ.ನಗರದ ವೇಗಾ ಸಿಟಿ ಜಂಕ್ಷನ್‌ನಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 44.65 ಕಿ.ಮೀ ಮಾರ್ಗದ ಮೂಲಕ ಬೆಂಗಳೂರು ದಕ್ಷಿಣದ ಮೂಲಕ ಹಾದುಹೋಗುತ್ತದೆ. ಟ್ರಾಫಿಕ್ ದಟ್ಟಣೆಯನ್ನು  ನಿವಾರಿಸಲು ಮತ್ತು ನಗರದ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಸುಸ್ಥಿರ ಸಾರಿಗೆ ಪರ್ಯಾಯವನ್ನು ಒದಗಿಸುವ ನಿರೀಕ್ಷೆಯಿದೆ.

ಈ ಕುರಿತು ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ‘ನಮ್ಮ ಮೆಟ್ರೊ 3ನೇ ಹಂತಕ್ಕೆ ಅನುಮೋದನೆ ನೀಡಿರುವುದು ಮೋದಿ ಸರ್ಕಾರದ ವೇಗ ಮತ್ತು ದಕ್ಷತೆಗೆ ಸಾಕ್ಷಿಯಾಗಿದೆ. ನಮ್ಮ ಮೆಟ್ರೊದ ಹಂತ-3 ದ 2 ಕಾರಿಡಾರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಅನುಮೋದನೆ ನೀಡಿದ್ದಾರೆ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 

"ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಯೋಜನಾ ವರದಿಯನ್ನು ಸಲ್ಲಿಸಿತ್ತು. ಇದನ್ನು ಕೇಂದ್ರ ಸರ್ಕಾರ ಆದ್ಯತೆಯ ಮೇಲೆ ತೆಗೆದುಕೊಂಡಿತು. ಪರಿಷ್ಕೃತ ಯೋಜನಾ ವರದಿಯನ್ನು  ಸಲ್ಲಿಸಿದ ತಿಂಗಳೊಳಗೆ ಕೇಂದ್ರ ಸರ್ಕಾರ ತನ್ನ ಅನುಮೋದನೆಯನ್ನು ನೀಡಿದೆ. 

ಕೇಂದ್ರ ಸರ್ಕಾರದ ಈ ಯೋಜನೆಯ ಅನುಮೋದನೆ ಪ್ರಕ್ರಿಯೆಯ ಉದ್ದಕ್ಕೂ ಸಂಸದ ತೇಜಸ್ವಿ ಸೂರ್ಯ  ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಗರ ವ್ಯವಹಾರಗಳ ಸಚಿವಾಲಯ ಮತ್ತು ಅದರ ಅಧಿಕಾರಿಗಳೊಂದಿಗೆ ಅವರು ಆರು ಸಭೆಗಳನ್ನು ನಡೆಸಿದರು. ಸಂಸದ ಸೂರ್ಯ ಕಳೆದ ತಿಂಗಳು ಹೊಸದಾಗಿ ಸೇರ್ಪಡೆಗೊಂಡ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ ಅನುಮೋದನೆಯನ್ನು ತ್ವರಿತಗೊಳಿಸಿದರು. ಈ ಯೋಜನೆಗೆ ಕಳೆದ ವಾರ ಕೇಂದ್ರ ಹಣಕಾಸು ಸಚಿವಾಲಯದ ಒಪ್ಪಿಗೆ ದೊರೆತಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸಂತಸ ವ್ಯಕ್ತಪಡಿಸಿದ್ದು, ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಘೋಷಿಸಲು ಸಂತೋಷವಾಗಿದೆ ಎಂದು ತಮ್ಮ  ಎಕ್ಸ್‌ ಖಾತೆಯನ್ನು ಪೋಸ್ಟ್‌ ಮಾಡಿದೆ. 

44.65 ಕಿಮೀ ಮತ್ತು 31 ನಿಲ್ದಾಣಗಳನ್ನು ವ್ಯಾಪಿಸಿರುವ ಎರಡು ಹೊಸ ಕಾರಿಡಾರ್‌ಗಳೊಂದಿಗೆ ಬೆಂಗಳೂರು ತನ್ನ ಸಂಪರ್ಕವನ್ನು ಹೆಚ್ಚಿಸಲು ಸಿದ್ಧವಾಗಿದೆ. ಈ  15,611 ರೂ ಕೋಟಿ ಹೂಡಿಕೆಯು ನಮ್ಮ ನಗರದ ಕೈಗಾರಿಕಾ ಮತ್ತು ಐಟಿ ಕಾರಿಡಾರ್‌ಗಳನ್ನು ಸಂಪರ್ಕಿಸುತ್ತದೆ.  ಕರ್ನಾಟಕದ ಜನರನ್ನು ಸಶಕ್ತಗೊಳಿಸುತ್ತದೆ.

ಕರ್ನಾಟಕ ಸರ್ಕಾರವು ಈ ಪರಿವರ್ತಕ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಖಚಿತಪಡಿಸುತ್ತದೆ, ನಮ್ಮ ಎಲ್ಲಾ ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ. 

ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಸುಸಜ್ಜಿತ ಮೆಟ್ರೋ ಮಾರ್ಗದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿರುವ ಸೂರ್ಯ, ಕೇಂದ್ರದಿಂದ ಯೋಜನೆಯ ಆರಂಭಿಕ ಅನುಮತಿಗಾಗಿ ಒತ್ತಾಯಿಸಿದ್ದಾರೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸಾಗಿಸಲು ಮೆಟ್ರೋ ಮತ್ತು ಬಸ್ ಫೀಡರ್ ವ್ಯವಸ್ಥೆಗಳಂತಹ ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುವ ಅಗತ್ಯತೆಯ ಬಗ್ಗೆಯೂ ಅವರು ತಿಳಿಸಿದ್ದಾರೆ.

Tags:    

Similar News