ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ: ಎಚ್‌.ಡಿ. ಕುಮಾರಸ್ವಾಮಿ

ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ, ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ. ದೇಶದ ಕಾನೂನನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ ಏನು ತೀರ್ಪು ಬೇಕು ಅದು ನ್ಯಾಯಾಲಯ ಕೊಡುತ್ತದೆ. ಕಾನೂನಿನ ಒಳಗೆ ಇದ್ದರೆ ಏನು ಬೇಕಾದರೂ ಆಗಬಹುದು ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Update: 2024-09-24 13:36 GMT

ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ, ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ. ದೇಶದ ಕಾನೂನನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ ಏನು ತೀರ್ಪು ಬೇಕು ಅದು ನ್ಯಾಯಾಲಯ ಕೊಡುತ್ತದೆ. ಕಾನೂನಿನ ಒಳಗೆ ಇದ್ದರೆ ಏನು ಬೇಕಾದರೂ ಆಗಬಹುದು!

ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್‌ ತೀರ್ಪಿನ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಹೀಗಿತ್ತು!

ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, "ನಾನು ಸಿದ್ದರಾಮಯ್ಯ ಅವರಿಗೆ ಏನಾನೂ ಹೇಳಲ್ಲ. ನನ್ನ ಅಭಿಪ್ರಾಯ ನಾನು ಹೇಳಲ್ಲ. ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ನೈತಿಕತೆ ಏನು ಅನ್ನೊದು ಕ್ಲಿಯರ್ ಆಗಬೇಕು. ಗ್ರೇಟ್ ಪಾಲಿಟಿಷಿಯನ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ, ಮಾಡಲಿ, ಉತ್ತರ ಕೊಡುತ್ತೇನೆ. ಪ್ರಾಸಿಕ್ಯೂಷನ್ ಪ್ರಕರಣ ಕ್ಲಿಯರ್ ಆದ ಬಳಿಕ ಮಾತನಾಡುತ್ತೇನೆ," ಎಂದು ಅವರು ತಿಳಿಸಿದರು. "ಸಿಎಂ ಪ್ರಾಸಿಕ್ಯೂಶನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಯಾವುದೇ ತೀರ್ಮಾನ ಆಗದೇ ಇದ್ದರೂ ನನ್ನನ್ನು ಆರೋಪಿ ಮಾಡುತ್ತಿದ್ದಾರೆ. ನನ್ನ ಮೇಲಿನ ಆರೋಪ ಎಲ್ಲಾ ಮುಗಿಯಲಿ, ಅದೆಲ್ಲಾ ಮುಗಿದ ಮೇಲೆ ಮಾತಮಾಡುತ್ತೇನೆ," ಎಂದೂ ಅವರು ಹೇಳಿದರು. 

"ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಾರಾ? ಜಾಮೀನಿನ ಮೇಲಿದ್ದಾರೆ," ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, " ಸಿಎಂ ನೈತಿಕ ಹೊಣೆ ಹೊರಲಿಲ್ಲ ಅಂದರೆ, ಹೊತ್ತುಕೊಳ್ಳಿ ಎಂದು ನಾನು‌ ಹೇಳಲು ಆಗುತ್ತಾ? ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಲು ಪ್ರಯತ್ನಿಸಿದ್ದಾರೆ ಎಂದರು. " ನಾನು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ನಾಲ್ಕೈದು ಮಂದಿ ಬಿಡಾಡಿ ಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ, ಅವರಿಗೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಇನ್ನೂ ಅನುಮಾನ ಇದೆ. ನಾನು ಇದನ್ನು ಷಡ್ಯಂತ್ರ ಅನ್ನವುದಿಲ್ಲ, ಕುಮಾರಸ್ವಾಮಿ ಕೇಂದ್ರ ಸಚಿವನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಜನರ ನಡುವೆ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ನನ್ನ ವಿರುದ್ಧ ಯಾವ ಬಿಡಾಡಿಗಳು ಏನೂ ಮಾಡಲು ಆಗಲ್ಲ. ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಹೇಳುತ್ತಿದೇನೆ ಎಂದು ಸಚಿವರು ತಿಳಿಸಿದರು. ಅವರು ನಾಗಮಂಗಲದ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.

Tags:    

Similar News