ಮರೆಯದ ಮಾಣಿಕ್ಯ | ಅಪ್ಪು ಮರೆಯಾಗಿ ಇಂದಿಗೆ ಮೂರು ವರ್ಷ

2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ನಿಧನರಾದರು. ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬೆಂಗಳೂರಿನ ಕಂಠೀವರ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ಮಕ್ಕಳು, ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ.;

Update: 2024-10-29 06:20 GMT
ಡಾ. ಪುನೀತ್‌ ರಾಜ್‌ಕುಮಾರ್‌
Click the Play button to listen to article

ಸ್ಯಾಂಡಲ್‌ವುಡ್‌ ನಟ ಪವರ್‌ಸ್ಟಾರ್‌ ಪುನೀತ್ ರಾಜ್​ಕುಮಾರ್ ಮರೆಯಾಗಿ ಇಂದಿಗೆ ಮೂರು ವರ್ಷ ಕಳೆದಿದೆ.

ಇಂದು ಅವರ ಮೂರನೇ ಪುಣ್ಯತಿಥಿ.  ಕನ್ನಡಿಗರು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ನೆನಪು ಅಚ್ಚಳಿಯದೆ ಉಳಿದಿದೆ. ಅಪ್ಪು ದೈಹಿಕವಾಗಿ ನಮ್ಮಲ್ಲಿ ಇಲ್ಲದಿದ್ದರೂ ಅವರನ್ನು ಅಭಿಮಾನಿಗಳು ನೂರಾರು ಬಗೆಯಲ್ಲಿ ಜೀವಂತವಾಗಿರಿಸಿದ್ದಾರೆ. 

2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ನಿಧನರಾದರು. ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬೆಂಗಳೂರಿನ ಕಂಠೀವರ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಅವರು  ಮಕ್ಕಳು, ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ವರನಟ ಡಾ.ರಾಜ್ ಕುಮಾರ್‌ ಮತ್ತು ನಿರ್ಮಾಪಕಿ ಪಾರ್ವತಮ್ಮ ಅವರ ಕೊನೆಯ ಕುಡಿಯಾಗಿ, ಮಾರ್ಚ್ 17, 1975ರಲ್ಲಿ ಪುನೀತ್ ಜನಿಸಿದ್ದರು. ಮನೆಯಲ್ಲಿ ಮುದ್ದಿನ ಮಗನಾಗಿದ್ದ ಅವರು, ಬಾಲ್ಯದಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟವರು. ಸುಮಾರು 48 ಚಿತ್ರಗಳಲ್ಲಿ ನಟಿಸಿದ್ದಾರೆ. 50 ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಕೂಡ ಇವರಿಗೆ ಬಂದಿತ್ತು. 

ಪುನೀತ್‌ ರಾಜ್‌ಕುಮಾರ್‌ ಅವರು ಅಂಧರು, ಬಡವರು, ಅನಾಥರ ಮೇಲೆ ಬಹಳಷ್ಟು ಕಾಳಜಿ ಹೊಂದಿದ್ದರು. ಅವರು ಅನಾಥ ಮಕ್ಕಳಿಗೆ ತಂದೆಯಾಗಿ, ಮೂಕ ಪ್ರಾಣಿಗಳಿಗೆ ದೇವರಾಗಿದ್ದವರು. ನಟನಾಗಿ ಮಾತ್ರವಲ್ಲದೆ, ಒಬ್ಬ ಆದರ್ಶ ತಂದೆಯಾಗಿ, ಪತಿಯಾಗಿ, ಮನೆಮಗನಾಗಿ, ಕನ್ನಡಿಗನಾಗಿ, ಸದಾ ಗೌರವಿಸು, ಎಲ್ಲರ ಆದರ್ಶದ ವ್ಯಕ್ತಿಯಾಗಿ ಪುನೀತ್‌ ಇಂದು ಜೀವ ಮಣ್ಣಾದ ಮೂಲಕವೂ ನಾಡಿನ ಉದ್ದಗಲಕ್ಕೆ ಮಾತ್ರವಲ್ಲದೆ ಹೊರ ರಾಜ್ಯ, ಹೊರ ದೇಶಗಳಲ್ಲೂ ಕೋಟ್ಯಂತ ಜನರ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ನಿಜ ಅರ್ಥದಲ್ಲಿ ಅಮರರಾಗಿದ್ದಾರೆ.

Tags:    

Similar News