Costal Tension: ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ, 8 ಶಂಕಿತರು ಪೊಲೀಸ್‌ ವಶಕ್ಕೆ

ಸುಹಾಸ್‌ ಶೆಟ್ಟಿ ಇದ್ದ ಕಾರಿಗೆ ಗೂಡ್ಸ್‌ ವಾಹನ ಗುದ್ದಿಸಿ ತಲ್ವಾರ್‌ನಿಂದ ಇರಿದು ಕೊಲೆ ಮಾಡಲಾಗಿತ್ತು. ಆರೋಪಿಗಳ ಪತ್ತೆಗೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್ 5 ತಂಡಗಳನ್ನು ರಚಿಸಿದ್ದರು.;

Update: 2025-05-03 05:12 GMT

ಹತ್ಯೆಯಾದ ಸುಹಾಸ್‌ ಶೆಟ್ಟಿ.

ಮಂಗಳೂರಿನಲ್ಲಿ ಗುರುವಾರ (ಮೇ 1) ರಂದು ನಡೆದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. 

ಸುಹಾಸ್‌ ಶೆಟ್ಟಿ ಇದ್ದ ಕಾರಿಗೆ ಗೂಡ್ಸ್‌ ವಾಹನ ಗುದ್ದಿಸಿ ತಲ್ವಾರ್‌ನಿಂದ ಇರಿದು ಕೊಲೆ ಮಾಡಲಾಗಿತ್ತು. ಸ್ವಲ್ಪ ದೂರದಲ್ಲಿಯೇ ಕೃತ್ಯಕ್ಕೆ ಬಳಸಿದ್ದ ಸ್ವಿಪ್ಟ್‌ ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್ 5 ತಂಡಗಳನ್ನು ರಚಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಮಂಗಳೂರಿನಲ್ಲಿ 8 ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. 

ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ, ಪ್ರಕರಣದ ಪ್ರಮುಖ ಆರೋಪಿಗಳು ಯಾರು ಎಂಬುದರ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. 2022 ರಲ್ಲಿ ನಡೆದ ಫಾಜಿಲ್‌ ಕೊಲೆಗೆ ಪ್ರತೀಕಾರವಾಗಿ ಸುಹಾಸ್‌ ಶೆಟ್ಟಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದ್ದು ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರಿಗೆ ಗೃಹ ಸಚಿವ ಪರಮೇಶ್ವರ್‌ ಭೇಟಿ

ಸುಹಸ್‌ ಶೆಟ್ಟಿ ಕೊಲೆ ನಂತರ ಮಂಗಳೂರು ನಗರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಶನಿವಾರ ಗೃಹ ಸಚಿವ ಪರಮೇಶ್ವರ್‌ ಭೇಟಿ ನೀಡಿ ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪಾಲ್ಗೊಳ್ಳಲಿದ್ದು ಪ್ರಕರಣದ ಮಾಹಿತಿ ಪಡೆಯಲಿದ್ದಾರೆ.    

ನಾಲ್ಕುವರೆ ದಶಕದಲ್ಲಿ 47 ಕೊಲೆ

ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಪ್ರದೇಶ ಪ್ರವಾಸೋದ್ಯಮ, ಬ್ಯಾಂಕಿಂಗ್‌ ಹಾಗೂ ಜ್ಞಾನಾರ್ಜನೆಗೆ ಹೆಸರಾದ ಪ್ರದೇಶ. ಆದರೆ ಕಳೆದ ನಾಲ್ಕುವರೆ ದಶಕದಲ್ಲಿ ಧರ್ಮ ಸಂಘರ್ಷ, ಪ್ರತೀಕಾರದ ಹೆಸರಿನಲ್ಲಿ 47 ಜನರ ಹತ್ಯಯಾಗಿದ್ದು. ಈ ಪೈಕಿ ಬಡ, ಅಮಾಯಕ ಯುವಕರೆ ಹೆಚ್ಚಾಗಿದ್ದಾರೆ. ಅತ್ಯಂತ ಸಣ್ಣ ಪ್ರಕರಣಗಳು ಸಹ ಧರ್ಮ, ಜಾತಿಯ ಹೆಸರಿನಲ್ಲಿ ಸಂಘರ್ಷದತ್ತ ಹೊರಳುತ್ತಿವೆ.

ಬಂದ್‌ಗೆ ಕರೆ, ವಿದ್ಯಾರ್ಥಿಗಳ ಪರದಾಟ

ಹಿಂದೂಪರ ಕಾರ್ಯಕರ್ತ ಸುಹಾಸ್‌ ಶೆಟ್ಟೆ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಕರೆ ನೀಡಿದ್ದ ಜಿಲ್ಲಾ ಬಂದ್‌ನಿಂದಾಗಿ ಖಾಸಗಿ ಸಾರಿಗೆ ವ್ಯವಸ್ತೆ ಸಂಪೂರ್ಣ ಸ್ಥಗಿತಗೊಂಡಿತ್ತು. ಕೆಲವೆಡೆ ಬಸ್​​​ಗಳಿಗೆ ಕಲ್ಲು ತೂರಾಟ ಮಾಡಲಾಗಿದೆ. ಶುಕ್ರವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ಬಿ ಫಾರ್ಮ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಆದರೆ ಬಂದ್‌ಗೆ ಕರೆ ನೀಡಿದ್ದರಿಂದ ಸಾರಿಗೆ ವಾಹನಗಳು ಸೂಕ್ತ ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ಪರದಾಡುವಂತಾಯಿತು.

Tags:    

Similar News