ಕಾಫಿ ಕೆಫೆಯ ಮಹಿಳೆಯರ ರೆಸ್ಟ್‌ ರೂಮ್‌ನಲ್ಲಿ ಮೊಬೈಲ್‌ ಇಟ್ಟು ಮಹಿಳೆಯರ ವಿಡಿಯೋ ; ಕಾಫಿ ಕೆಫೆ ಸಿಬ್ಬಂದಿ ಬಂಧನ

ಈ ಕೆಫೆಯ ಸಿಬ್ಬಂಧಿಯೇ ಈ ಕೃತ್ಯ ವ್ಯಸಗಿದ್ದು, ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Update: 2024-08-11 08:57 GMT
ಮಹಿಳೆಯರ ವಾಶ್‌ರೂಮ್‌ನಲ್ಲಿ ಮೊಬೈಲ್‌ ಇಟ್ಟು ರೆಕಾರ್ಡ್‌ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Click the Play button to listen to article

ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿರುವ ಪ್ರಸಿದ್ಧ ಕಾಫಿ ಶಾಪ್‌ ಥರ್ಡ್ ವೇವ್ ಕಾಫಿ ಕೆಫೆಯ  ಲೇಡಿಸ್‌ ವಾಶ್‌ ರೂಮ್‌ನಲ್ಲಿ ಮೊಬೈಲ್‌ವೊಂದನ್ನು ಬಚ್ಚಿಟ್ಟು ಸುಮಾರು 2 ಗಂಟೆಗಳ ಕಾಲ ಮೊಬೈಲ್‌ ಕ್ಯಾಮೆರಾದಲ್ಲಿ ವಿಡಿಯೊ ರೆಕಾರ್ಡ್‌ ಆಗಿರುವ ಘಟನೆ ನಡೆದಿದೆ. 

ಈ ಕೆಫೆಯ ಸಿಬ್ಬಂಧಿಯೇ ಈ ಕೃತ್ಯ ವ್ಯಸಗಿದ್ದು, ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭದ್ರಾವತಿಯ ಇಪ್ಪತ್ತರ ಆಸುಪಾಸಿನ ವ್ಯಕ್ತಿಯನ್ನು ಐಟಿ ಕಾಯ್ದೆಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಮೊಬೈಲ್ ಫೋನ್ ಅನ್ನು ಮಹಿಳಾ ಶೌಚಾಲಯದಲ್ಲಿ ಬಚ್ಚಿಟ್ಟಿದ್ದು, ಸುಮಾರು ಎರಡು ಗಂಟೆಗಳ ಕಾಲ ವಿಡಿಯೊ ರೆಕಾರ್ಡಿಂಗ್ ಆಗಿದೆ ಎಂದು ‘ಗ್ಯಾಂಗ್ಸ್ ಆಫ್ ಸಿನಿಪುರ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ. “ನಾನು ಬೆಂಗಳೂರಿನ ಥರ್ಡ್ ವೇವ್ ಕಾಫಿ ಕೆಫೆಗೆ ಹೋಗಿದ್ದೆ. ಶೌಚಾಲಯದ ಸೀಟಿಗೆ ಎದುರಾಗಿ ಇರುವ ಕಸದ ಬುಟ್ಟಿಯಲ್ಲಿ ಮೊಬೈಲ್‌ ಫೋನ್‌ ಅಡಗಿಸಿಟ್ಟಿರುವುದು ಕಂಡು ಬಂತು. ಫೋನ್‌ ಫ್ಲೈಟ್‌ ಮೋಡ್‌ನಲ್ಲಿ ಇದ್ದ ಕಾರಣಕ್ಕೆ ಯಾರಿಗೂ ಗೊತ್ತಾಗಿಲ್ಲ. ಡಸ್ಟ್‌ಬೀನ್‌ನಲ್ಲಿ ಸಣ್ಣದೊಂದು ರಂಧ್ರ ಮಾಡಿ, ಫೋನ್‌ ಇಟ್ಟು ಕ್ಯಾಮೆರಾ ಆನ್‌ ಮಾಡಲಾಗಿತ್ತು. ಇದನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಫೋನ್‌ ಇರುವುದು ಗೊತ್ತಾಗಿದೆ. ಆ ಫೋನ್‌ ಅಲ್ಲಿನ ಸಿಬ್ಬಂದಿಯದ್ದು ಎಂದು ಗೊತ್ತಾಯಿತು ಎಂದು ತಿಳಿಸಿದ್ದಾರೆ.

 ಇಂಥಹ ಘಟನೆಗಳಿಂದ ನನಗೆ ಆಘಾತವಾಗಿದೆ. ರೆಸ್ಟೋರೆಂಟ್‌, ಕೆಫೆಗಳು ಎಷ್ಟೋ ಪ್ರಸಿದ್ದವಾಗಿದ್ದರೂ ಇವತ್ತಿನಿಂದ ನಾನು ಯಾವುದೇ ವಾಶ್ ರೂಮ್‌ ಬಳಸಬೇಕಾದರೂ ನೂರು ಸಲ ಯೋಚನೆ ಮಾಡುತ್ತೇನೆ. ನಾನು ಎಲ್ಲರಿಗೂ ಇದೇ ರೀತಿ ಜಾಗರೂಕರಾಗಿರಲು ಸಲಹೆ ನೀಡುತ್ತೇನೆ. ಈ ನಡವಳಿಕೆ ಭಯಾನಕವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. 

ಈ ಘಟನೆಯ ಕುರಿತು ಥರ್ಡ್ ವೇವ್ ಕಾಫಿ ಕೆಫೆ ಎಕ್ಸ್‌ನಲ್ಲಿ ಕ್ಷಮೆ ಕೇಳಿ ಪೋಸ್ಟ್‌ ಮಾಡಿದೆ ʻʻಈ ಕೃತ್ಯ ಎಸಗಿರುವ ಉದ್ಯೋಗಿಯನ್ನು ನಾವು ತಕ್ಷಣವೇ ವಜಾಗೊಳಿಸಿದ್ದೇವೆ.  ನಮ್ಮ ಗ್ರಾಹಕರ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂಲಕ ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ" ಎಂದು ಹೇಳಿದರು. 

ಈ ಘಟನೆ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡಿದ್ದು ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ. ಕಾಫಿ ಶಾಪ್‌ನಲ್ಲಿ ಕಾಫಿ ಮೇಕರ್ ಆಗಿದ್ದ ಭದ್ರಾವತಿ ಮೂಲದ  ಮನೋಜ್ (23) ಎಂಬಾತನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಫೋನ್ ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. 

Tags:    

Similar News