'ನಂದಿನಿ' ಬಿಟ್ಟು ಇತರೆ ತುಪ್ಪ ತಪಾಸಣೆ: ಸಚಿವ ದಿನೇಶ್ ಗುಂಡೂರಾವ್

'ನಂದಿನಿ ಬ್ರಾಂಡ್ ಹೊರತುಪಡಿಸಿ ಉಳಿದೆಲ್ಲ ಸಂಸ್ಥೆಗಳ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸುವಂತೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.;

Update: 2024-09-24 08:42 GMT
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Click the Play button to listen to article

'ನಂದಿನಿ ಬ್ರಾಂಡ್ ಹೊರತುಪಡಿಸಿ ಉಳಿದೆಲ್ಲ ಸಂಸ್ಥೆಗಳ ತುಪ್ಪದ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸುವಂತೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ರಾಜ್ಯದಲ್ಲಿ ಮಾರಾಟ ಆಗುತ್ತಿರುವ ನಂದಿನಿ ತುಪ್ಪವನ್ನು ಬಿಟ್ಟು, ಇತರ ಎಲ್ಲ ತುಪ್ಪಗಳ ಮಾದರಿ ಸಂಗ್ರಹಿಸಿ, ಪರಿಶೀಲಿಸಿ ಗುಣಮಟ್ಟ ಕಾಪಾಡಲು ಸೂಚಿಸಲಾಗಿದೆ. ದೇವಸ್ಥಾನಗಳಲ್ಲಿ ಕೊಡುವ ಪ್ರಸಾದಗಳ ಮಾದರಿ ಪರೀಕ್ಷಿಸುವ ಬದಲು, ಬಳಸುವ ತುಪ್ಪದ ಪರಿಶೀಲನೆ ಕೈಗೊಳ್ಳುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ' ಎಂದರು.

'ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ತುಪ್ಪ ಪೂರೈಕೆ ಆಗುತ್ತಿದೆ. ಈ ಎಲ್ಲ ತುಪ್ಪಗಳ ಮಾದರಿ ಸಂಗ್ರಹಿಸಿ ಪರಿಶೀಲಿಸಲು ಸೂಚಿಸಲಾಗಿದೆ. ತಿರುಪತಿ ಲಾಡು ವಿಚಾರದಲ್ಲಿ ಜನರಲ್ಲಿ ಬಹಳ ಗೊಂದಲ ಆರಂಭವಾಗಿರುವುದು ಆಘಾತಕಾರಿ. ಹೀಗಾಗಿ, ರಾಜ್ಯದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ' ಎಂದರು.

Tags:    

Similar News