ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: ಸಾಕ್ಷಿ ಭೀಮನ ಬಗ್ಗೆ ಬೆಂಗಳೂರಲ್ಲಿ ವಿಚಾರಣೆ ಶುರು

ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆತನ ಹೇಳಿಕೆಯ ಹಿಂದಿನ ಸಂಚು ಬೆಂಗಳೂರಿನಲ್ಲೇ ಸೃಷ್ಟಿಯಾಗಿರಬಹುದು ಎಂಬ ಧರ್ಮಸ್ಥಳ ಪರವಾಗಿರುವವರ ಆರೋಪ;

Update: 2025-09-01 02:30 GMT

ಮಾಸ್ಕ್‌ ಮ್ಯಾನ್‌ 

ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆತನ ಹೇಳಿಕೆಯ ಹಿಂದಿನ ಸಂಚು ಬೆಂಗಳೂರಿನಲ್ಲೇ ಸೃಷ್ಟಿಯಾಗಿರಬಹುದು ಎಂಬ ಧರ್ಮಸ್ಥಳ ಪರವಾಗಿರುವವರ ಆರೋಪದ ಮೇಲೆ ಎಸ್‌ಐಟಿ ತನಿಖೆ ನಡೆಸಲು ಆರಂಭಿಸಿದೆ.

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಸಾಕ್ಷಿ ಮತ್ತು ಆರೋಪಿ ಎನ್ನಲಾದ ಭೀಮನನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತಂದಿದೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಬೆಂಗಳೂರಿನಲ್ಲಿಯೇ ಷಡ್ಯಂತ್ರ ರೂಪಿಸಲಾಗಿತ್ತೇ ಎಂಬ ಅನುಮಾನದ ಮೇಲೆ ತನಿಖೆ ಚುರುಕುಗೊಂಡಿದೆ. ಅದೇ ರೀತಿ ದೆಹಲಿಗೂ ಕರೆದೊಯ್ಯು ಸಾಧ್ಯತೆಗಳಿವೆ ಎನ್ನಲಾಗಿದೆ.

ಚಿನ್ನಯ್ಯ ನೀಡಿದ ಹೇಳಿಕೆಗಳ ಆಧಾರದ ಮೇಲೆ, ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ಮಹಜರು ನಡೆಸುತ್ತಿದ್ದಾರೆ. ನಗರದ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರದಲ್ಲಿರುವ ಸಾಮಾಜಿಕ ಹೋರಾಟಗಾರ ಜಯಂತ್ ಅವರ ಮನೆಗೆ ಚಿನ್ನಯ್ಯನನ್ನು ಕರೆದೊಯ್ಯಲಾಗಿದೆ. ಅಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಮಹಜರು ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಚಿನ್ನಯ್ಯ ಈ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಜಯಂತ್ ಅವರ ಮನೆಯಲ್ಲಿ ತಂಗಿದ್ದ ಎನ್ನಲಾಗಿದೆ

ತನಿಖೆ ಯಾವ ಕಾರಣಕ್ಕೆ

ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆತನ ಹೇಳಿಕೆಯ ಹಿಂದಿನ ಸಂಚು ಬೆಂಗಳೂರಿನಲ್ಲೇ ಸೃಷ್ಟಿಯಾಗಿರಬಹುದು ಎಂಬ ಧರ್ಮಸ್ಥಳ ಪರವಾಗಿರುವವರ ಆರೋಪದ ಮೇಲೆ ಎಸ್‌ಐಟಿ ತನಿಖೆ ನಡೆಸಲು ಆರಂಭಿಸಿದೆ. ಭೀಮ ಬೆಂಗಳೂರಿನಲ್ಲಿದ್ದಾಗ ಯಾರೆಲ್ಲರನ್ನು ಭೇಟಿಯಾಗಿದ್ದ, ಯಾವೆಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆದಿತ್ತು ಎಂಬುದನ್ನು ಗುರುತಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಕಾಮಾಕ್ಷಿಪಾಳ್ಯ ಮತ್ತು ಸಹಕಾರ ನಗರದಲ್ಲಿಯೂ ಅವರು ಕೆಲವರನ್ನು ಭೇಟಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ಹಿಂದೆ ವ್ಯವಸ್ಥಿತವಾದ ಜಾಲವೊಂದು ಕೆಲಸ ಮಾಡಿರುವ ಶಂಕೆ ಇದ್ದು, ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿಯೂ ಇದರ ಬೇರುಗಳು ಹರಡಿರಬಹುದು ಎಂದು ಧರ್ಮಸ್ಥಳ ಪರ ಕೆಲವರು ವಾದಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಎಸ್​ಐಟಿ ಈಗ ತನಿಖೆ ನಡೆಸುತ್ತಿದೆ. ಬೆಂಗಳೂರಿನ ಮಹಜರು ಮುಗಿದ ನಂತರ, ಭೀಮನನ್ನು ಮಂಡ್ಯ ಹಾಗೂ ತಮಿಳುನಾಡಿಗೂ ಕರೆದೊಯ್ದು ಹೆಚ್ಚಿನ ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ. ತನಿಖೆಯು ಅತ್ಯಂತ ಕೂಲಂಕಷವಾಗಿ ನಡೆಯುತ್ತಿದ್ದು, ಯಾವುದೇ ಸಣ್ಣ ಅಂಶವನ್ನೂ ಕಡೆಗಣಿಸದಂತೆ ಎಸ್‌ಐಟಿ ಎಚ್ಚರಿಕೆ ವಹಿಸಿದೆ ಎನ್ನಲಾಗಿದೆ.

Tags:    

Similar News