ಕೊಡಗು | ನೀರು ಕುಡಿಯಲು ಹೋದ ಕಾಡಾನೆ ನೀರುಪಾಲು

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಕಾಫೀತೋಟದ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕೆರೆಯಿಂದ ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿಯೇ ಮುಳುಗಿ ಧಾರುಣವಾಗಿ ಸಾವನ್ನಪ್ಪಿದೆ.

Update: 2024-08-30 10:09 GMT
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾಣೆಯೊಂದು ಕಾಫೀತೋಟವೊಂದರ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದೆ.

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ಕಾಫಿ ತೋಟವೊಂದರ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕೆರೆಯಿಂದ ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿಯೇ ಮುಳುಗಿ ಧಾರುಣವಾಗಿ ಸಾವನ್ನಪ್ಪಿದೆ.

ಈ ಘಟನೆ ನಡೆದಿದ್ದು, ಕೊಡುಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಬಳಿಯ ಕನ್ನಡಮಠ ಕಾಫಿ ತೋಟದಲ್ಲಿ. ಕೊಡಗಿನಲ್ಲಿ ಇತ್ತೀಚೆಗೆ ಆನೆ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕಾಡಾನೆಗಳ ಗುಂಪು ಕಾಣಿಸಿಕೊಂಡಿದೆ. ಇದೀಗ ಅಂದಾಜು 10 ವರ್ಷದ ಗಂಡು ಕಾಡಾನೆ ಕಾಫಿ ತೋಟದ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೇಲೆ ಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ.

ತೋಟಕ್ಕೆ ಕೆಲಸಕ್ಕೆಂದು ಹೋಗಿದ್ದ ಕಾರ್ಮಿಕರೊಬ್ಬರು ನೀರಿನಲ್ಲಿ ತೇಲುತ್ತಿದ್ದ ಆನೆಯ ಕಳೇಬರವನ್ನು ಕಂಡು ಅರಣ್ಯ ಇಲಾಖೆಯವರೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿಎಫ್ಒ ಜಗನ್ನಾಥ್, ಎಸಿಎಫ್ ಗೋಪಾಲ್, ಆರ್ಎಫ್ಒ ಶಿವರಾಂ, ವನ್ಯಜೀವಿ ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಹಾಗೂ ತಂಡ ಪರಿಶೀಲನೆ ನಡೆಸಿದರು.

ನೀರಿನಲ್ಲಿ ತೇಲುತ್ತಿದ್ದ ಆನೆಯ ಕಳೇಬರವನ್ನು ಹಗ್ಗದ ಸಹಾಯದಿಂದ ಕೆರೆಯ ದಡಕ್ಕೆ ತಂದು ಜೆಸಿಬಿ ಮೂಲಕ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆನೆ ಮೃತಪಟ್ಟು ಎರಡು ದಿನಗಳಾಗಿದೆ ಎಂದು ಅಂದಾಜಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಗುಂಡಿ ತೋಡಿ ಅಂತ್ಯಸಂಸ್ಕಾರ ಮಾಡಲಾಗಿದೆ.

ಅಂದಾಜು 2 ಕೆಜಿ ತೂಕದ ಆನೆಯ ಎರಡು ದಂತಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

ಕೊಡಗಿನಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳ ದಾಳಿ ಸಾಮಾನ್ಯವೆನ್ನುವಂತಾಗಿದೆ. ಆನೆ ದಾಳಿಗೆ ರೈತರು, ಜನಸಾಮನ್ಯರು ಬಲಿಯಾಗಿತ್ತಿರುವುದು ಒಂದೆಡೆಯಾದರೆ ಆಹಾರ ಅರಸಿ ನಾಡಿಗೆ ಬರುತ್ತಿರುವ ಕಾಡಾನೆಗಳು ತೆರೆದ ಬಾವಿ, ಕೆರೆಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿವೆ.

Tags:    

Similar News