ನಿಗಮ ಮಂಡಳಿ: ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಂಗೀತ ನಿರ್ದೇಶಕ ಸಾಧು ಕೋಕಿಲ ನೇಮಕ
ಮೊದಲ ಪಟ್ಟಿಯಲ್ಲಿ 35 ಶಾಸಕರಿಗೆ ನಿಗಮದ ಅಧ್ಯಕ್ಷತೆ ನೀಡಲಾಗಿತ್ತು, ಇದೀಗ ಎರಡನೇ ಪಟ್ಟಿಯಲ್ಲಿ 44 ಜನ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ, ಮಂಡಳಿ,ಅಕಾಡೆಮಿಗಳಲ್ಲಿ ಅವಕಾಶ ಒದಗಿಸಲಾಗಿದೆ.
ಬೆಂಗಳೂರು: ಇಂದು (ಗುರುವಾರ) ರಾಜ್ಯದ ನಿಗಮ ಮತ್ತು ಮಂಡಗಳಿಗೆ ಅಧ್ಯಕ್ಷರ ನೇಮಕದ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಚಲನಚಿತ್ರ ಅಕಾಡೆಮಿ (Cinema Academy) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕೆಲದಿನಗಳ ಹಿಂದೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಮೊದಲ ಪಟ್ಟಿಯಲ್ಲಿ 35 ಶಾಸಕರಿಗೆ ನಿಗಮದ ಅಧ್ಯಕ್ಷತೆ ನೀಡಲಾಗಿತ್ತು, ಇದೀಗ ಎರಡನೇ ಪಟ್ಟಿಯಲ್ಲಿ 44 ಜನ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ, ಮಂಡಳಿ,ಅಕಾಡೆಮಿಗಳಲ್ಲಿ ಅವಕಾಶ ಒದಗಿಸಲಾಗಿದೆ.
ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದರೆ, ಹಿಂದೆ ಮಹಿಳಾ ಆಯೋಗ ಅಧ್ಯಕ್ಷೆಯಾಗಿದ್ದ ನಾಗಲಕ್ಷ್ಮಿ ಚೌಧರಿ ಅವರಿಗೆ ಮತ್ತದೇ ಹುದ್ದೆಯನ್ನು ನೀಡಿ ಗೌರವಿಸಲಾಗಿದೆ.
ಬುಧವಾರವೇ ಸಿಎಂ ಸಿದ್ದರಾಮಯ್ಯ ಅವರು ಟಿಪ್ಪಣಿಯನ್ನು ಸಹಿ ಮಾಡಿ ಆಯಾ ಇಲಾಖೆಗಳಿಗೆ ಕಳುಹಿಸಿದ್ದರು. ಗುರುವಾರ ಬೆಳಗ್ಗೆ ನಿಗಮ ಮಂಡಳಿ ಪಟ್ಟಿ ಬಿಡುಗಡೆಯಾಗಿದೆ.
ಕಾಂತಾ ನಾಯ್ಕ ಅವರನ್ನು ಕೌಶಲಾಭಿವೃದ್ಧಿ ನಿಗಮಕ್ಕೆ, ಎಚ್.ಸಿ. ಸುಧೀಂದ್ರ ಅವರನ್ನು ತೆಂಗು ಅಭಿವೃದ್ಧಿ ಮಂಡಳಿ, ಮಮತಾ ಗಟ್ಟಿ ಅವರನ್ನು ಗೇರು ಅಭಿವೃದ್ಧಿ ಮಂಡಳಿ, ಜಯಸಿಂಹ ಅವರನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದಾಸರಹಳ್ಳಿ ಕ್ಷೇತ್ರದ ಟಿಕೆಟ್ ತ್ಯಾಗ ಮಾಡಿದ್ದ ಹಿನ್ನೆಲೆಯಲ್ಲಿ ನಾಗಲಕ್ಷ್ಮೀ ಚೌಧರಿ ಅವರನ್ನು ಮಹಿಳಾ ಆಯೋಗಕ್ಕೆ ನೇಮಕ ಮಾಡಲಾಗಿದೆ.
ನಿಗಮ ಮಂಡಳಿ ಯಾರಿಗೆ ಯಾವ ಹುದ್ದೆ?