Childcare| ಅನುದಾನಿತ ಶಿಕ್ಷಕಿಯರಿಗೂ ಶಿಶುಪಾಲನಾ ರಜೆ
Childcare| ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ಆರು ತಿಂಗಳ ರಜೆ ಸೌಲಭ್ಯ ಪಡೆಯಲು ಅವಕಾಶವಾಗಿತ್ತು.;
ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕಿಯರಿಗೂ ಶಿಶುಪಾಲನಾ ರಜೆ (ಸಿಸಿಎಲ್) ಸೌಲಭ್ಯವನ್ನು ವಿಸ್ತರಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಶಿಶುಪಾಲನಾ ರಜೆ ಸೌಲಭ್ಯ ನೀಡಲಾಗಿತ್ತು. ಈ ನಿಯಮದಂತೆ ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ಆರು ತಿಂಗಳ ರಜೆ ಸೌಲಭ್ಯ ಪಡೆಯಲು ಅವಕಾಶವಾಗಿತ್ತು. 2024ರ ಜನವರಿಯಲ್ಲಿ ಅನುದಾನಿತ ಪ್ರೌಢಶಾಲೆಗಳ ಸಿಬ್ಬಂದಿಗೂ ವಿಸ್ತರಿಸಲಾಗಿತ್ತು. ಆದರೆ, ಪ್ರಾಥಮಿಕ ಶಿಕ್ಷಕರಿಗೆ ಸೌಲಭ್ಯ ದೊರೆತಿರಲಿಲ್ಲ.
ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸಲು ಈ ಹಿಂದೆ ಮನವಿ ಮಾಡಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಮತ್ತು ಸಾಕ್ಷರತಾ ಇಲಾಖೆ ಇವರಿಗೆ ಈ ಕುರಿತು ಪತ್ರವನ್ನು ಬರೆಯಲಾಗಿತ್ತು. ಪತ್ರದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಮತ್ತು ನೌಕರರು ಸರ್ಕಾರದ ಅನುದಾನದಿಂದಲೇ ವೇತನ, ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ಸರ್ಕಾರಿ ಮಹಿಳಾ ನೌಕರರ ಮತ್ತು ಅನುದಾನಿತ ಪ್ರೌಢಶಾಲಾ ಮಹಿಳಾ ನೌಕರರ ಕರ್ತವ್ಯದ ಸ್ವರೂಪ ಒಂದೇ ರೀತಿಯಾಗಿದ್ದು, ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸುವ ಕೋರಿಕೆ ಇದೆ ಎಂದು ಹೇಳಿದ್ದರು.