Ghibli Art| ಚಿಪ್ಪು ಹಿಡಿದ ಸಿಎಂ ಸಿದ್ದರಾಮಯ್ಯ! ಇದು ಬಿಜೆಪಿ ಸೃಷ್ಟಿಸಿದ ಘಿಬ್ಲಿ ಇಮೇಜ್; ಯಾಕೆ ಈ ಚಿತ್ರ?
ಬೆಲೆ ಏರಿಕೆ ಮತ್ತು ಆಡಳಿತ ವೈಫಲ್ಯಗಳ ಕುರಿತು ಜನರ ಗಮನ ಸೆಳೆಯಲು AI-ನಿಂದ ರಚಿಸಲಾದ ಘಿಬ್ಲಿ ಶೈಲಿಯ ಆಕರ್ಷಕ ಚಿತ್ರಗಳನ್ನು ಬಳಸಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ಧ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯ ದಾಳಿ ನಡೆಸುತ್ತಿದೆ.;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘಿಬಿ ಸಿನಿಮಾ
ಘಿಬ್ಲೀ ಇತ್ತೀಚಿನ ಜನಪ್ರಿಯ ಟ್ರೆಂಡ್. ಕೃತಕ ಬುದ್ಧಿಮತ್ತೆಯನ್ನು ಬಳಸಿ ಎಲ್ಲರೂ ತಮ್ಮತಮ್ಮ ಘಿಬ್ಲೀ ಇಮೇಜ್ ಸೃಷ್ಟಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಒಂದು ಎಐ ಟೂಲ್ ಇದೀಗ ರಾಜಕೀಯ ಸಮರಕ್ಕೂ ವೇದಿಕೆಯಾಗಿದೆ. ಕರ್ನಾಟಕ ಬಿಜೆಪಿ ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಲು ಸಿಎಂ ಸಿದ್ದರಾಮಯ್ಯ ಅವರ ಘಿಬ್ಲೀ ಇಮೇಜ್ ಕ್ರಿಯೇಟ್ ಮಾಡಿ ಹಂಚಿಕೊಂಡಿದ್ದಾರೆ.
ಬೆಲೆ ಏರಿಕೆ ನೀತಿ ಮತ್ತು ಆಡಳಿತ ವೈಫಲ್ಯಗಳ ಕುರಿತು ಜನರ ಗಮನ ಸೆಳೆಯಲು ಘಿಬ್ಲಿ ಶೈಲಿಯ ಆಕರ್ಷಕ ಚಿತ್ರಗಳನ್ನು ಬಳಸಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರದ ವಿರುದ್ಧ ಬಿಜೆಪಿ ದಾಳಿ ನಡೆಸುತ್ತಿದೆ. ತಂತ್ರಜ್ಞಾನ ಮತ್ತು ರಾಜಕೀಯದ ಈ ಹೊಸ ಸಂಯೋಜನೆ ಕರ್ನಾಟಕದ ಮತದಾರರಿಗೆ ಕಚಗುಳಿ ಇಡುತ್ತಿದೆ.
ಪೋಸ್ಟ್‌ಗಳನ್ನು ನೋಡಿ
ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಬಿಜೆಪಿಯು ಆಹೋರಾತ್ರಿ ಪ್ರತಿಭಟನೆ ಆರಂಭ ಮಾಡಿದೆ. ಇಷ್ಟು ಸಾಲದಂತೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕವೂ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಎಐ ಟೂಲ್ ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಲಿ ತೆಂಗಿನಕಾಯಿ ಚಿಪ್ಪು ಹಿಡಿದಿರುವ ಚಿತ್ರವನ್ನು ರಚಿಸಿ ಪೋಸ್ಟ್ ಮಾಡಿದೆ. ಅದಕ್ಕೆ ;ಕರ್ನಾಟಕಕ್ಕೆ ಕೊಡುಗೆಗಳ ಜೊತೆಗೆ ಕರ್ನಾಟಕದ ಮುಖ್ಯಮಂತ್ರಿಯ ಚಿತ್ರ" ಎಂಬ ಶೀರ್ಷಿಕೆ ನೀಡಿದೆ.
ಇನ್ನೊಂದು ಕೃತಕಬುದ್ಧಿಮತ್ತೆ ನಿರ್ಮಿತ ಮೀಮ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಹಾಲಿವುಡ್ ನಟ ವಿನ್ ಡೀಸೆಲ್‌ಗೆ ಹೋಲಿಸಿ, ಇಂಧನ ಬೆಲೆ ಏರಿಕೆಯನ್ನು ಪರೋಕ್ಷವಾಗಿ ಖಂಡಿಸಿದ್ದಾರೆ. ʻದುಬಾರಿ ಡೀಸೆಲ್ʼ ಎಂಬ ಶೀರ್ಷಿಕೆ ನೀಡಲಾಗಿದೆ.
