Namma Metro | ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗಕ್ಕೆ ಹಣಕಾಸು ಇಲಾಖೆ ಒಪ್ಪಿಗೆ

ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ 36.59 ಕಿಮೀ ಮಾರ್ಗದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸಚಿವ ಸಂಪುಟದ ಮುಂದೆ ಈ ತಿಂಗಳ ಅಂತ್ಯದ ವೇಳೆಗೆ ವಿವರ ಯೋಜನಾ ವರದಿ (ಡಿಪಿಆರ್) ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.;

Update: 2024-11-07 13:37 GMT
ನಮ್ಮ ಮೆಟ್ರೋ
Click the Play button to listen to article

ಹೆಬ್ಬಾಳ-ಸರ್ಜಾಪುರ ನಡುವಿನ 'ನಮ್ಮ ಮೆಟ್ರೊ' ಹಂತ 3ಎ ಕಾರಿಡಾರ್ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್ ಸಲ್ಲಿಸಿರುವ ವಿಸ್ತ್ರತ ಯೋಜನಾ ವರದಿಗೆ(ಡಿಪಿಆರ್) ಹಣಕಾಸು ಇಲಾಖೆ ಅನುಮೋದನೆ ನೀಡಿದೆ. 

ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ 36.59 ಕಿಮೀ ಮಾರ್ಗದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಈ ತಿಂಗಳ ಅಂತ್ಯದ ವೇಳೆಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ರಾಜ್ಯ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ನಮ್ಮ ಮೆಟ್ರೊ' 17 ಎತ್ತರಿಸಿದ, 11 ನೆಲದಡಿಯ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಹೆಬ್ಬಾಳ, ಗಂಗಾನಗರ ಮತ್ತು ಪಶು ವೈದ್ಯಕೀಯ ಕಾಲೇಜು ನಿಲ್ದಾಣದವರೆಗೆ ಎತ್ತರಿಸಿದ ಮಾರ್ಗ ಇರಲಿದೆ. ಅಲ್ಲಿಂದ ಕೋರಮಂಗಲ ಮೂರನೇ ಬ್ಲಾಕ್ ವರೆಗೆ 14.5 ಕಿ.ಮೀ. ಸುರಂಗ ಮಾರ್ಗವನ್ನು ಹೊಂದಿದೆ. ಅಲ್ಲಿಂದ ಮುಂದಕ್ಕೆ ಸರ್ಜಾಪುರವರೆಗೆ ಮತ್ತೆ ಎತ್ತರಿಸಿದ ಮಾರ್ಗ ಇರಲಿದೆ. ಒಟ್ಟು 22.1 ಕಿ.ಮೀ. ಎತ್ತರಿಸಿದ ಮಾರ್ಗವು ಸೇರಿದಂತೆ ಒಟ್ಟು 36.6 ಕಿ.ಮೀ. ಉದ್ದದ ಮಾರ್ಗ ಇದಾಗಿದೆ. 

28,405 ಕೋಟಿ ಅಂದಾಜು ಮೊತ್ತದ ಯೋಜನೆ ಆಗಿರುವುದರಿಂದ ಸಂಪುಟ ಸಭೆಯಲ್ಲಿ ಚರ್ಚಿಸುವ ಮೊದಲು ಆರ್ಥಿಕ ಪರಿಣಾಮದ ಬಗ್ಗೆ ಹಣಕಾಸು ಇಲಾಖೆ ಪರಿಶೀಲಿಸಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಪ್ರಮುಖ ವಹಿವಾಟು ಪ್ರದೇಶಗಳಲ್ಲಿ ಒಂದಾಗಿರುವ ಕೋರಮಂಗಲವನ್ನು ಹಾದುಹೋಗುವ ಈ ಮಾರ್ಗದಲ್ಲಿ ನಾಲ್ಕು ಇಂಟರ್‌ಚೇಂಜ್‌ಗಳು ಇರಲಿವೆ. ಹೆಬ್ಬಾಳದಲ್ಲಿ ಕೇಸರಿ ಮತ್ತು ನೀಲಿ ಮಾರ್ಗವನ್ನು ಸಂಪರ್ಕಿಸಲಿದೆ. ಕೆ.ಆ‌ರ್. ಸರ್ಕಲ್‌ನಲ್ಲಿ ನೇರಳೆ ಮಾರ್ಗವನ್ನು, ಡೇರಿ ಸರ್ಕಲ್‌ನಲ್ಲಿ ಗುಲಾಬಿ ಮಾರ್ಗವನ್ನು ಮತ್ತು ಅಗರದಲ್ಲಿ ಮತ್ತೆ ನೀಲಿ ಮಾರ್ಗವನ್ನು ಸಂಪರ್ಕಿಸುವುದರಿಂದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಹೆಚ್ಚಿನ ಅವಕಾಶ ಸಿಗಲಿದೆ. 

Tags:    

Similar News