Namma Metro | ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ; ವಿವಿಧ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್‌ ಲಭ್ಯ

ಮೆಟ್ರೋ ಪ್ರಯಾಣಿಕರು ಟಿಕೆಟ್‌ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ವ್ಯವಸ್ಥೆಗೆ ಬಿಎಂಆರ್‌ಸಿಎಲ್ ವಿರಾಮ ನೀಡಿದೆ. ಇನ್ನು ಮುಂದೆ ವಿವಿಧ ಆ್ಯಪ್​​ಗಳ ಮೂಲಕ ಟಿಕೆಟ್ ಖರೀದಿಸುವ ಅವಕಾಶವನ್ನು ಪ್ರಯಾಣಿಕರಿಗೆ ಒದಗಿಸಿದೆ.;

Update: 2025-06-26 07:29 GMT

ಸಾಂದರ್ಭಿಕ ಚಿತ್ರ

ʼನಮ್ಮ ಮೆಟ್ರೋʼ ಪ್ರಯಾಣಿಕರು ಇನ್ನು ಮುಂದೆ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸುವ ಪ್ರಮೇಯವಿಲ್ಲ. ಏಕೆಂದರೆ, ವಿವಿಧ ಖಾಸಗಿ ಆ್ಯಪ್​​ಗಳ ಮೂಲಕ ಕ್ಯೂಆರ್‌ ಕೋಡ್‌ ಟಿಕೆಟ್‌ ಪಡೆಯಲು ಬಿಎಂಆರ್‌ಸಿಎಲ್‌ ಅವಕಾಶ ಕಲ್ಪಿಸಿದೆ. 

ಮೆಟ್ರೋ ರೈಲಿನಲ್ಲಿ ಪ್ರತಿನಿತ್ಯ ಸುಮಾರು ಎಂಟು ಲಕ್ಷ ಪ್ರಯಾಣಿಕರು ಸಂಚರಿಸುತ್ತಿರುವುದರಿಂದ ಮೆಟ್ರೊ ನಿಲ್ದಾಣಗಳಲ್ಲಿ ಟಿಕೆಟ್‌ ಪಡೆಯಲು ಜನರು ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಬೇಕಾಗಿದೆ. ಇದಕ್ಕಾಗಿ ಸಮಯವೂ ವ್ಯರ್ಥವಾಗುತ್ತಿರುವುದಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.

ಐದು ಆ್ಯಪ್‌ಗಳಲ್ಲಿ ಟಿಕೆಟ್‌

ಬಿಎಂಆರ್‌ಸಿಎಲ್‌ ಮೊದಲ ಹಂತದಲ್ಲಿ ಐದು ಆ್ಯಪ್​​ಗಳ ಮೂಲಕ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶ ನೀಡಿದೆ. 

ರೆಡ್ ಬಸ್, ಔಟ್ ಪಾಥ್, ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ಹೈವೇ ಡಿಲೈಟ್ ಸೇರಿದಂತೆ ಒಟ್ಟು ಐದು ಆ್ಯಪ್​​ಗಳ ಮೂಲಕ ಖರೀದಿಸಬಹುದಾಗಿದೆ. ಈ ಆ್ಯಪ್​ಗಳಲ್ಲಿ ಟಿಕೆಟ್ ಬುಕ್ ಮಾಡಿದರೆ ಶೇ 20ರಿಂದ 30 ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.  

ಇನ್ನೂ ಎರಡು ಆ್ಯಪ್‌ಗಳಲ್ಲಿ ಪ್ರಯೋಗ

ಈಗ ಕೇವಲ ವಾಟ್ಸ್​ಆ್ಯಪ್​ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ರಾಪಿಡೊ ಹಾಗೂ ನಮ್ಮ ಯಾತ್ರಿ ಆ್ಯಪ್​​ಗಳಲ್ಲಿ ಮೆಟ್ರೋ ಟಿಕೆಟ್ ವಿತರಣೆಗೆ ಪರೀಕ್ಷೆ ನಡೆಸಲಾಗುತ್ತಿದೆ. ಟಿಕೆಟ್​ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tags:    

Similar News