ಚಾರ್ಮಾಡಿ ಮೃತ್ಯುಂಜಯ ನದಿ ಬಳಿ ಒಂಟಿ ಸಲಗ ಪ್ರತ್ಯಕ್ಷ
ಹೊಸಮಠ ಪ್ರದೇಶದಲ್ಲಿ ಈ ಒಂಟಿ ಸಲಗ ಸುಮಾರು ಅರ್ಧ ತಾಸಿಗಿಂತ ಅಧಿಕ ಹೊತ್ತು ನೀರಿನಲ್ಲಿ ಆಟ ಆಡಿ ಬಳಿಕ ನದಿಯ ಕೆಳಭಾಗದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಅಗಾಗ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿರುತ್ತವೆ. ಇದೀಗ ಚಾರ್ಮಾಡಿ ಗ್ರಾಮದ ಮೈಕಾನ್, ಪರ್ಲಾಣಿ ಸ್ಥಳದಲ್ಲಿ ಭಾನುವಾರ ಮುಂಜಾನೆ 7 ಗಂಟೆ ಸುಮಾರಿಗೆ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಸವಾರಿ ನಡೆಸಿದೆ. ಜನನಿಬಿಡ ಪ್ರದೇಶದ ಮೂಲಕವೇ ಹೊಸಮಠ ಕಡೆಗೆ ತೆರಳಿದೆ.
ಹೊಸಮಠ ಪ್ರದೇಶದಲ್ಲಿ ಈ ಒಂಟಿ ಸಲಗ ಸುಮಾರು ಅರ್ಧ ತಾಸಿಗಿಂತ ಅಧಿಕ ಹೊತ್ತು ನೀರಿನಲ್ಲಿ ಆಟ ಆಡಿ ಬಳಿಕ ನದಿಯ ಕೆಳಭಾಗದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಕಾಡಾನೆ ಚಾರ್ಮಾಡಿಯಲ್ಲಿ ಕಂಡುಬಂದ ದಿನ ರಾತ್ರಿಯೆಲ್ಲ ಮುಂಡಾಜೆಯ ದುಂಬೆಟ್ಟುವಿನಲ್ಲಿ ತಿರುಗಾಟ ನಡೆಸಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆನೆಯನ್ನು ಕಾಡಿಗಟ್ಟಲು ಹರಸಹಾಸ ಮಾಡಿದ್ದರು.
ಚಾರ್ಮಾಡಿ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಪದೇ ಪದೆ ಕಾಡಾನೆಗಳ ದಾಳಿಯಾಗುತ್ತಲೇ ಇದ್ದು ಆ ಭಾಗದ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ, ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಆಗಮಿಸಿ ಪರಿಶೀಲನೆ ನಡೆಸಿದೆ.