ಇನ್ನೊಂದು ಅನಿಮೇಷನ್ ವೀಡಿಯೋದಲ್ಲಿ, ಸಿದ್ದರಾಮಯ್ಯ ಅವರನ್ನು ಶಿಕ್ಷಕರಂತೆ ತೋರಿಸಿ, ಕರ್ನಾಟಕ ಸರ್ಕಾರದ ವಿವಿಧ ನೀತಿಗಳನ್ನು ವರ್ಣಿಸಲಾಗಿದೆ. ಈ ವಿಡಿಯೋದಲ್ಲಿ 'A' ಎಂದರೆ (Alcohol) ಮದ್ಯ ಮತ್ತು ಆಸ್ತಿ ತೆರಿಗೆ, 'B' ಎಂದರೆ (BUS) ಬಸ್ ದರ ಹೆಚ್ಚಳ ಮತ್ತು 'C' ಎಂದರೆ (Current) ವಿದ್ಯುತ್ ದರ ಏರಿಕೆ ಎಂಬ ಪರಿಕಲ್ಪನೆಯನ್ನು ಚಿತ್ರಿಸಲಾಗಿದೆ.
ಮಂಗಳವಾರ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ (ಕೆಎಸ್‌ಟಿ)ಯನ್ನು 18.4% ರಿಂದ 21.17% ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಡೀಸೆಲ್ ಬೆಲೆಗಳು ಲೀಟರ್‌ಗೆ 88.99 ರೂಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 102.92ರೂ ಆಗಿದೆ. ಬೆಲೆ ಏರಿಕೆಯು ಕರ್ನಾಟಕದಾದ್ಯಂತ ಕಳವಳವನ್ನು ಹುಟ್ಟುಹಾಕಿದೆ.
ಪೊಲೀಸರಿಂದಲೂ ಬಳಕೆ
ಪೊಲೀಸ್ ಇಲಾಖೆ, ಸವಾರನೊಬ್ಬ ಬೈಕ್ ವೀಲಿಂಗ್ ಮಾಡುತ್ತಿರುವ ದೃಶ್ಯವನ್ನು ಘಿಬ್ಲಿ ಶೈಲಿಯಲ್ಲಿ ಚಿತ್ರಿಸಿ, "ಘಿಬ್ಲಿಯ ವಿಚಿತ್ರ ಜಗತ್ತಿನಲ್ಲಿಯೂ ಸಹ ವೀಲಿಂಗ್ ಕಾಲ್ಪನಿಕ ಕಥೆಯಲ್ಲ - ಇದು ಅಪಾಯಕಾರಿ ಮತ್ತು ಶಿಕ್ಷಾರ್ಹ ಅಪರಾಧ ಎಂಬ ಎಚ್ಚರಿಕೆ ನೀಡಿದೆ. ಇದಕ್ಕೆ ಜೊತೆಗೆ ಬೆಂಗಳೂರಿನ ರಸ್ತೆಗಳಲ್ಲಿ ಸ್ಟಂಟ್ ರೈಡಿಂಗ್ ಮಾಡಿ ಬಂಧನಕ್ಕೆ ಒಳಗಾದವರ ಚಿತ್ರಗಳನ್ನೂ ಪೋಸ್ಟ್ ಮಾಡಲಾಗಿದೆ.
ಏನಿದು ಘಿಬ್ಲಿ ಟ್ರೆಂಡ್
ವಿಶ್ವದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಘಿಬ್ಲಿ ಟ್ರೆಂಡ್ ಈಗ ಜನಸಾಮಾನ್ಯರವರೆಗೂ ಗೀಳು ವ್ಯಾಪಿಸಿದೆ. ತಮ್ಮ ಮತ್ತು ಇತರರ ಫೋಟೋಗಳನ್ನು ಎಐ ಆ್ಯನಿಮೇಟೆಡ್ ಚಿತ್ರಗಳಾಗಿ ಮಾರ್ಪಡಿಸುತ್ತಿದ್ದಾರೆ. ಜಪಾನ್‌ನ ಹೆಸರಾಂತ ಆ್ಯನಿಮೇಶನ್ ಸ್ಟುಡಿಯೋ ಘಿಬ್ಲಿ ಮಾದರಿಯಲ್ಲಿ ಜನಪ್ರಿಯ ಎಐ ಚಾಟ್‌ಬಾಟ್ ಚಾಟ್‌ಜಿಪಿಟಿ ಘಿಬ್ಲಿ ಎಂಬ ಎಐ ಆ್ಯನಿಮೇಟೆಡ್ ಚಿತ್ರಗಳನ್ನು ಕ್ಷಣಮಾತ್ರದಲ್ಲಿ ಜನರೇಟ್ ಮಾಡುವ ಆ್ಯಪ್ ಪರಿಚಯಿಸುವ ಮೂಲಕ ಈ ಟ್ರೆಂಡ್‌ನ್ನು ಹುಟ್ಟುಹಾಕಿತ್ತು. ಸದ್ಯ ಪ್ರತಿಯೊಬ್ಬರೂ ಘಿಬ್ಲಿ ಟ್ರೆಂಡ್‌ನ ಹಿಂದೆ ಬಿದ್ದಿದ್ದಾರೆ. ತಮ್ಮ ಇತ್ತೀಚಿನ ಮತ್ತು ಹಳೆಯ ಫೋಟೋಗಳನ್ನಲ್ಲದೆ ಸ್ನೇಹಿತರು ಮತ್ತು ಕುಟುಂಬದವರ ಜತೆಗಿನ ಫೋಟೋಗಳನ್ನು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಘಿಬ್ಲಿ ಆ್ಯನಿಮೇಟೆಡ್ ಫೋಟೋಗಳನ್ನು ಜನರೇಟ್ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.