C T Ravi Case | ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗ; ಬೆಳಗಾವಿಯಿಂದ ಬೆಂಗಳೂರಿಗೆ ಸಿ ಟಿ ರವಿ ಕರೆತರುತ್ತಿರುವ ಪೊಲೀಸರು

ಪೊಲೀಸ್‌ ಬೆಂಗಾವಲಿನಲ್ಲಿ ರವಿ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಪೊಲೀಸ್‌ ವಾಹನವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ‌ ಆರ್.ಅಶೋಕ, ಮತ್ತಿತರರು ತಮ್ಮ ವಾಹನಗಳಲ್ಲಿ ಹಿಂಬಾಲಿಸುತ್ತಿದ್ದಾರೆ.;

Update: 2024-12-20 10:56 GMT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಸಿ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಎಂಎಲ್‌ಸಿ ಮತ್ತು ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಪೊಲೀಸರು ಕರೆತರುತ್ತಿದ್ದಾರೆ.

ಬೆಳಗಾವಿ 5ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಜಡ್ಜ್‌ ಸ್ಪರ್ಷಾ ಡಿ.ಸೋಜ ಅವರು ಶುಕ್ರವಾರ ಪ್ರರಣವನ್ನು ಬೆಳಗಾವಿಯಿಂದ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ನೀಡಿದ ಬಳಿಕ ಬೆಂಗಳೂರಿಗೆ ರವಿ ಅವರನ್ನು ಕರೆತರಲಾಗುತ್ತಿದೆ.

ಗುರುವಾರ ರಾತ್ರಿ ಬಂಧಿತರಾದ ರವಿ ಅವರನ್ನು ಶುಕ್ರವಾರ ಬೆಳಿಗ್ಗೆ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಆ ವೇಳೆ, ತನ್ನನ್ನು ಎನ್‌ಕೌಂಟರ್‌ ಮೂಲಕ ಸಾಯಿಸಲು ಯತ್ನ ನಡೆಯುತ್ತಿದೆ ಎಂದು ರವಿ ಹೇಳಿಕೆ ನೀಡಿದ್ದರು. ಅವರ ಜಾಮೀನು ಅರ್ಜಿ ಸಂಬಂಧ ಅಪರಾಹ್ನ ತೀರ್ಪು ಪ್ರಕಟಿಸುವುದಾಗಿ ಹೇಳಿದ್ದ ನ್ಯಾಯಾಲಯ, ಬಳಿಕ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿನಗಳ ನ್ಯಾಯಾಲಯಕ್ಕೆ ವರ್ಗಾಯಿಸಿತು̤

ಪೊಲೀಸ್‌ ಬೆಂಗಾವಲಿನಲ್ಲಿ ರವಿ ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದ್ದು, ಪೊಲೀಸ್‌ ವಾಹನವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ‌ ಆರ್.ಅಶೋಕ, ಮತ್ತಿತರರು ತಮ್ಮ ವಾಹನಗಳಲ್ಲಿ ಹಿಂಬಾಲಿಸುತ್ತಿದ್ದಾರೆ.

Tags:    

Similar News