Kasturi Rangan Report | ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ: ಡಾ ಉಲ್ಲಾಸ್ ಕಾರಂತ್

ಆಕಾಶದಿಂದ ನೋಡಿಕೊಂಡು ಅಧ್ಯಯನ ಮಾಡಿದ ವರದಿಗಳಿಂದ ಪರಿಸರ ಸಂರಕ್ಷಣೆಯಾಗುವುದಿಲ್ಲ ಎಂದು ವೈಲ್ಡ್ ವೈಫ್ ಕನ್ಸರ್ವೇಶನ್ ಸೊಸೈಟಿ ಆಫ್ ಇಂಡಿಯಾ ಮಾಜಿ ನಿರ್ದೇಶಕ, ಹಿರಿಯ ವನ್ಯಜೀವಿ ತಜ್ಞ ಡಾ ಉಲ್ಲಾಸ್ ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.;

Update: 2024-10-11 11:44 GMT
ಪಶ್ವಿಮ ಘಟ್ಟ

ಆಕಾಶದಿಂದ ನೋಡಿ ಅಧ್ಯಯನ ಮಾಡಿದ ವರದಿಗಳಿಂದ ಪರಿಸರ ಸಂರಕ್ಷಣೆಯಾಗುವುದಿಲ್ಲ ಎಂದು ಹೇಳುವ ಮೂಲಕ ವೈಲ್ಡ್ ವೈಫ್ ಕನ್ಸರ್ವೇಶನ್ ಸೊಸೈಟಿ ಆಫ್ ಇಂಡಿಯಾ ಮಾಜಿ ನಿರ್ದೇಶಕ, ಹಿರಿಯ ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತ್, ಮಾಧವ್‌ ಗಾಡ್ಗೀಳ್‌ ಮತ್ತು ಡಾ ಕಸ್ತೂರಿ ರಂಗನ್‌ ವರದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಂದು ಪರಿಸರ, ವನ್ಯಜೀವಿ ಸಂರಕ್ಷಣೆ ಕುರಿತ ಯಾವುದೇ ಯೋಜನೆಗಳು ಅನುಷ್ಠಾನವಾಗಲು ಜನರಿಂದ ವಿರೋಧ ಕೇಳಿಬರುತ್ತದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಮಾಧವ ಗಾಡ್ಗೀಳ್ ವರದಿ. ಈ ವರದಿಯಲ್ಲಿ ಇಡೀ ಗ್ರಾಮ, ತಾಲೂಕುಗಳನ್ನೇ ಸೇರಿಸಿಕೊಂಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಜನರನ್ನು ಒಳಗೊಂಡು ತಳಮಟ್ಟದ ಅಧ್ಯಯನವೇ ನಡೆದಿಲ್ಲ. ಈ ವರದಿಯ ಡ್ಯಾಮೇಜ್ ಕಂಟ್ರೋಲ್ ಮಾಡಲು ಕಸ್ತೂರಿ ರಂಗನ್ ವರದಿ ರೂಪಿಸಲಾಗಿದೆ. ಕಸ್ತೂರಿ ರಂಗನ್ ವರದಿ ಸ್ವೀಕಾರಾರ್ಹವಲ್ಲ ಎಂದರು.

ಪಶ್ಚಿಮಘಟ್ಟ ಹಲವಾರು ಪ್ರಮುಖ ಜೀವ ವೈವಿಧ್ಯತೆ. ಅರಣ್ಯ ಸಂಪತ್ತು ಹೊಂದಿರುವ ಭೂಪ್ರದೇಶ. ಅದರ ಸಂರಕ್ಷಣೆಗೆ ತಳಮಟ್ಟದಿಂದ ಕೂಡಿದ ಅಧ್ಯಯನವಾಗಬೇಕು.‌ ಸೂಕ್ಷ್ಮ ಪರಿಸರ ವಲಯವನ್ನು, ಅರಣ್ಯ ವ್ಯಾಪ್ತಿಯನ್ನು ವ್ಯವಸ್ಥಿತವಾಗಿ ಗುರುತಿಸಿ ಅಧ್ಯಯನ ನಡೆಸುವುದು ಇಂದಿನ ಅಗತ್ಯವಾಗಿದೆ. ಜನರನ್ನು ಜನಪ್ರತಿನಿಧಿಗಳನ್ನು ಒಳಗೊಂಡು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಅಧ್ಯಯನ ಮತ್ತು ವರದಿಗಳು ರೂಪುಗೊಳ್ಳಬೇಕು. ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದೇ ಹೋದರೆ ಮುಂದೆ ಬರುವ ಎಲ್ಲ ಪರಿಸರ ಸಂರಕ್ಷಣೆ ಯೋಜನೆಗಳನ್ನು ಜನರು ವಿರೋಧಿಸುತ್ತ ಹೋಗುತ್ತಾರೆ. ಇಂಥ ಸೂಕ್ಷ್ಮ ವಿಚಾರಗಳನ್ನು ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ಅರಿಯಬೇಕಿದೆ ಎಂದು ಸಲಹೆ ನೀಡಿದರು.

ಪರಿಸರ ಸಂರಕ್ಷಣೆ ಜತೆಗೆ ಅಭಿವೃದ್ಧಿಗೂ ಮಹತ್ವ ಕೊಡಬೇಕಿದೆ. ಅಭಿವೃದ್ಧಿ ಇಲ್ಲದಿದ್ದರೂ ಬದುಕಲು ಸಾಧ್ಯವಿಲ್ಲ. ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಇಚ್ಛಾಶಕ್ತಿ ನಮ್ಮಾದಾಗಬೇಕಿದೆ ಎಂದರು.

Tags:    

Similar News