ಡಾ.ಜಿ. ಪರಮೇಶ್ವರ ದ್ರಾಕ್ಷಿ, ಗೋಡಂಬಿ ಹೋಮ್ ಮಿನಿಸ್ಟರ್; ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್!
ಡಾ.ಜಿ. ಪರಮೇಶ್ವರ ದ್ರಾಕ್ಷಿ, ಗೋಡಂಬಿ ಹೋಮ್ ಮಿನಿಸ್ಟರ್ ಆಗಿದ್ದಾರೆ ಎಂದು ಬೆಂಗಳೂರು ಮಾಜಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೇಳಿದ್ದಾರೆ.;
ಡಾ.ಜಿ. ಪರಮೇಶ್ವರ ದ್ರಾಕ್ಷಿ, ಗೋಡಂಬಿ ಹೋಮ್ ಮಿನಿಸ್ಟರ್ ಆಗಿದ್ದಾರೆ ಎಂದು ಬೆಂಗಳೂರು ಮಾಜಿ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅತಿ ದೊಡ್ದ ಬಾಂಬ್ ಬ್ಲಾಸ್ಟ್ ಪ್ರಕರಣ ನಡೆದಿದೆ. ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಪ್ರಯತ್ನ ಮಾಡಿದ್ದರು. ಇದು ಅತ್ಯಂತ ದೊಡ್ಡ ವಿಚಾರವಾಗಿದ್ದು, ಇದರಲ್ಲಿ ಬೇಹುಗಾರಿಕೆ ವೈಫಲ್ಯ ಆಗಿರುವುದು ಕಂಡುಬಂದಿದೆ ಎಂದರು.
ರಾಜ್ಯ ಪೊಲೀಸ್ ಇಲಾಖೆ ರಕ್ಷಣೆ ನೀಡುವಲ್ಲಿ ವಿಫಲ ಆಗಿದೆ. ಸಿಸಿಬಿ ಇಂದನೇ ಕ್ರೈಂ ಜಾಸ್ತಿ ಆಗುತ್ತಿದೆ. ಸಿಸಿಬಿ ಬಂದ್ ಮಾಡಿದ್ರೆ ಕ್ರೈಂ ಕಡಿಮೆ ಆಗುತ್ತದೆ. ಸಿಸಿಬಿಯೇ ವಸೂಲಿ ಮಾಡಿಕೊಂಡು ಬಾ ಎಂದು ಕಳಿಸಿಕೊಡುತ್ತದೆ. ಸಿಸಿಬಿಯಿಂದ ಏನು ಸಹಾಯ ಆಗಿದೆ ಹೇಳಿ? ಎನ್ನುತ್ತಾ ಸಿಸಿಬಿ ಮೇಲೆ ಮಾಜಿ ಕಮೀಷನರ್ ಭಾಸ್ಕರ ರಾವ್ ಗಂಭೀರ ಆರೋಪ ಮಾಡಿದರು.
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಪ್ರತಿ ವರ್ಷ 1,500 ರಿಂದ 2,000 ಪೇದೆಗಳು ನಿವೃತ್ತಿ ಆಗುತ್ತಿದ್ದಾರೆ. ಆದರೆ, ಹೊಸದಾಗಿ ಭರ್ತಿ ಮಾಡ್ತಾ ಇಲ್ಲ. ಪರಿಣಾಮಕಾರಿಯಾಗಿ ಗೃಹ ಸಚಿವರು ಕೆಲಸ ಮಾಡ್ತಾ ಇಲ್ಲ. ಇವರು ದ್ರಾಕ್ಷಿ, ಗೋಡಂಬಿ ಹೋಮ್ ಮಿನಿಸ್ಟರ್ ಆಗಿದ್ದಾರೆ. ಪರಮೇಶ್ವರ ಹೋಮ್ ಮಿನಿಸ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರದಿಂದ ನಿರ್ಭಯ ಯೋಜನೆಯಡಿ ರಾಜ್ಯಕ್ಕೆ ಮತ್ತು ಬೆಂಗಳೂರಿಗೆ ಹಣ ಬಂದರೂ ಅದನ್ನು ಸರಿಯಾಗಿ ಖರ್ಚು ಮಾಡುತ್ತಿಲ್ಲ. ಹೆಣ್ಣು ಮಕ್ಕಳು ರಾತ್ರಿ ಒಬ್ಬರೆ ನಡೆದು ಹೋಗಬಹುದು ಎಂದು ಯಾರಾದರೂ ಅಭಯ ನೀಡ್ತಾರಾ? ಹೋಮ್ ಮಿನಿಸ್ಟರ್ ಸಂಪೂರ್ಣ ವಿಫಲ ಆಗಿದ್ದಾರೆ. ರಾಷ್ಟ್ರೀಯ ಪಕ್ಷದ ಕಚೇರಿಗೆ ಬಾಂಬ್ ಹಾಕೋಕೆ ಬರ್ತಾರೆ ಎಂದರೆ ಏನು ಅರ್ಥ? ಎಂದು ಪ್ರಶ್ನೆ ಮಾಡಿದರು.