ಇನಾಂ ಭೂಮಿ ದೇವಸ್ಥಾನಗಳಿಗೆ ಹಿಂದಿರುಗಿಸಿ: ಬ್ರಾಹ್ಮಣ ಮಹಾಸಭಾ ಆಗ್ರಹ

ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದರೂ ವಕ್ಫ್ ಬೋರ್ಡ್ ಆಸ್ತಿಯನ್ನು ಮುಟ್ಟಿಲ್ಲ. ವಕ್ಫ್ ಭೂಮಿಯನ್ನು ಸರ್ಕಾರ ಸುರಕ್ಷಿಸುತ್ತಿದೆ. ಹಿಂದೂ ದೇವಾಲಯಗಳ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲ.

Update: 2024-11-17 09:11 GMT
‘ಇನಾಂ’ ಭೂಮಿಯನ್ನು ಸರ್ಕಾರ ವಾಪಸ್ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಒತ್ತಾಯಿಸಿದ್ದಾರೆ.

ದೇವಸ್ಥಾನ, ಅರ್ಚಕರಿಂದ ವಶಪಡಿಸಿಕೊಂಡಿರುವ ಸುಮಾರು 8 ಸಾವಿರ ಎಕರೆ ‘ಇನಾಂ’ ಭೂಮಿಯನ್ನು (ಹಿಂದಿನ ಅರಸರು ವಿವಿಧ ಉದ್ದೇಶಗಳಿಗಾಗಿ ಜನರಿಗೆ ಮತ್ತು ಸಂಸ್ಥೆಗಳಿಗೆ ನೀಡಿರುವ ಭೂಮಿ) ಸರ್ಕಾರ ವಾಪಸ್ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಒತ್ತಾಯಿಸಿದ್ದಾರೆ. 

ದಾವಣಗೆರೆಯಲ್ಲಿ ಶನಿವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು,‘ರಾಜರು ದೇಗುಲ ಅರ್ಚಕರಿಗೆ ಇನಾಂ ಭೂಮಿ ಮಂಜೂರು ಮಾಡಿದ್ದು, ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದರೂ ವಕ್ಫ್ ಬೋರ್ಡ್ ಆಸ್ತಿಯನ್ನು ಮುಟ್ಟಿಲ್ಲ. ವಕ್ಫ್ ಭೂಮಿಯನ್ನು ಸರ್ಕಾರ ಸುರಕ್ಷಿಸುತ್ತಿದೆ. ಹಿಂದೂ ದೇವಾಲಯಗಳ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲ ಎಂದು ಅವರು ಆರೋಪಿಸಿದರು. 

‘‘ವಕ್ಫ್ ಮಂಡಳಿಗೆ ನೀಡಿರುವ ಸ್ವಾಯತ್ತತೆಯನ್ನು ಮುಜರಾಯಿ ಇಲಾಖೆಗೆ ವಿಸ್ತರಿಸಿಲ್ಲ. ‘ಎ’ ದರ್ಜೆಯ ದೇವಸ್ಥಾನಗಳ ಆದಾಯ ಸರಕಾರಕ್ಕೆ ಬರುತ್ತದೆ. ಆದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹಣ ಬಳಕೆಯಾಗುತ್ತಿಲ್ಲ, ದೇವಸ್ಥಾನಗಳು ಇಲ್ಲದ ನಿಯಮಗಳಿಗೆ ಒಳಪಟ್ಟಿವೆ. ಚರ್ಚುಗಳು ಮತ್ತು ಮಸೀದಿಗಳ ಮೇಲೆ ಹೇರಲಾಗಿರುವ ಹಿಂದೂ ದೇವಾಲಯಗಳಿಗೂ ಸ್ವಾಯತ್ತತೆಯನ್ನು ನೀಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಕೇಂದ್ರ ಸರ್ಕಾರ ಕಲ್ಪಿಸಿದ ಶೇ 10ರಷ್ಟು ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ತಿಳಿಸಿದ ಅವರು, ಇಡಬ್ಲ್ಯುಎಸ್ ಸವಲತ್ತನ್ನು ಕೇಂದ್ರ ಸರ್ಕಾರ 2019ರಲ್ಲಿ ಕಲ್ಪಿಸಿದೆ. ರಾಜ್ಯದಲ್ಲಿ ಈ ಸೌಲಭ್ಯ ನೀಡಲು ಯಾವುದೇ ಪಕ್ಷ ಆಸಕ್ತಿ ತೋರುತ್ತಿಲ್ಲ. ಸರ್ಕಾರದ ಗಮನ ಸೆಳೆಯುವ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಹೀಗಾಗಿ, ನ್ಯಾಯಾಂಗ ಹೋರಾಟಕ್ಕೆ ಮುಂದಾಗುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದರು. 

Tags:    

Similar News