ರಾಜ್ಯದಲ್ಲಿ ನ್ಯಾನೋ ಯೂರಿಯಾ ಬಳಕೆಗೆ ಸಚಿವ ಚಲುವರಾಯಸ್ವಾಮಿ ಸಲಹೆ
ರಾಜ್ಯದಲ್ಲಿ ಯೂರಿಯಾ ಕೊರತೆ ಕುರಿತು ರೈತರಲ್ಲಿ ಆತಂಕ ಮನೆ ಮಾಡಿರುವ ಬೆನ್ನಲ್ಲೇ, ನ್ಯಾನೋ ಯೂರಿಯಾದ ಲಭ್ಯತೆ ಮತ್ತು ಅದರ ಪರಿಣಾಮಕಾರಿತ್ವವನ್ನು ಬಗ್ಗೆ ಚಲುವರಾಯಸ್ವಾಮಿ ಮಾಹಿತಿ ನೀಡಿದರು.;
ಎನ್. ಚಲುವರಾಯಸ್ವಾಮಿ
ನ್ಯಾನೋ ಯೂರಿಯಾ ವಿಶ್ವದಾದ್ಯಂತ ಸಾಬೀತಾಗಿದೆ. ಇದು ಒಳ್ಳೆಯ ಇಳುವರಿ ನೀಡುತ್ತಿದೆ. ನ್ಯಾನೋ ಯೂರಿಯಾ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಸೌಧದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದಲ್ಲಿ ಯೂರಿಯಾ ಕೊರತೆ ಕುರಿತು ರೈತರಲ್ಲಿ ಆತಂಕ ಮನೆ ಮಾಡಿರುವ ಬೆನ್ನಲ್ಲೇ, ನ್ಯಾನೋ ಯೂರಿಯಾದ ಲಭ್ಯತೆ ಮತ್ತು ಅದರ ಪರಿಣಾಮಕಾರಿತ್ವವನ್ನು ಬಗ್ಗೆ ಮಾಹಿತಿ ನೀಡಿದರು.
"ಕಳೆದ ಒಂದು ವಾರದಿಂದ ರೈತರಿಗೆ ಮನವಿ ಮಾಡಲಾಗುತ್ತಿದ್ದು, ಮುಂದಿನ ವಾರವೂ ಇದರ ಪೂರೈಕೆ ಲಭ್ಯವಿರಲಿದೆ. ಲಭ್ಯತೆಯ ಕುರಿತು ಮಾಹಿತಿ ಫಲಕಗಳನ್ನು ಹಾಕಲು ಸಹ ಸೂಚನೆ ನೀಡಲಾಗಿದೆ ಎಂದು ಸೂಚಿಸಿದರು.
ಯೂರಿಯಾ ಕೊರತೆ ಮತ್ತು ಪೂರೈಕೆ
ರಾಜ್ಯದ ಐದಾರು ಜಿಲ್ಲೆಗಳಲ್ಲಿ ಮಾತ್ರ ಯೂರಿಯಾ ಕೊರತೆಯ ಸಮಸ್ಯೆ ಕಂಡುಬರುತ್ತಿದೆ. ಬಾಕಿ ಬರಬೇಕಿದ್ದ 88 ಸಾವಿರ ಮೆಟ್ರಿಕ್ ಟನ್ ಯೂರಿಯಾ ಶೀಘ್ರದಲ್ಲೇ ಲಭ್ಯವಾಗಲಿದೆ. ಆಗಸ್ಟ್ ತಿಂಗಳಿಗೆ ಬೇಕಾದ ಗೊಬ್ಬರವನ್ನು ರೈತರು ಈಗಲೇ ಖರೀದಿಸಲು ಮುಂದಾಗುತ್ತಿರುವುದು ಕೂಡ ಒಂದು ಕಾರಣ ಎಂದು ಅವರು ಹೇಳಿದರು.
ಸಾವಯವ ಗೊಬ್ಬರಗಳ ಬಳಕೆಗೆ ಒತ್ತು
ಯೂರಿಯಾ ಮತ್ತು ಡಿಎಪಿ (ಡೈ-ಅಮೋನಿಯಂ ಫಾಸ್ಫೇಟ್) ನಂತಹ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿದರೆ ಕೃಷಿ ಇಳುವರಿ ಕಡಿಮೆಯಾಗುವುದಿಲ್ಲ. ಸಾವಯವ ಗೊಬ್ಬರ ಬಳಸುವುದು ಸೂಕ್ತ. ಕೆಮಿಕಲ್ ಗೊಬ್ಬರದಿಂದ ಭೂಮಿ ಸಾರ ಕೂಡ ಹಾಳಾಗಲಿದೆ. ಹಸಿರು ಕ್ರಾಂತಿಯ ಸಮಯದಲ್ಲಿ ರೈತರು ಸಾವಯವ ಗೊಬ್ಬರಗಳನ್ನು ಬಳಸುತ್ತಿದ್ದರು ಎಂಬುದನ್ನು ಸ್ಮರಿಸಿದ ಸಚಿವರು, ಈಗಲೂ ಸರ್ಕಾರವು ಅರಿವು ಮೂಡಿಸುತ್ತಿದ್ದು, ಹಸಿರು ಗೊಬ್ಬರಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.