ಎಮರ್ಜೆನ್ಸಿ ಸಿನಿಮಾ| ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ; ಕಂಗನಾ

ಬಾಲಿವುಡ್​ ನಟಿ, ರಾಜಕಾರಣಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿʼ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ.;

Update: 2024-09-06 11:14 GMT
ಕಂಗನಾ ರಣಾವತ್‌ ನಟನೆಯ ಎಮರ್ಜೆನ್ಸಿ ಸಿನಿಮಾವನ್ನು ಮುಂದೂಡಲಾಗಿದೆ.
Click the Play button to listen to article

ಬಾಲಿವುಡ್​ ನಟಿ, ರಾಜಕಾರಣಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿʼ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದ್ದು, ಶೀಘ್ರವೇ ಹೊಸ ಬಿಡುಗಡೆ ದಿನಾಂಕವನ್ನು  ಘೋಷಿಸಲಾಗುವುದು ಎಂದು ಕಂಗನಾ ರಣಾವತ್‌ ತಿಳಿಸಿದ್ದಾರೆ. 

ಕಂಗನಾ ರಣಾವತ್​​​ ಈ ಪೊಲಿಟಿಕಲ್​ ಪೀರಿಯಡ್​ ಡ್ರಾಮಾವನ್ನು ಬರೆದು, ಸಹ-ನಿರ್ಮಿಸಿ, ನಿರ್ದೇಶನ ಮಾಡಿ ​​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶುಕ್ರವಾರ ದೇಶದಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರತಯಾರಕರಿನ್ನೂ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್​​ಸಿ)ನಿಂದ ಅನುಮತಿ ಪಡೆದಿಲ್ಲ ಮತ್ತು ಸಿನಿಮಾ ಪ್ರಸ್ತುತ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ.

ಸಿನಿಮಾ ಬಿಡುಗಡೆ ಮುಂದೂಡಿಕೆ ಬಗ್ಗೆ ಕಂಗನಾ ರಣಾವತ್​​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, "ನನ್ನ ನಿರ್ದೇಶನದ 'ಎಮರ್ಜೆನ್ಸಿʼ  ಸಿನಿಮಾವನ್ನು ಮುಂದೂಡಲಾಗಿದೆ ಎಂದು ನಾನು ಭಾರವಾದ ಹೃದಯದಿಂದ ಘೋಷಿಸುತ್ತೇನೆ. ನಾವು ಇನ್ನೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಕ್ಕಾಗಿ ಕಾಯುತ್ತಿದ್ದೇವೆ, ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು, ನಿಮ್ಮ ತಿಳುವಳಿಕೆ ಮತ್ತು ತಾಳ್ಮೆಗೆ ಧನ್ಯವಾದಗಳು" ಎಂದು ಪೋಸ್ಟ್‌ ಮಾಡಿದ್ದಾರೆ. 

ಶಿರೋಮಣಿ ಅಕಾಲಿ ದಳ ಸೇರಿದಂತೆ ಸಿಖ್ ಸಂಘಟನೆಗಳು ತಮ್ಮ ಸಮುದಾಯವನ್ನು ಸರಿಯಾಗಿ ತೋರಿಸಿಲ್ಲ ಮತ್ತು ಸತ್ಯಾಂಶವನ್ನು ಪ್ರದರ್ಶಿಸಿಲ್ಲ ಎಂದು ಆರೋಪಿಸಿದ್ದು, 'ಎಮರ್ಜೆನ್ಸಿ' ಈಗ ವಿವಾದಕ್ಕೆ ಸಿಲುಕಿದೆ.   ಬುಧವಾರ ಬಾಂಬೆ ಹೈಕೋರ್ಟ್ ಮಧ್ಯಪ್ರದೇಶ ಹೈಕೋರ್ಟ್ ನೀಡಿದ ನಿರ್ದೇಶನದ ಹಿನ್ನೆಲೆಯಲ್ಲಿ ಯಾವುದೇ ತುರ್ತು ಪರಿಹಾರವನ್ನು ಕೊಡಲು ನಿರಾಕರಿಸಿತ್ತು. ಸೆನ್ಸಾರ್ ಮಂಡಳಿಯು ಈ ಎಮರ್ಜೆನ್ಸಿ ಸಿನಿಮಾವನ್ನು ಪ್ರಮಾಣೀಕರಿಸುವ ಮೊದಲು ಕೇಳಿಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿದೆ.

ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ ಮತ್ತು ಮಿಲಿಂದ್ ಸೋಮನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದು, ಮುಂದಿನ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

Tags:    

Similar News