Lok Sabha Election 2024 | ವಜ್ರವೂ ಸೇರಿ 9.64 ಕೋಟಿ ರೂಪಾಯಿ ವಶ!

ಚುನಾವಣಾ ಅಕ್ರಮ: 402 ಎಫ್‌ಐಆರ್‌ ದಾಖಲು;

Update: 2024-03-23 05:54 GMT
ವಜ್ರ (ಚಿತ್ರಕೃಪೆ: pexels )

ಸಾಮಾನ್ಯವಾಗಿ ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು, ಸೀರೆ, ಬಟ್ಟೆ ಹಾಗೂ ಉಡುಗೊರೆ ಹಂಚಿಕೆ ಜೋರಾಗುತ್ತದೆ. ಆದರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ವಜ್ರ ವಹಿವಾಟು ಸಹ ಸದ್ದು ಮಾಡುತ್ತಿದೆ! ಹೌದು, 9 ಲಕ್ಷ ರೂಪಾಯಿ ಮೌಲ್ಯದ ವಜ್ರಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದು, ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 9.64 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಜಾರಿಯಾದಾಗಿನಿಂದ ಚುನಾವಣಾ ಅಕ್ರಮಗಳೂ ಸಹ ಜೋರಾಗಿ ನಡೆಯುತ್ತಿವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಜ್ರಗಳನ್ನೂ ಜಪ್ತಿ ಮಾಡಲಾಗುತ್ತಿದೆ. ರಾಜ್ಯದ ಪ್ರಮುಖ ಪ್ರದೇಶಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಎಲ್ಲಾ ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ. ಇದೀಗ ಹಣವೂ ಸೇರಿದಂತೆ 36.41 ಕೋಟಿ ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇವುಗಳಲ್ಲಿ 15.67 ಲಕ್ಷ ರೂಪಾಯಿ ಮೊತ್ತದ ಉಚಿತ ಉಡುಗೊರೆಗಳು , ವಿವಿಧ ರೀತಿಯ ವಸ್ತುಗಳು ಸೇರಿದಂತೆ 1.63 ಕೋಟಿ ರೂಪಾಯಿಯನ್ನು ಜಪ್ತಿ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ. ಉಡುಗೊರೆಯೊಂದಿಗೆ ಮದ್ಯ ಹಾಗೂ ಮಾದಕ ವಸ್ತುಗಳನ್ನೂ ವಶಕ್ಕೆ ಪಡೆಯಲಾಗುತ್ತಿದೆ. 22.85 ಕೋಟಿ ರೂಪಾಯಿ ಮೌಲ್ಯದ 7.20 ಲಕ್ಷ ಲೀಟರ್ ಮದ್ಯ, 53.37 ಲಕ್ಷ ರೂಪಾಯಿ ಮೊತ್ತದ 52.12 ಕೆ.ಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಚಿನ್ನ, ಬೆಳ್ಳಿ ಹಾಗೂ ವಜ್ರವನ್ನೂ ವಶಕ್ಕೆ ಪಡೆಯಲಾಗಿದೆ. 1.27 ಕೋಟಿ ರೂಪಾಯಿ ಮೊತ್ತದ 2 ಕೆಜಿ ಚಿನ್ನ , 9 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಜಪ್ತಿ ಮಾಡಲಾಗಿದೆ. 


402 ಎಫ್ಐಆರ್ ದಾಖಲು

ಚುನಾವಣಾ ಅಕ್ರಮ ಹಾಗೂ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 402 ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ 65,432 ಶಸ್ತ್ರಾಸ್ತ್ರಗಳನ್ನು (ಹಿಂಪಡೆಯಲಾಗಿದೆ) ಠೇವಣಿ ಮಾಡಲಾಗಿದೆ. ಅಲ್ಲದೇ 831 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು,8 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದು ಮಾಡಲಾಗಿದೆ. ಸಿಆರ್‌ಪಿಸಿ ತಡೆಗಟ್ಟುವ ವಿಭಾಗದಡಿ 3,853 ಪ್ರಕರಣ ದಾಖಲಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ.  

Tags:    

Similar News