HSRP NUMBER PLATE | ಸೆ.16ರಿಂದ 500 ರೂ. ದಂಡ ಖಚಿತ

ಏಪ್ರಿಲ್ 1, 2019ಕ್ಕೆ ಮುನ್ನ ನೋಂದಾಯಿತ ಎಲ್ಲ ವಾಹನಗಳ ಮಾಲೀಕರು ಸೆಪ್ಟೆಂಬರ್ 15 ರೊಳಗೆ HSRP ಅಳವಡಿಸಿಕೊಳ್ಳಬೇಕು; ರಾಜ್ಯದಲ್ಲಿರುವ 2 ಕೋಟಿಗೂ ಅಧಿಕ ವಾಹನಗಳ ಪೈಕಿ ಕೇವಲ ಶೇ.25ರಷ್ಟು ಮಾತ್ರ ಅಳವಡಿಕೆ ಆಗಿದೆ.

Update: 2024-09-12 10:47 GMT

ರಾಜ್ಯದಲ್ಲಿರುವ ವಾಹನ ಮಾಲೀಕರು ತಮ್ಮ ವಾಹನಕ್ಕೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ಇನ್ನು ಕೇವಲ ಮೂರು ದಿನ ಮಾತ್ರವಿದೆ. ಸೆಪ್ಟೆಂಬರ್ 16 ರಿಂದ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳ ಮಾಲೀಕರು 500 ರೂ.ದಂಡ ಪಾವತಿಸಬೇಕಾಗುತ್ತದೆ. ಪುನರಾವರ್ತಿತವಾದಲ್ಲಿ 1,000 ರೂ. ಕೊಡಬೇಕಾಗುತ್ತದೆ.

ಲಭ್ಯ ಮಾಹಿತಿ ಪ್ರಕಾರ, ರಾಜ್ಯದಲ್ಲಿರುವ 2 ಕೋಟಿಗೂ ಹೆಚ್ಚು ವಾಹನಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಿ ಕೊಂಡಿವೆ. 32,848 ಸರ್ಕಾರಿ ವಾಹನಗಳಲ್ಲಿ ಕೇವಲ ಶೇ. 57.7 ರಷ್ಟು ವಾಹನಗಳಿಗೆ ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ.

ʻಸೆ.16 ರಿಂದ ದಂಡ ವಿಧಿಸಲಾಗುವುದು. ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ವಿಶೇಷ ಜಾರಿ ಕಾರ್ಯಾಚರಣೆ ನಡೆಸಲಾಗುತ್ತದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆ ದಂಡ ವಿಧಿಸಬಹುದಾಗಿದೆ,ʼ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ (ಜಾರಿ, ದಕ್ಷಿಣ) ಸಿ. ಮಲ್ಲಿಕಾರ್ಜುನ್ ಹೇಳಿದರು.

ಎಚ್‌ಎಸ್‌ಆರ್‌ಪಿ ಪ್ರಾಮುಖ್ಯತೆ

"ವಾಹನ ಸುರಕ್ಷತೆ ಮತ್ತು ಗುರುತಿಸುವಿಕೆಗೆ ಎಚ್‌ಎಸ್‌ಆರ್‌ಪಿ ನಿರ್ಣಾಯಕ. ವಾಹನ ಸಂಬಂಧಿತ ಅಪರಾಧಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಮಲ್ಲಿಕಾರ್ಜುನ್ ವಿವರಿಸಿದರು. 

ʻವಾಹನಗಳ ಸುರಕ್ಷತೆ ಮತ್ತು ಪತ್ತೆ ಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು. ಅಳವಡಿಕೆಯಲ್ಲಿನ ವಿಳಂಬ ಕಳವಳಕರ,ʼ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು. 

ಯಾವ ವಾಹನಗಳಿಗೆ ಅನ್ವಯ?

ಏಪ್ರಿಲ್ 1, 2019ಕ್ಕೆ ಮೊದಲು ನೋಂದಣಿಯಾದ ವಾಹನಗಳ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು. 

ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪಡೆಯುವ ಹಂತಗಳು

1. https://transport.karnataka.gov.in (ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್) ಅಥವಾ www.siam.in ಗೆ ಲಾಗಿನ್ ಮಾಡಿ 

2. Book HSRP ಐಕಾನ್ ಮೇಲೆ ಕ್ಲಿಕ್ ಮಾಡಿ 

3. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ 

4. ನಿಮ್ಮ ವಾಹನದ ವಿವರಗಳನ್ನು ನೀಡಿ 

5. ಹತ್ತಿರದ ಡೀಲರ್ ಶೋರೂಂ ಅನ್ನು ಆಯ್ಕೆ ಮಾಡಿ 

6. ನಿಮ್ಮ ವಾಹನಕ್ಕೆ HSRP ಗಾಗಿ ಪಾವತಿ ಮಾಡಿ 

7. ನಿಮ್ಮ ಮೊಬೈಲ್ ಫೋನ್‌ನಲ್ಲಿ ಸ್ವೀಕರಿಸುವ OTP ಅನ್ನು ನಮೂದಿಸಿ 

8. HSRP ಅಳವಡಿಕೆಗೆ ಅನುಕೂಲಕರ ದಿನಾಂಕವನ್ನು ನಿಗದಿಪಡಿಸಿ 

Tags:    

Similar News