ಕಮಲ್ ಹಾಸನ್‌ರ ಕ್ಷಮೆ ಕೋರದಿದ್ದರೆ ‘ಥಗ್ ಲೈಫ್’ ಚಿತ್ರಕ್ಕೆ ನಿಷೇಧ: ಸಚಿವ ಶಿವರಾಜ ತಂಗಡಗಿ

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, "ಕನ್ನಡ ಭಾಷೆಗೆ ಅವಮಾನ ಮಾಡಿದರೆ ಎಂತಹ ದೊಡ್ಡ ವ್ಯಕ್ತಿಯಾದರೂ ಸಹಿಸುವುದಿಲ್ಲ. ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಚಿತ್ರಕ್ಕೆ ನಿಷೇಧ ಹೇರಲು ಒತ್ತಾಯಿಸುವೆ" ಎಂದು ಹೇಳಿದರು.;

Update: 2025-05-28 11:52 GMT

ನಟ ಕಮಲ್ ಹಾಸನ್‌ರ "ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ವಿವಾದಾತ್ಮಕ ಹೇಳಿಕೆಗೆ ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಈ ಹೇಳಿಕೆಗೆ ಕಮಲ್ ಹಾಸನ್ ಕ್ಷಮೆಯಾಚಿಸಲೇಬೇಕು. ತಪ್ಪು ಒಪ್ಪಿಕೊಳ್ಳದೇ ಹೋದರೆ ಅವರ 'ಥಗ್ ಲೈಫ್' ಚಿತ್ರದ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, "ಕನ್ನಡ ಭಾಷೆಗೆ ಅವಮಾನ ಮಾಡಿದರೆ ಎಂತಹ ದೊಡ್ಡ ವ್ಯಕ್ತಿಯಾದರೂ ಸಹಿಸುವುದಿಲ್ಲ. ಕಮಲ್ ಹಾಸನ್ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಚಿತ್ರಕ್ಕೆ ನಿಷೇಧ ಹೇರಲು ಒತ್ತಾಯಿಸುವೆ" ಎಂದು ಹೇಳಿದರು.

ಕಮಲ್​ ಹೇಳಿಕೆಗೆ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಈ ಒತ್ತಾಯಕ್ಕೆ ಬೆಂಬಲ ಸೂಚಿಸಿವೆ. ಕಮಲ್ ಅವರ ಹೇಳಿಕೆಯಿಂದ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. "ಕನ್ನಡಕ್ಕೆ 2,000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಲ್ಲ, ಎರಡೂ ಸಹೋದರ ದ್ರಾವಿಡ ಭಾಷೆಗಳು" ಎಂದು ಭಾಷಾ ತಜ್ಱರು ಅಭಿಪ್ರಾಯಪಟ್ಟಿದ್ದರು.

ಈ ವಿವಾದಾತ್ಮಕ ಹೇಳಿಕೆ ನೀಡಿದ ಸಂದರ್ಭದಲ್ಲಿ ನಟ ಶಿವರಾಜ್‌ಕುಮಾರ್ ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರೂ ಪ್ರತಿಕ್ರಿಯಿಸದಿರುವುದು ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಬಗ್ಗೆ ಸಚಿವ ತಂಗಡಗಿ, "ಶಿವರಾಜ್‌ಕುಮಾರ್ ಈಗಲಾದರೂ ಖಂಡಿಸಲಿ" ಎಂದು ಹೇಳಿದ್ದಾರೆ. 

Tags:    

Similar News