Mysore News | ಕಾವೇರಿ ನದಿಯಲ್ಲಿ ಮುಳುಗಿ ಅಜ್ಜ, ಇಬ್ಬರು ಮೊಮ್ಮಕ್ಕಳು ಜಲಸಮಾಧಿ

ಕಾವೇರಿ ನದಿಯಲ್ಲಿ ಅಜ್ಜ ಹಾಗೂ ಮೊಮ್ಮಕ್ಕಳು ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮುಳುಗುತ್ತಿದ್ದ ಮೊಮ್ಮಕ್ಕಳನ್ನು ರಕ್ಷಿಸಲು ಹೋಗಿ ಮೂವರೂ ನೀರುಪಾಲಾಗಿದ್ದಾರೆ.;

Update: 2025-03-15 14:24 GMT

ಕಾವೇರಿ ನದಿಯಲ್ಲಿ ಅಜ್ಜ ಹಾಗೂ ಇಬ್ಬರು ಮೊಮ್ಮಕ್ಕಳು ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ. 

ತಿರುಮಕೂಡಲು ಗ್ರಾಮದ ಚೌಡಯ್ಯ(70), ಮೊಮ್ಮಕ್ಕಳಾದ ಭರತ್(13) ಹಾಗೂ ಧನುಷ್(10) ಮೃತಪಟ್ಟವರು. ಮೊಮ್ಮಕ್ಕಳು ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಮೊಮ್ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ ಅಜ್ಜ, ಕೂಡಲೇ ಅವರ ರಕ್ಷಣೆಗಾಗಿ ನೀರಿಗೆ ಇಳಿದಿದ್ದಾರೆ. ಆಗ ಮೂವರೂ ನೀರುಪಾಲಾಗಿದ್ದಾರೆ.

ಮೃತದೇಹಗಳನ್ನು ಟಿ. ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈಚೆಗಷ್ಟೇ ತಿರುಮಕೂಡಲು ಗ್ರಾಮದ ಸಂಗಮದಲ್ಲಿ ಕುಂಭಮೇಳ ಆಯೋಜಿಸಲಾಗಿತ್ತು. ಸಹಸ್ರಾರು ಜನರು ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದರು. 

ಪೋಷಕರ ಆಕ್ರಂಧನ

ಅಜ್ಜ ಮತ್ತು ಮೊಮ್ಮಕ್ಕಳ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಮೃತದೇಹಗಳನ್ನು ಹೊರತೆಗೆದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯ ಬಳಿ ಗ್ರಾಮಸ್ಥರು ಹಾಗೂ ಸಂಬಂಧಿಕರು ಜಮಾಯಿಸಿದ್ದರು.

Tags:    

Similar News