ಪಾಕಿಸ್ತಾನದಲ್ಲಿ ಪರಮಾಣು ವಿಕಿರಣ ಸೋರಿಕೆ ಆರೋಪಗಳನ್ನು ತಿರಸ್ಕರಿಸಿದ ಐಎಇಎ

ಆಪರೇಷನ್ ಸಿಂದೂರ್‌ ಸಮಯದಲ್ಲಿ ಪಾಕಿಸ್ತಾನದ ಪರಮಾಣು ಸಂಗ್ರಹಕ್ಕೆ ಹಾನಿಯಾಗಿದೆ ಎಂಬ ಸುಳ್ಳು ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ನಂತರ ಈ ಸ್ಪಷ್ಟೀಕರಣ ಬಂದಿದೆ.;

Update: 2025-05-15 10:54 GMT

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯು ಶಾಂತಿಯುತ ಅಭಿವೃದ್ಧಿಗಾಗಿ ಪರಮಾಣು ಶಕ್ತಿಯ ಬಳಕೆಯನ್ನು ನಿಯಂತ್ರಿಸುತ್ತದೆ ಮತ್ತು ಉತ್ತೇಜಿಸುತ್ತದೆ. 

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಉದ್ವಿಗ್ನತೆ ಬಳಿಕ ಪಾಕಿಸ್ತಾನದ ಸರ್ಗೋಧಾ ಕಿರಾನಾ ಹಿಲ್ಸ್ ಪರಮಾಣು ಸ್ಥಾವರದಿಂದ ವಿಕಿರಣ ಸೋರಿಕೆಯಾಗಿದೆ ಎಂಬ ಊಹಾಪೋಹಗಳನ್ನು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ತಳ್ಳಿಹಾಕಿದೆ. ಪಾಕಿಸ್ತಾನದ ಯಾವುದೇ ಪರಮಾಣು ಕೇಂದ್ರದಿಂದ ವಿಕಿರಣ ಸೋರಿಕೆಯಾದ ಘಟನೆ ನಡೆದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಭಾರತವು ಪಾಕಿಸ್ತಾನದ ಪರಮಾಣು ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಅದಕ್ಕೆ ಹಾನಿ ಮಾಡಿದೆ ಎಂಬ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಪಾಕಿಸ್ತಾನದಲ್ಲಿರುವ ಯಾವುದೇ ಪರಮಾಣು ತಾಣವನ್ನು ಗುರಿಯಾಗಿಸಿಕೊಂಡ ವರದಿಗಳನ್ನು ಭಾರತೀಯ ಮಿಲಿಟರಿ ಅಧಿಕಾರಿಗಳು ನಿರಾಕರಿಸಿದರೂ, ಸಾಮಾಜಿಕ ಮಾಧ್ಯಮಗಳಲ್ಲಿನ ಅನೇಕ ತಜ್ಞರು ಅಮೆರಿಕವು ತನ್ನ ಪರಮಾಣು ಭದ್ರತಾ ಬೆಂಬಲ ವಿಮಾನ B350 ಎಎಂಎಸ್ಅ ನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ ಎಂದು ಹೇಳಿತ್ತು. ಇದೀಗ ವಿಶ್ವಸಂಸ್ಥೆಯ ಪರಮಾಣು ಮೇಲ್ವಿಚಾರಣಾ ಸಂಸ್ಥೆ ಸ್ಪಷ್ಟನೆ ನೀಡಿದೆ. 

ಸೋರಿಕೆಯ ಬಗ್ಗೆ ಅಮೆರಿಕ ಹೇಳಿದ್ದೇನು?

ಮೇ 13ರಂದು ವಾಷಿಂಗ್ಟನ್‌ನಲ್ಲಿ ನಡೆದ ಅಮೆರಿಕದ ವಿದೇಶಾಂಗ ಇಲಾಖೆಯ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಪರಮಾಣು ತಾಣಗಳ ಮೇಲಿನ ದಾಳಿಗೆ ಸಂಬಂಧಿಸಿದ ಇದೇ ರೀತಿಯ ಪ್ರಶ್ನೆಯನ್ನು ಕೇಳಲಾಗಿತ್ತು. ಪಾಕಿಸ್ತಾನದ ತಾಣಗಳಲ್ಲಿ ಪರಮಾಣು ವಿಕಿರಣ ಸೋರಿಕೆಯಾಗಿದೆ ಎಂಬ ವರದಿಗಳ ನಂತರ ಅಮೆರಿಕವು ಇಸ್ಲಾಮಾಬಾದ್ ಅಥವಾ ಪಾಕಿಸ್ತಾನಕ್ಕೆ ಯಾವುದೇ ತಂಡವನ್ನು ಕಳುಹಿಸಿದೆಯೇ ಎಂದು ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಥಾಮ್ ಪಿಗ್ಗೋಟ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಇದರ ಬಗ್ಗೆ ಈ ಸಮಯದಲ್ಲಿ ನನ್ನ ಬಳಿ ಪೂರ್ವವೀಕ್ಷಣೆ ಮಾಡಲು ಏನೂ ಇಲ್ಲ ಎಂದು ಅವರು ಉತ್ತರಿಸಿದ್ದರು. 

'ನಮಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು'

ಪಾಕಿಸ್ತಾನದ ಪರಮಾಣು ನೆಲೆಯನ್ನು ಹೊಡೆದುರುಳಿಸಲಾಗಿದೆ ಎಂಬ ವದಂತಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಏರ್ ಮಾರ್ಷಲ್ ಎ.ಕೆ. ಭಾರ್ತಿ, ಘಟನೆಯ ಬಗ್ಗೆ ತನಗೆ ತಿಳಿದಿಲ್ಲ. ಕಿರಾನಾ ಹಿಲ್ಸ್‌ನಲ್ಲಿ ಕೆಲವು ಪರಮಾಣು ಸ್ಥಾಪನೆಗಳಿವೆ ಎಂದು ನಮಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ನಮಗೆ ಈಗ ಅದರ ಬಗ್ಗೆ ತಿಳಿಯಿತು. ನಾವು  ಹೊಡೆಯಲು ಹೇಳಿದ ಗುರಿಗಳ ಪಟ್ಟಿಯಲ್ಲಿ ಅದು ಇರಲಿಲ್ಲ ಎಂದು ಹೇಳಿದ್ದರು. 

Tags:    

Similar News