Bangla Infiltration | ಚಿತ್ರದುರ್ಗದಲ್ಲಿ ಆರು ಬಾಂಗ್ಲಾ ಪ್ರಜೆಗಳು ಪೊಲೀಸ್‌ ವಶಕ್ಕೆ

ಪೊಲೀಸರು ಸೋಮವಾರ ಚಿತ್ರದುರ್ಗ ನಗರದ ಗಾರ್ಮೆಂಟ್ಸ್​​​ಗಳ ಮೇಲೆ ದಾಳಿ ಮಾಡಿ ಒಟ್ಟು 15 ಮಂದಿ ಶಂಕಿತ ಬಾಂಗ್ಲಾ ನುಸುಳುಕೋರರನ್ನು ವಶಕ್ಕೆ ಪಡೆದಿದ್ದಾರೆ.

Update: 2024-11-19 07:55 GMT
ಆರು ಜನ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ. 

ಡಿವೈಎಸ್​ಪಿ ದಿನಕರ್ ನೇತೃತ್ವದಲ್ಲಿ ಸಿಪಿಐ ಗುಡ್ಡಪ್ಪ ಮತ್ತು ವೆಂಕಟೇಶ್​ ಅವರು ಅವರು ಸೋಮವಾರ ನಗರದ ಗಾರ್ಮೆಂಟ್ಸ್​​​ಗಳ ಮೇಲೆ ದಾಳಿ ಮಾಡಿದರು. ಈ ವೇಳೆ ಒಟ್ಟು 15 ಮಂದಿ ಶಂಕಿತ ಬಾಂಗ್ಲಾ ನುಸುಳುಕೋರರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೇಕ್​ ಶೈಪುರ ರೆಹಮಾನ್​, ಮಹಮ್ಮದ್​​ ಸುಮನ್​​ ಅಲಿ, ಮಜಾರುಲ್, ಅಜಿಜುಲ್ ಶೇಕ್, ಮಹಮ್ಮದ್ ಸಾಕೀಬ್ ಸಿಕ್ದಾರ್, ಸನೊವರ್ ಹುಸೇನ್ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆ ಎಂದು ತಿಳಿದುಬಂದಿದೆ. 

ಇವರನ್ನು ಪೊಲೀಸ್‌ ವಶಕ್ಕೆ ಪಡೆದಿದ್ದು, ಚಿತ್ರದುರ್ಗದ ಕೋಟೆ, ಗ್ರಾಮಾಂತರ ಠಾಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಬಾಂಗ್ಲಾದೇಶಿಗರ ಬಳಿ ಇದ್ದ ಕಾಗದಪತ್ರಗಳನ್ನು ಪರೀಶೀಲಿಸಿದಾಗ, ಆರೂ ಜನ ಬಾಂಗ್ಲಾದೇಶಕ್ಕೆ ಸೇರಿದ ಪ್ರಜೆಗಳಾಗಿದ್ದು, ಭಾರತಕ್ಕೆ ಬಂದು ಇಲ್ಲಿಯೇ ನೆಲೆಸುವ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆಯೇ ಅಕ್ರಮವಾಗಿ ಭಾರತಕ್ಕೆ ನುಸುಳಿ, ಪಶ್ಚಿಮಬಂಗಾಳ ಮೂಲಕ ಪ್ರವೇಶ ಪಡೆದಿದ್ದಾರೆ ಎಂದು ತಿಳಿದುಬಂದಿದೆ. 

ಕೊಲ್ಕತ್ತಾದಲ್ಲಿ ನಕಲಿ ಆಧಾರ್ ಕಾರ್ಡ್, ಇತರೆ ದಾಖಲೆಗಳನ್ನು ಮಾಡಿಸಿಕೊಂಡು ಭಾರತದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ, ಚಿತ್ರದುರ್ಗ ನಗರದಲ್ಲಿ ಕೆಲಸದ ಉದ್ದೇಶದಿಂದಾಗಿ ಬಂದಿದ್ದ ಮಾಹಿತಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶಿಗರಿಗೆ ಸಂಬಂಧಿಸಿದ ನಕಲಿ ಆಧಾರ್ ಕಾರ್ಡ್‌ ಗಳು, ಮತದಾರರ ಗುರುತಿನ ಚೀಟಿಗಳು, ಲೇಬರ್ ಕಾರ್ಡ್‌ಗಳು, ಬ್ಯಾಂಕ್ ಪಾಸ್ ಬುಕ್‌ಗಳು. ಪಾನ್ ಕಾರ್ಡ್‌ ಗಳು, ಹಾಗೂ ಒಂದು ಪಾಸ್‌ಪೋರ್ಟ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲಸಿದ್ದ ನಾಲ್ವರು ಬಾಂಗ್ಲಾದೇಶ ಪ್ರಜೆಗಳನ್ನು ಇದೇ ವರ್ಷ ಎಪ್ರಿಲ್​ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಇವರ ಬಳಿ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮಜ್ದೂರ್ ಕಾರ್ಡ್, ವೋಟರ್ ಐಡಿ ಪತ್ತೆಯಾಗಿದ್ದವು. ಅಕ್ಟೋಬರ್​ ತಿಂಗಳಲ್ಲಿ ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂಬತ್ತು ಮಂದಿ ಬಾಂಗ್ಲಾದೇಶ ಪ್ರಜೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಾಂಗ್ಲಾದೇಶಿಗರು ಮೀನುಗಾರಿಕಾ ಕಾರ್ಮಿಕರಾಗಿ ಉಡುಪಿಯ ಮಲ್ಪೆಯಲ್ಲಿ ನೆಲೆಸಿದ್ದರು. ಈ ಒಂಬತ್ತು ಮಂದಿ ಬಳಿ ನಕಲಿ ಭಾರತೀಯ ದಾಖಲೆಗಳು ಪತ್ತೆಯಾಗಿದ್ದವು.

ಶಿವಮೊಗ್ಗದ ಜಯನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಏಳು ಮಂದಿ ಬಾಂಗ್ಲಾದೇಶಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಏಳು ಜನರ ಬಳಿ ಮಂಗಳೂರು ವಿಳಾಸದ ಗುರುತಿನ ಚೀಟಿಗಳು ಪತ್ತೆಯಾಗಿದ್ದವು.

Tags:    

Similar News