ಔಟ್‌ಲುಕ್ ಸರ್ವೆ | ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕುವೆಂಪು ವಿವಿಗೆ 30ನೇ ಸ್ಥಾನ

ಔಟ್‌ಲುಕ್ ನಿಯತಕಾಲಿಕ ಪ್ರಕಟಿಸಿರುವ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಸ್ಥಾನ ಪಡೆದಿದೆ.

Update: 2024-08-06 12:41 GMT
ಕುವೆಂಪು ವಿಶ್ವವಿದ್ಯಾನಿಲಯ
Click the Play button to listen to article

ಔಟ್‌ಲುಕ್‌ ನಿಯತಕಾಲಿಕ ಪ್ರಕಟಿಸಿರುವ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ನಲ್ಲಿ ಕುವೆಂಪು ವಿವಿ 30ನೇ ಸ್ಥಾನ ಪಡೆದಿದೆ.

ದೇಶದ ಮುದ್ರಣ ಮಾಧ್ಯಮದ ಪ್ರಮುಖ ನಿಯತಕಾಲಿಕವಾದ ಔಟ್‌ಲುಕ್‌, ವಿವಿಧ ಮಾನದಂಡಗಳನ್ನು ಪರಿಗಣಿಸಿ ಭಾರತದ ಸಾರ್ವಜನಿಕ ವಲಯದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಗ್‌ ಅನ್ನು ಆ.3ರಂದು ಪ್ರಕಟಿಸಿದೆ. ಒಟ್ಟು ದೇಶದ 75 ಶಿಕ್ಷಣ ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಕರ್ನಾಟಕದ ಗ್ರಾಮೀಣ ಭಾಗದ ವಿವಿಯಾದ ಕುವೆಂಪು ವಿವಿ ಅಗ್ರ 30ನೇ ಸ್ಥಾನ ಪಡೆದಿದೆ.

ನಿಯತಕಾಲಿಕವು ಶೈಕ್ಷಣಿಕ ವಾತಾವರಣ, ಸಂಶೋಧನೆ, ಮೂಲಭೂತ ಸೌಕರ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳ ಐದು ಮಾನದಂಡಗಳ ಆಧಾರದಲ್ಲಿ ರ‍್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ. ಕುವೆಂಪು ವಿಶ್ವವಿದ್ಯಾಲಯವು ಒಟ್ಟು ಸಾವಿರ ಅಂಕಗಳಿಗೆ 877 ಅಂಕ ಗಳಿಸಿದೆ. ಇದೇ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಎಂಟನೇ ಸ್ಥಾನ ಗಳಿಸಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯವು 24ನೇ ಸ್ಥಾನದಲ್ಲಿದೆ. ಹಾಗೂ ಈ ಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮತ್ತು ತುಮಕೂರು ವಿವಿಗಳು ಕರ್ನಾಟಕದಿಂದ ಸ್ಥಾನ ಪಡೆದಿವೆ.

ನಿಯತಕಾಲಿಕವು ಪರಿಗಣಿಸಿರುವ ಮಾನದಂಡಗಳು ಇಂತಿವೆ: ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಟತೆ, ಔದ್ಯಮಿಕ ವಲಯ ಮತ್ತು ಉದ್ಯೋಗ ಕಲ್ಪಿಸುವಿಕೆ, ಮೂಲಭೂತ ಶೈಕ್ಷಣಿಕ ಸೌಲಭ್ಯಗಳು, ಆಡಳಿತ ಮತ್ತು ವಿಸ್ತರಣಾ ಕಾರ್ಯಕ್ರಮಗಳು ಹಾಗೂ ವೈವಿಧ್ಯತೆಯನ್ನು ಒಳಗೊಳ್ಳುವ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಂಡು ಒಟ್ಟು ಸಾವಿರ ಅಂಕಗಳಿಗೆ ಮೌಲ್ಯಮಾಪನ ಮಾಡಲಾಗಿದೆ.

Tags:    

Similar News