Sankranti 2025 | ಮೋಡ ಮುಸುಕಿದ ವಾತಾವರಣ: ಗವಿಗಂಗಾಧರೇಶ್ವರನಿಗೆ ಆಗದ ಸೂರ್ಯಸ್ನಾನ

Sankranti 2025: ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಗವಿ ಗಂಗಾಧರೇಶ್ವರ ಸ್ವಾಮಿಯನ್ನು ಸೂರ್ಯರಶ್ಮಿ ಸ್ಪರ್ಶಿಸಲಿಲ್ಲ.;

Update: 2025-01-14 13:50 GMT
ಗವಿಗಂಗಾಧರೇಶ್ವರ ದೇವಾಲಯ

ಬೆಂಗಳೂರಿನ ಗವಿಪುರಂನಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಗೆ ಮಕರ ಸಂಕ್ರಾಂತಿಯ ದಿನ ಸೂರ್ಯರಶ್ಮಿ ಸ್ಪರ್ಶಿಸದ ಕಾರಣ ಭಕ್ತರಿಗೆ ನಿರಾಶೆ ಎದುರಾಯಿತು.

ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇದ್ದುದರಿಂದ ಸೂರ್ಯರಶ್ಮಿ  ಶಿವಲಿಂಗಕ್ಕೆ ಸ್ಪರ್ಷವಾಗಿಲ್ಲ. ಮಂಗಳವಾರ ಮಧ್ಯಾಹ್ನ ಕೆಲ ಹೊತ್ತು ಸೂರ್ಯ ಇಣುಕಿದರೂ ಮತ್ತೆ ಮೊಡಗಳ ಮಧ್ಯೆ ಮರೆಯಾದ. ಗವಿ ಗಂಗಾಧರೇಶ್ವರ ದೇವಾಲಯದ ಶಿವಲಿಂಗದ ಮೇಲೆ 5.13ಕ್ಕೆ ಸೂರ್ಯರಶ್ಮಿ ತಾಕಬೇಕಿತ್ತು. ಆದರೆ, ಮೋಡಗಳ ಚದುರದ ಹಿನ್ನೆಲೆಯಲ್ಲಿ ಸೂರ್ಯನ ಬೆಳಕು ಬಿದ್ದಿಲ್ಲ.

ಇನ್ನು ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯರಶ್ಮಿ ಬೀಳುವ ಚಮತ್ಕಾರ ಕಣ್ತುಂಬಿಕೊಳ್ಳಲು ನೆರೆದಿದ್ದ ಸಾವಿರಾರು ಭಕ್ತರು ನಿರಾಶೆಯಿಂದ ವಾಪಸಾದರು.

ದೇಗುಲ ಬಲಭಾಗದ ಕಮಾನಿನಿಂದ ಕಿಟಕಿಯಿಂದ ಸೂರ್ಯ ರಶ್ಮಿ ಪ್ರವೇಶ ಮಾಡಬೇಕಿತ್ತು. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದ ಇತಿಹಾಸದಲ್ಲಿ ಈ ವರ್ಷವೂ ಸೇರಿದಂತೆ ಒಟ್ಟು ಸೇರಿ ಮೂರು ಬಾರಿ ಸೂರ್ಯರಶ್ಮಿ ಸ್ಪರ್ಶಿಸಿಲ್ಲ.

ಗವಿ ಗಂಗಾಧರೇಶ್ವರ  ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶಿಸುವ ಮೂಲಕ ಸೂರ್ಯ ತನ್ನ ಪಥ ಬದಲಿಸುತ್ತಿದ್ದ ಎಂಬುದು ಭಕ್ತರ ನಂಬಿಕೆ. ಸಂಕ್ರಾಂತಿಯಂದು ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ಸಂದರ್ಭದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ತಾಕುತ್ತಿತ್ತು. ಹಾಗಾಗಿ ಸಂಕ್ರಾಂತಿಯ ದಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ಮಾಡಲಾಗಿತ್ತು. ಇಂದು ಬೆಳಿಗ್ಗೆ 5 ರಿಂದಲೇ ಗವಿಗಂಗಾಧರೇಶ್ವರ ಸ್ವಾಮಿಗೆ ಪುಷ್ಪಾಭಿಷೇಕ, ಮಹಮಂಗಳಾರತಿ, ಪಂಚಾಭೀಷೇಕ ಮಾಡಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶಿವಲಿಂಗದ ಮೇಲೆ ಸೂರ್ಯರಶ್ಮಿ ಬೀಳುವುದನ್ನು ವೀಕ್ಷಿಸಲು ಭಕ್ತರಿಗಾಗಿ ಎಲ್‌ಇಡಿ ಪರದೆಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.

16 ನೇ ಶತಮಾನದಲ್ಲಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಗವಿ ಗಂಗಾಧರೇಶ್ವರ ದೇವಾಲಯವನ್ನು ನವೀಕರಿಸಿದ್ದರು. ಮಕರಸಂಕ್ರಾಂತಿ ದಿನ ಸೂರ್ಯ ತನ್ನ ಪಥವನ್ನು ಬದಲಾಯಿಸುವಾಗ ಸೂರ್ಯ ಕಿರಣ ದೇವಾಲಯದ ಸ್ತಂಭದ ಮೇಲೆ ಪ್ರತಿಫಲನಗೊಂಡು ಶಿವಲಿಂಗದ ಮೇಲೆ ಬೀಳುವಂತೆ  ದೇವಾಲಯವನ್ನು ನಿರ್ಮಿಸಲಾಗಿತ್ತು.

Tags:    

Similar News