ಹಳದಿ ಮಾರ್ಗದ ಪ್ರಯಾಣಿಕರಿಗೆ ಸಿಹಿಸುದ್ದಿ: ಬೆಂಗಳೂರಿಗೆ 6ನೇ ಮೆಟ್ರೋ ಬೋಗಿ ಆಗಮನ

ಪ್ರಸ್ತುತ, ಹಳದಿ ಮಾರ್ಗದಲ್ಲಿ ರೈಲುಗಳ ನಡುವಿನ ಅಂತರ (ಹೆಡ್‌ವೇ) 15 ನಿಮಿಷ ಇದೆ. ನವೆಂಬರ್ 1 ರಂದು ಐದನೇ ರೈಲನ್ನು ಸೇರ್ಪಡೆಗೊಳಿಸಿದಾಗ, ಈ ಅಂತರವನ್ನು 19 ನಿಮಿಷಗಳಿಂದ 15 ನಿಮಿಷಕ್ಕೆ ಇಳಿಸಲಾಗಿತ್ತು. ಇದೀಗ ಆರನೇ ರೈಲಿನ ಸೇರ್ಪಡೆಯಿಂದ, ಕಾಯುವ ಸಮಯವು 12-13 ನಿಮಿಷಗಳಿಗೆ ಇಳಿಕೆಯಾಗಲಿದೆ.

Update: 2025-11-18 06:23 GMT

ಈ ಆರನೇ ರೈಲಿನ ನಂತರ, ಇನ್ನೂ ಎರಡು ಹೊಸ ರೈಲುಗಳನ್ನು ಹಳದಿ ಮಾರ್ಗಕ್ಕೆ ಸೇರಿಸಲು ಬಿಎಂಆರ್​​ಸಿಎಲ್​ ಯೋಜಿಸಿದೆ

Click the Play button to listen to article

ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ (ಆರ್‌.ವಿ. ರಸ್ತೆ - ಬೊಮ್ಮಸಂದ್ರ) ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಮತ್ತು ನಿರಂತರ ದೂರುಗಳ ಹಿನ್ನೆಲೆಯಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಕ್ರಮ ಕೈಗೊಂಡಿದೆ. ಟಿಟಾಗಢ ರೈಲ್ ಸಿಸ್ಟಮ್ಸ್ ಲಿಮಿಟೆಡ್, ಹಳದಿ ಮಾರ್ಗಕ್ಕಾಗಿ ಆರನೇ ರೈಲಿನ ಮೂರು ಕೋಚ್‌ಗಳನ್ನು ಪಶ್ಚಿಮ ಬಂಗಾಳದಿಂದ ರವಾನಿಸಿದೆ.

ಟಿಟಾಗಢದ ತಯಾರಿಕಾ ಘಟಕದಿಂದ ನೀಲಿ ಬಣ್ಣದ ಟಾರ್ಪಲ್‌ಗಳಲ್ಲಿ ಸುತ್ತಿ, 'ಸಂಧು ಲಾಜಿಸ್ಟಿಕ್ಸ್' ನ ಬಹು-ಆಕ್ಸಲ್ ಟ್ರಕ್‌ಗಳ ಮೂಲಕ ಈ ಕೋಚ್‌ಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಇನ್ನು ಮೂರು ಕೋಚ್‌ಗಳು ಶೀಘ್ರದಲ್ಲೇ ರವಾನೆಯಾಗಲಿದ್ದು, ನವೆಂಬರ್ ಅಂತ್ಯದೊಳಗೆ ಸಂಪೂರ್ಣ ರೈಲು ಸೆಟ್ ನಗರವನ್ನು ತಲುಪುವ ನಿರೀಕ್ಷೆಯಿದೆ ಡಿಸೆಂಬರ್‌ನಲ್ಲಿ ಈ ಹೊಸ ರೈಲನ್ನು ಸೇವೆಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ.

ಕಡಿಮೆಯಾಗಲಿದೆ ಕಾಯುವ ಸಮಯ

ಪ್ರಸ್ತುತ, ಹಳದಿ ಮಾರ್ಗದಲ್ಲಿ ರೈಲುಗಳ ನಡುವಿನ ಅಂತರ (ಹೆಡ್‌ವೇ) 15 ನಿಮಿಷ ಇದೆ. ನವೆಂಬರ್ 1 ರಂದು ಐದನೇ ರೈಲನ್ನು ಸೇರ್ಪಡೆಗೊಳಿಸಿದಾಗ, ಈ ಅಂತರವನ್ನು 19 ನಿಮಿಷಗಳಿಂದ 15 ನಿಮಿಷಕ್ಕೆ ಇಳಿಸಲಾಗಿತ್ತು. ಇದೀಗ ಆರನೇ ರೈಲಿನ ಸೇರ್ಪಡೆಯಿಂದ, ಕಾಯುವ ಸಮಯವು 12-13 ನಿಮಿಷಗಳಿಗೆ ಇಳಿಕೆಯಾಗಲಿದೆ. ಇದು ದಿನನಿತ್ಯ ಪ್ರಯಾಣಿಸುವ, ವಿಶೇಷವಾಗಿ ಐಟಿ ಉದ್ಯೋಗಿಗಳಿಗೆ ದೊಡ್ಡ ಅನುಕೂಲವನ್ನು ಒದಗಿಸಲಿದೆ.

ಪ್ರಯಾಣಿಕರ ಆಕ್ರೋಶದ ಹಿನ್ನೆಲೆ

ಇತ್ತೀಚೆಗೆ, ಬೆಳಗ್ಗೆ 6 ಗಂಟೆಗೆ ಮೆಟ್ರೋ ಸೇವೆ ಆರಂಭವಾಗುವುದನ್ನು ವಿರೋಧಿಸಿ ಆರ್‌‌.ವಿ. ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಸುಮಾರು 35 ನಿಮಿಷಗಳ ಕಾಲ ಸೇವೆ ವ್ಯತ್ಯಯಗೊಂಡಿತ್ತು . ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ರೈಲುಗಳ ಕೊರತೆ ಇರುವುದೇ ಈ ಸಮಸ್ಯೆಗಳಿಗೆ ಮೂಲ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಹೊಸ ರೈಲುಗಳ ಸೇರ್ಪಡೆ ತುರ್ತು ಅಗತ್ಯವಾಗಿತ್ತು.

ಭವಿಷ್ಯದ ಯೋಜನೆ

ಈ ಆರನೇ ರೈಲಿನ ನಂತರ, ಇನ್ನೂ ಎರಡು ಹೊಸ ರೈಲುಗಳನ್ನು ಹಳದಿ ಮಾರ್ಗಕ್ಕೆ ಸೇರಿಸಲು ಬಿಎಂಆರ್​​ಸಿಎಲ್​ ಯೋಜಿಸಿದೆ. ಈ ಎಲ್ಲಾ ರೈಲುಗಳು ಕಾರ್ಯಾರಂಭ ಮಾಡಿದ ನಂತರ, ರೈಲುಗಳ ನಡುವಿನ ಅಂತರವನ್ನು 10 ನಿಮಿಷಗಳಿಗೆ ಇಳಿಸುವ ಗುರಿ ಹೊಂದಲಾಗಿದೆ. ಇದು ಹಳದಿ ಮಾರ್ಗದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಪ್ರಯಾಣಿಕರಿಗೆ ಸುಗಮ ಸಂಚಾರ ಒದಗಿಸಲು ಸಹಕಾರಿಯಾಗಲಿದೆ.

Tags:    

Similar News