'ಕರಿಯ-2', 'ಗಣಪ' ಚಿತ್ರಗಳ ನಟ ಸಂತೋಷ್ ಬಾಲರಾಜ್ ಇನ್ನಿಲ್ಲ

ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.;

Update: 2025-08-05 06:30 GMT

ಸಂತೋಷ್ ಬಾಲರಾಜ್

ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್ ಬಾಲರಾಜ (34)ಮಂಗಳವಾರ ನಿಧನ ಹೊಂದಿದ್ದಾರೆ. ‘ಕರಿಯ 2’, ‘ಗಣಪ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 

ಕಳೆದ ಕೆಲ ದಿನಗಳಿಂದ ಸಂತೋಷ್‌ ಅವರು ಜಾಂಡೀಸ್‌ ಕಾಯಿಲೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಬನಶಂಕರಿಯ ಸಾಗರ್ ಅಪೋಲೊ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಆದಾಗ್ಯೂ, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.

ʼಕೆಂಪ’ ಸಿನಿಮಾ ಮೂಲಕ ಸಂತೋಷ್ ಬಾಲರಾಜ್ ಚಿತ್ರರಂಗ ಪ್ರವೇಶಿಸಿದ್ದರು. ಆ ಬಳಿಕ ಅವರು ‘ಕರಿಯ 2’, ‘ಜನ್ಮ’ ಮತ್ತು ‘ಗಣಪ’ ಸಿನಿಮಾಗಳಲ್ಲಿ ನಟಿಸಿದ್ದರು. ಸಂತೋಷ್‌ ಬಾಲರಾಜ್‌ ಅವರ ತಂದೆಯಾಗಿರುವ ‘ಕರಿಯ’ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಕಳೆದ ವರ್ಷ ನಿಧನ ಹೊಂದಿದ್ದರು. ಸಂತೋಷ್ ನಟನೆಯ ‘ಬರ್ಕ್ಲಿ’ ಮತ್ತು ‘ಸತ್ಯಂ’ ಸಿನಿಮಾಗಳು ಬಿಡುಗಡೆ ಆಗಬೇಕಿವೆ.

Tags:    

Similar News